ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಡರ್-19 ವಿಶ್ವಕಪ್ ಫೈನಲ್: ಇಂಗ್ಲೆಂಡ್ 189 ರನ್‌ಗಳಿಗೆ ಆಲೌಟ್, ಭಾರತಕ್ಕೆ 190 ರನ್ ಟಾರ್ಗೆಟ್

India under 19 team

ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ಭಾರತದ ಬೌಲಿಂಗ್ ದಾಳಿಗೆ ನಲುಗಿ ಕೇವಲ 189 ರನ್‌ಗಳಿಗೆ ಆಲೌಟ್ ಆಗಿದೆ.

ಎಡಗೈ ಮಧ್ಯಮ ವೇಗಿ ರವಿ ಕುಮಾರ್ ಮತ್ತು ಬಲಗೈ ವೇಗಿ ರಾಜ್‌ ಬಾವಾ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 44.5 ಓವರ್‌ಗಳಲ್ಲಿ ಸರ್ವಪತನಗೊಂಡಿತು.

ಟೀಂ ಇಂಡಿಯಾ ಏಕದಿನ ಸ್ಕ್ವಾಡ್‌ನಲ್ಲಿ ಬದಲಾವಣೆ: ಇಬ್ಬರು ಆಟಗಾರರು ತಂಡಕ್ಕೆ ಸೇರ್ಪಡೆಟೀಂ ಇಂಡಿಯಾ ಏಕದಿನ ಸ್ಕ್ವಾಡ್‌ನಲ್ಲಿ ಬದಲಾವಣೆ: ಇಬ್ಬರು ಆಟಗಾರರು ತಂಡಕ್ಕೆ ಸೇರ್ಪಡೆ

ಇಂಗ್ಲೆಂಡ್ ಪರ ಜೇಮ್ಸ್ ರೆವ್ 116 ಎಸೆತಗಳಲ್ಲಿ 12 ಬೌಂಡರಿ ಸಹಿತ 95 ರನ್‌ಗಳಿಸಿದ್ದು ಬಿಟ್ಟರೆ, ಬೇರೆ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ತಂಡಕ್ಕೆ ಆಧಾರವಾಗಲಿಲ್ಲ. ಓಪನರ್ ಜಾರ್ಜ್ ಥಾಮಸ್ 27, ಕೆಳಕ್ರಮಾಂಕದಲ್ಲಿ ಜೇಮ್ಸ್ ಸೇಲ್ಸ್ ಅಜೇಯ 34 ರನ್ ಕಲೆಹಾಕಿ ಕೊಂಚ ಪ್ರತಿರೋಧ ಒಡ್ಡಿದ್ರು. ಆದ್ರೆ ಫೈನಲ್ ಪಂದ್ಯದಲ್ಲಿ ತೋರಿಸಬೇಕಾದ ಯಾವುದೇ ದಿಟ್ಟತನ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಗಳಲ್ಲಿ ಕಂಡುಬರಲಿಲ್ಲ. ಪರಿಣಾಮ 189 ರನ್‌ಗಳಿಗೆ ಆಲೌಟ್‌ ಆಗಿ ಭಾರತಕ್ಕೆ 190 ರನ್‌ಗಳ ಗುರಿ ನೀಡಿದೆ.

ಭಾರತತದ ಪರ ರವಿ ಕುಮಾರ್ 9 ಓವರ್‌ಗಳಲ್ಲಿ 34 ರನ್ ನೀಡಿ 4 ವಿಕೆಟ್ ಪಡೆದ್ರೆ, ಬಲಗೈ ವೇಗಿ ರಾಜ್‌ ಬಾವಾ 9.5 ಓವರ್‌ಗಳಲ್ಲಿ 31 ರನ್ ನೀಡಿ 5 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಕೌಶಲ್ ತಾಂಬೆ ಒಂದು ವಿಕೆಟ್ ಪಡೆದಿದ್ದಾರೆ.

ಆ್ಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಪ್ರಶಸ್ತಿಯ ಹೋರಾಟವು ಅಂತಿಮ ಹಂತಕ್ಕೆ ಬಂದು ತಲುಪಿದೆ. ನಾಲ್ಕು ಬಾರಿಯ ಚಾಂಪಿಯನ್ 190 ರನ್ ತಲುಪಿದ್ದೇ ಆದಲ್ಲಲಿ ಐದನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಲಿದೆ.

ಭಾರತ ಕೂಡ ಆರಂಭಿಕ ಆಘಾತ ಅನುಭವಿಸಿದ್ದು, ಮೊದಲ ಓವರ್‌ನಲ್ಲೇ ಓಪನರ್ ಆಂಗ್ಕ್ರಿಶ್ ರಘುವಂಶಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದಾರೆ.

ಭಾರತ ಅಂಡರ್ 19 ಪ್ಲೇಯಿಂಗ್ 11:
ಆಂಗ್ಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್, ಶೇಕ್ ರಶೀದ್, ಯಶ್ ಧುಲ್(ನಾಯಕ), ನಿಶಾಂತ್ ಸಿಂಧು, ರಾಜವರ್ಧನ್ ಹಂಗರ್ಗೇಕರ್, ದಿನೇಶ್ ಬನಾ(ವಿಕೆಟ್ ಕೀಪರ್), ಕೌಶಲ್ ತಾಂಬೆ, ರಾಜ್ ಬಾವಾ, ವಿಕ್ಕಿ ಒಸ್ವಾಲ್, ರವಿ ಕುಮಾರ್

Virat Kohli ಹಾಗು Rohit Sharma ಒಟ್ಟಾಗಿ ಕುಣಿದು ಕುಪ್ಪಳಿಸಿದ್ದೇಕೆ | Oneindia Kannada

ಇಂಗ್ಲೆಂಡ್ ಅಂಡರ್ 19 ಪ್ಲೇಯಿಂಗ್ 11:
ಜಾರ್ಜ್ ಥಾಮಸ್, ಜಾಕೋಬ್ ಬೆಥೆಲ್, ಟಾಮ್ ಪ್ರೆಸ್ಟ್(ನಾಯಕ), ಜೇಮ್ಸ್ ರೆವ್, ವಿಲಿಯಂ ಲಕ್ಸ್ಟನ್, ಜಾರ್ಜ್ ಬೆಲ್, ರೆಹಾನ್ ಅಹ್ಮದ್, ಅಲೆಕ್ಸ್ ಹಾರ್ಟನ್(ವಿಕೆಟ್ ಕೀಪರ್), ಜೇಮ್ಸ್ ಸೇಲ್ಸ್, ಥಾಮಸ್ ಆಸ್ಪಿನ್‌ವಾಲ್, ಜೋಶುವಾ ಬೋಡೆನ್

Story first published: Saturday, February 5, 2022, 22:51 [IST]
Other articles published on Feb 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X