For Quick Alerts
ALLOW NOTIFICATIONS  
For Daily Alerts
 

ಚೆನ್ನೈ ವಿನ್ನಾಯ್ತು, ಕಣ್ ಹೊಡೆಯೋ ಹುಡ್ಗಿ ಕತೆಯೇನಾಯ್ತು?!

Varrier Reveals Name Of Her Favourite Indian Cricketer

ಮುಂಬೈ, ಮೇ 28: ಐಪಿಎಲ್ 2018ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಜಯ ಗಳಿಸಿದರೆ ನಾನು ಚೆನ್ನೈ ತಂಡಕ್ಕೋಸ್ಕರ ಕುಣಿಯುವುದರ ಜೊತೆಗೆ ಕಣ್ ಹೊಡೆಯೋ ಫೇಮಸ್ ಆಕ್ಟನ್ನೂ ಮಾಡುತ್ತೇನೆ ಎಂದಿದ್ದರು ಪ್ರಿಯಾ ವಾರಿಯಾರ್. ಆದರೆ ಐಪಿಎಲ್ ಅಂತಿಮ ಪಂದ್ಯದ ವೇಳೆ ಪ್ರಿಯಾ ಕಣ್ಣಿಗೆ ಬಿದ್ದಿಲ್ಲ.

ಐಪಿಎಲ್ ಸಂದರ್ಭ ಚೆನ್ನೈ ಗೆಲುವಿನ ಮುನ್ಸೂಚನೆ ಸಿಕ್ಕಾಗ ಖುಷಿಗೊಂಡು ಕೆಲವು ಟ್ವೀಟ್ ಮಾಡಿದ್ದು ಬಿಟ್ಟರೆ ಅವರು ಮಾತು ಕೊಟ್ಟಂತೆ ಡ್ಯಾನ್ಸ್ ಮಾಡಿದ್ದಾಗ್ಲಿ, ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾಗ್ಲಿ ಕಂಡು ಬರಲಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಧೋನಿಯ ಅಭಿಮಾನಿಯೂ ಆಗಿರುವ ಪ್ರಿಯಾ ವಾರಿಯಾರ್ ಮೇ 12ರಂದು ಒಂದು ವೇಳೆ ಚೆನ್ನೈ ಫೈನಲ್ ನಲ್ಲಿ ಗೆದ್ದರೆ ತಾನು ಐಪಿಎಲ್ ಸಮಾರೋಪದ ವೇಳೆ ವಿಶೇಷ ಸಂಗೀತಕ್ಕೆ ಕುಣಿಯುತ್ತೇನೆ. ಜೊತೆಗೆ ನನ್ನ ಫೇಮಸ್ ನಟನೆಯನ್ನು ಚೆನ್ನೈ ತಂಡಕ್ಕಾಗಿ ಮಾಡಿ ತೋರಿಸುತ್ತೇನೆ ಎಂದಿದ್ದರು.

ಈಬಗ್ಗೆ ಚೆನ್ನೈ ತಂಡದ ನಾಯಕ ಧೋನಿಯನ್ನು ಖುದ್ದಾಗಿ ಭೇಟಿಯಾಗಿದ್ದ ಪ್ರಿಯಾ, 'ನೀವು ಫೈನಲ್ ನಲ್ಲಿ ಗೆಲ್ಲಬೇಕು' ಎಂದು ಶುಭ ಹಾರೈಸಿದ್ದು ಸುದ್ದಿಯಾಗಿತ್ತು. ಆದರೆ ಫೈನಲ್ ಪಂದ್ಯದ ವೇಳೆ ಪ್ರಿಯಾ ಹೆಚ್ಚು ಗಮನ ಸೆಳೆದದ್ದಾಗಲಿ, ಸುದ್ದಿಯಾಗಿದ್ದಾಗಲಿ ಕಂಡುಬರಲಿಲ್ಲ.

ಒಟ್ಟಿನಲ್ಲಿ ಈಗ ಐಪಿಎಲ್ ಚಾಂಪಿಯನ್ ಚೆನ್ನೈ ತಂಡ ಬೇಸರಗೊಂಡಿದೆಯೋ ಇಲ್ವೋ ಗೊತ್ತಿಲ್ಲ. ಆದರೆ 'ಪ್ರಿಯಾ ವಾರಿಯರ್ಸ್ ಫ್ಲೈಯಿಂಗ್ ಕಿಸ್ಸಿನ ಕತೆಯೇನಾಯ್ತು?' ಅಂತ ಕ್ರಿಕೆಟ್ ಅಭಿಮಾನಿಗಳು ನಿರಾಶೆ ಪಡುವಂತಾಗಿದೆ.

Story first published: Monday, May 28, 2018, 1:15 [IST]
Other articles published on May 28, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+