ಮಿಸೆ ಚಿಗುರುವ ಮುನ್ನವೇ ಟೀಮ್ ಇಂಡಿಯಾ ಜೆರ್ಸಿ; ಸಚಿನ್ ತೆಂಡೂಲ್ಕರ್ ದಾಖಲೆಯ ಮೇಲೆ ವೈಭವ್ ಸೂರ್ಯವಂಶಿ ಕಣ್ಣು
ಪ್ರತಿಯೊಬ್ಬ ಕ್ರಿಕೆಟ್ ಆಡುವ ಆಟಗಾರನಿಗೆ ದೇಶದ ಜೆರ್ಸಿ ತೊಡಬೇಕು ಎಂಬ ಕನಸು ಇದ್ದೇ ಇರುತ್ತದೆ. ಈ ಕನಸನ್ನು ಹಲವು ಆಟಗಾರರು ನನಸು ಮಾಡಿಕೊಂಡಿರುತ್ತಾರೆ. ಇನ್ನು ಕಿರಿಯ ವಯಸ್ಸಿನಲ್ಲಿ ಕ್ರಿಕೆಟ್ ವ್ಯಾಕರಣವನ್ನು ಶ್ರದ್ಧೆಯಿಂದ ಕಲಿಯುವ ವಯಸ್ಸಿನಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕರೆ, ಸ್ವರ್ಗಕ್ಕೆ ಮೂರೇ ಗೇಣು. ಇಂತಹ ಸಾಧನೆಯನ್ನು ಮಾಡುವುದು ತೀರಾ ಅಪರೂಪ.
ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಇಂತಹ ಆಟಗಾರರು ಸಾಬೀತು ಪಡಿಸುತ್ತಲೇ ಇರುತ್ತಾರೆ. ಮುಖದಲ್ಲಿ ಮೀಸೆ ಚಿಗುರುವ ಮುನ್ನವೇ ದೇಶದ ಕೋಟ್ಯಂತರ ಜನರ ನಿರೀಕ್ಷೆಯ ಭಾರವನ್ನು ಹೆಗಲ ಮೇಲೆ ಹೊತ್ತು ಅಂಗಳಕ್ಕೆ ಇಳಿದು ಕ್ರಿಕೆಟ್ ಮೈದಾನದಲ್ಲಿ ಸದ್ದು ಮಾಡಿದ ಆಟಗಾರರ ಮಾಹಿತಿ ಇಲ್ಲಿದೆ.

ಕ್ರಿಕೆಟ್ ಎಂಬ ಹೆಸರು ಕೇಳಿದ ತಕ್ಷಣ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮೊದಲು ನೆನಪಾಗುವುದೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್. ಸಚಿನ್ ತಮ್ಮ ಆಟದ ಧಾಟಿಯಿಂದ ದೇಶದ ಅಭಿಮಾನಿಗಳನ್ನು ಗೆದ್ದ ಆಟಗಾರ. ಇವರು 1989 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು ಮತ್ತು 2013 ರವರೆಗೆ ಆಡಿದ್ದಾರೆ. ಇವರು ಹಲವು ದಾಖಲೆಗಳನ್ನು ಬರೆದಿದ್ದಾರೆ. ಅದರಲ್ಲಿ ಕಿರಿಯ ವಯಸ್ಸಿಗೆ ಅಂತಾರಾಷ್ಟ್ರೀಯ ಪದಾರ್ಪಣೆ ಮಾಡಿದ ದಾಖಲೆ ಸಹ ಇವರ ಹೆಸರಿನಲ್ಲಿದೆ.
ಸಚಿನ್ ತೆಂಡೂಲ್ಕರ್ 1989 ರಲ್ಲಿ ಪಾಕಿಸ್ತಾನ ವಿರುದ್ಧ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಆಗ ಅವರಿಗೆ ಕೇವಲ 16 ವರ್ಷ 205 ದಿನಗಳು. ಅವರು ಆರಂಭಿಕ ಕೆಲವು ಇನಿಂಗ್ಸ್‌ಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದರೂ, ಬಳಿಕ ರನ್ ಕಲೆ ಹಾಕುತ್ತಾ ಸಾಗಿದಂತೆ ಹಿಂತಿರೂಗಿ ನೋಡಲೇ ಇಲ್ಲ. ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ ಸುಮಾರು 13 ವರ್ಷಗಳು ಕಳೆದಿವೆ, ಆದರೆ ಬೇರೆ ಯಾವುದೇ ಆಟಗಾರ ಇನ್ನೂ ಮುರಿಯದ ಲೆಕ್ಕವಿಲ್ಲದಷ್ಟು ದಾಖಲೆಗಳು ಇವರ ಹೆಸರಿನಲ್ಲಿ ಉಳಿದಿವೆ.
ಪೃಥ್ವಿ ಶಾ 18 ವರ್ಷ 329 ದಿನ
ಪೃಥ್ವಿ ಶಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗ, ಇವರು ಹೆಚ್ಚು ವರ್ಷ ಟೀಮ್ ಇಂಡಿಯಾದ ಜೆರ್ಸಿಯಲ್ಲಿ ಮಿಂಚಬಹುದು ಎಂಬ ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಪೃಥ್ವಿ ಶಾ 2018 ರಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದಾಗ ಅವರಿಗೆ 18 ವರ್ಷ ಮತ್ತು 329 ದಿನಗಳಾಗಿತ್ತು. ಇವರು ಈ ವರೆಗೆ ಕೇವಲ ಐದು ಟೆಸ್ಟ್, ಆರು ಏಕದಿನ ಪಂದ್ಯಗಳು ಮತ್ತು ಒಂದು ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಮಾತ್ರ ಆಡಿದ್ದರು.

ವೈಭವ್ ಸೂರ್ಯವಂಶಿ ಮೇಲೆ ಕಣ್ಣು
ಶುಕ್ರವಾರದಿಂದ ಭಾರತ ಹಾಗೂ ಐರ್ಲೆಂಡ್ ನಡುವಣ ಮೊದಲ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪರ ವೈಭವ್ ಸೂರ್ಯವಂಶಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಜೂನ್ 26, 2026 ರಂದು ಅವರಿಗೆ 15 ವರ್ಷ 91 ದಿನಗಳು ತುಂಬುತ್ತವೆ. ಈ ದಿನದಂದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೆ, ಇತಿಹಾಸ ಬರೆಯುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications