ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಡರ್ 19 ವಿಶ್ವಕಪ್: ಕೇವಲ 96ರನ್‌ಗೆ ಆಲೌಟ್ ಆದ ಸ್ಕಾಟ್ಲೆಂಡ್, ವಿಂಡೀಸ್‌ಗೆ ಗೆಲುವು

West indies under 19

ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಜ್ಯೂನಿಯರ್ ತಂಡವು ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ವಿಂಡೀಸ್, ಎದುರಾಳಿ ತಂಡವನ್ನ ಕೇವಲ 96 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಶಾಕ್ ನೀಡಿದೆ.

ಸ್ಕಾಟ್ಲೆಂಡ್ ಪರ ಓಪನರ್ ಒಲಿವರ್ ಡೇವಿಡ್‌ಸನ್ 43ರನ್‌ಗಳಿಸಿದ್ದು ಬಿಟ್ಟರೆ ಬೇರೆಲ್ಲಾ ಬ್ಯಾಟ್ಸ್‌ಮನ್‌ಗಳು ಸಿಂಗಲ್ ಡಿಜಿಟ್‌ಗೆ ಔಟ್ ಆಗುವ ಮೂಲಕ ಭಾರೀ ಮುಖಭಂಗ ಎದುರಿಸಿದ್ರು.

ಕೊರೊನಾ ಲಸಿಕೆ ತೆಗೆದುಕೊಳ್ಳದಿದ್ರೆ, ಜೊಕೊವಿಕ್‌ಗೆ ಫೆಂಚ್ ಓಪನ್‌ಗೂ ಪ್ರವೇಶವಿಲ್ಲ!ಕೊರೊನಾ ಲಸಿಕೆ ತೆಗೆದುಕೊಳ್ಳದಿದ್ರೆ, ಜೊಕೊವಿಕ್‌ಗೆ ಫೆಂಚ್ ಓಪನ್‌ಗೂ ಪ್ರವೇಶವಿಲ್ಲ!

ವೆಸ್ಟ್ ಇಂಡೀಸ್ ಪರ ಶಿವ ಶಂಕರ್‌ಗೆ 3 ವಿಕೆಟ್, ಒನಾಜೆ ಅಮೊರಿ 2, ಆ್ಯಂಡರ್ಸನ್ ಮಹಸೆ 2, ಮೆಕೆನಿ ಕ್ಲಾರ್ಕ್ ಮತ್ತು ಮ್ಯಥ್ಯೂ ನಂದು ತಲಾ 1 ವಿಕೆಟ್ ಪಡೆದರು.

97ರನ್‌ಗಳ ಸುಲಭ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್ ತಂಡವು 50 ಓವರ್‌ಗಳ ಪಂದ್ಯವನ್ನ ಕೇವಲ 20 ಓವರ್‌ಗಳ ಒಳಗೆ ಮುಗಿಸಿಬಿಟ್ಟಿತು. 19.4 ಓವರ್‌ಗಳಲ್ಲಿ ಗುರಿ ಮುಟ್ಟಿದ ವಿಂಡೀಸ್ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

IPL 2022 Exclusive: ಎಲ್ಲಾ ಒತ್ತಡದಿಂದ ಮುಕ್ತರಾದ Virat Kohli ಈಗ RCB ಗೆ ಮತ್ತೆ ಕ್ಯಾಪ್ಟನ್!! | Oneindia

ಈ ಗೆಲುವಿನ ಮೂಲಕ ಗ್ರೂಪ್ ಡಿನಲ್ಲಿ ವಿಂಡೀಸ್ ತಂಡವು ಎರಡು ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಒಂದು ಪಂದ್ಯ ಗೆಲುವು ಮತ್ತು ಸೋಲನ್ನ ಕಂಡಿದೆ. ಭಾರತ ಅಂಡರ್-19 ತಂಡವು ಗ್ರೂಪ್ ಬಿನಲ್ಲಿ ಎರಡು ಪಾಯಿಂಟ್ಸ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ.

Story first published: Monday, January 17, 2022, 23:46 [IST]
Other articles published on Jan 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X