For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ: ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ 8 ವಿಕೆಟ್‌ ಅಂತರದ ಸೋಲು

Vijay Hazare Trophy 2021/22: Karnataka Lost the match by 8 wickets against Tamil Nadu

ವಿಜಯ್ ಹಜಾರೆ ಟೂರ್ನಿಯ ಎರಡನೇ ಪಂದ್ಯದಲ್ಲಿ ಕರ್ನಾಟಕ ತಮಿಳುನಾಡು ತಂಡದ ವಿರುದ್ಧ ಸೋಲು ಅನುಭವಿಸಿದೆ. ತಮಿಳುನಾಡು ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಲು ವಿಫಲವಾದ ಕರ್ನಾಟಕ ತಂಡದ ಆಟಗಾರರು ಭಾರೀ ನಿರಾಸೆ ಅನುಭವಿಸಿದರು. ಈ ಮೂಲಕ 8 ವಿಕೆಟ್‌ಗಳ ಅಂತರದ ಭಾರೀ ಸೋಲು ಅನುಭವಿಸಿದೆ ಮನೀಶ್ ಪಾಂಡೆ ಬಳಗ.

ಬುಧವಾರ ಮೊದಲ ಪಂದ್ಯದಲ್ಲಿ ಪುದುಚೇರಿ ತಂಡವನ್ನು ಎದುರಿಸಿದ್ದ ಕರ್ನಾಟಕ ಈ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರೀ ಅಂತರದ ಗೆಲುವು ಸಾಧಿಸಿತ್ತು. ಆದರೆ ಈ ಪ್ರದರ್ಶನವನ್ನು ತಮಿಳುನಾಡು ವಿರುದ್ಧ ತೋರ್ಪಡಿಸಲು ವಿಫಲವಾಯಿತು. ಕರ್ನಾಟಕದ ಪರವಾಗಿ ನಾಯಕ ಮನೀಶ್ ಪಾಂಡೆ ಹಾಗೂ ರೋಹನ್ ಕದಂ ಹೊರತುಪಡಿಸಿ ಉಳಿದ ಯಾವುದೇ ಆಟಗಾರನಿಂದಲೂ ಉತ್ತಮ ಪ್ರದರ್ಶನ ಬಾರಲೇ ಇಲ್ಲ. ಈ ಇಬ್ಬರು ಆಟಗಾರರು ಮಾತ್ರವೇ ಎರಡಂಕಿ ದಾಟಲು ಸಫಲವಾಗಿದ್ದರು.

ಮೊದಲ ಪಂದ್ಯದಲ್ಲಿ ಶತಕದಂಚಿನಲ್ಲಿ ಎಡವಿದ್ದ ಸಮರ್ಥ್ ಈ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಕುಸಿತಕ್ಕೆ ಚಾಲನೆ ನೀಡಿದರು. ಶೂನ್ಯಕ್ಕೆ ಕರ್ನಾಟಕ ಮೊದಲ ವಿಕೆಟ್ ಕಳೆದುಕೊಂಡಿತ್ತು. ನಂತರ ತಂಡದ ಮೊತ್ತ 20 ರನ್‌ಗಳಾಗುವಷ್ಟರಲ್ಲಿ ಮತ್ತೊಂದು ವಿಕೆಟ್ ಕಳೆದುಕೊಂಡಿತ್ತು. ಮೂರನೇ ವಿಕೆಟ್‌ಗೆ ಆರಂಬಿಕ ಆಟಗಾರ ರೋಹನ್ ಕದಂ ಹಾಗೂ ಮನೀಶ್ ಪಾಂಡೆ ಅರ್ಧ ಶತಕದ ಜೊತೆಯಾಟವಾಡುವ ಮೂಲಕ ಕುಸಿತವನ್ನು ಸಣ್ಣ ಮಟ್ಟಿಗೆ ತಡೆಯುವಲ್ಲಿ ಯಶಸ್ವಿಯಾದರು.

ಈ ಜೋಡಿಯನ್ನು ವಾಶಿಂಗ್ಟನ್ ಸುಂದರ್ ಮುರಿಯುವಲ್ಲಿ ಯಶಸ್ವಿಯಾಗಿದ್ದರು. 37 ರನ್‌ಗಳಿಸಿದ್ದ ರೋಹನ್ ಕದಂ ಸುಂದರ್‌ಗೆ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ದರು. ನಂತರ ಮನೀಶ್ ಪಾಂಡೆ ಕೂಡ ಔಟಾದರು. ನಂತರ ತಮಡದ ಎಲ್ಲಾ ಆಟಗಾರರು ಕೂಡ ಫೆವಿಲಿಯನ್ ಪೆರೇಡ್ ಮಾಡತೊಡಗಿದರು. ಅಂತಿಮವಾಗಿ ಕರ್ನಾಟಕ ತಂಡ 36.3 ಓವರ್‌ಗಳಲ್ಲಿ 122 ರನ್‌ಗಳೀಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು.

ತಮಿಳುನಾಡು ತಂಡದ ಪರವಾಗಿ ಎಂ ಸಿದ್ಧಾರ್ಥ್ 9 ಓವರ್‌ಗಳಲ್ಲಿ ಕೇವಲ 23 ರನ್‌ ನೀಡಿ 4 ವಿಕೆಟ್ ಪಡೆಯುವ ಮೂಲಕ ಕರ್ನಾಟಕಕ್ಕೆ ಆಘಾತ ನೀಡಿದರು. ಸಾಯಿ ಕಿಶೋರ್ 3 ವಿಕೆಟ್ ಸಂಪಾದಿಸಿ ಮಿಂಚಿದರು. ವಾರಿಯರ್, ಸಿಲಂಬರಸನ್ ಹಾಗೂ ಸುಂದರ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಇನ್ನು ಕರ್ನಾಟಕ ತಂಡ ನೀಡಿದ 123 ರನ್‌ಗಳ ಗುರಿಯನ್ನು ತಮಿಳುನಾಡು ತಂಡ ಸುಲಭವಾಗಿ ಬೆನ್ನಟ್ಟಿ ಗೆಲುವು ಸಾಧಿಸಿತು. ಕೇವಲ ಎರಡು ವಿಕೆಟ್ ಕಳೆದುಕೊಂಡು ತಮಿಳುನಾಡು ತಂಡ 28 ಓವರ್‌ಗಳಲ್ಲಿ 123 ರನ್‌ಗಳಿಸಿ ಗೆದ್ದು ಬೀಗಿತು. ತಮಿಳುನಾಡು ಪರವಾಗಿ ಬಾಬಾ ಅಪರಾಜಿತ್ 51 ರನ್‌ಗಳಿಸಿ ಅಜೇಯವಾಗುಳಿದರೆ ಸುಂದರ್ 31 ರನ್‌ಗಳಿಸಿ ಅಜೇಯವಾಗುಳಿದರು. ತಮಿಳುನಾಡು ತಂಡ ಕಳೆದುಕೊಂಡ ಒಮದು ವಿಕೆಟ್ ಜೆ ಸುಜಿತ್ ಪಾಲಾದರೆ ಮತ್ತೊಂದು ವಿದ್ಯಾಧರ್ ಪಾಟೀಲ್ ಪಾಲಾಯಿತು.

ದಕ್ಷಿಣ ಆಫ್ರಿಕಾ ಟಿಕೆಟ್ ಮಿಸ್‌ ಮಾಡಿಕೊಂಡ ಜಡೇಜಾ, ಶುಭ್ಮನ್, ಅಕ್ಷರ್ ಪಟೇಲ್!
ಕರ್ನಾಟಕ ಆಡುವ ಬಳಗ: ರವಿಕುಮಾರ್ ಸಮರ್ಥ್, ರೋಹನ್ ಕದಂ, ಕೃಷ್ಣಮೂರ್ತಿ ಸಿದ್ಧಾರ್ಥ್, ಮನೀಶ್ ಪಾಂಡೆ (ನಾಯಕ), ಕರುಣ್ ನಾಯರ್, ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್), ವೆಂಕಟೇಶ ಮುರಳೀಧರ, ಜಗದೀಶ ಸುಚಿತ್, ಕೆಸಿ ಕಾರಿಯಪ್ಪ, ವಿದ್ಯಾಧರ್ ಪಾಟೀಲ್, ವಿ ಕೌಶಿಕ್
ಬೆಂಚ್: ದೇಗಾ ನಿಶ್ಚಲ್, ಶ್ರೇಯಸ್ ಗೋಪಾಲ್, ಪ್ರವೀಣ್ ದುಬೆ, ವಿಜಯ್ ಕುಮಾರ್ ವೈಶಾಕ್, ಪ್ರತೀಕ್ ಜೈನ್, ಅಭಿನವ್ ಮನೋಹರ್, ಶರತ್ ಬಿಆರ್, ರಿತೇಶ್ ಭಟ್ಕಳ್, ದರ್ಶನ್ ಎಂಬಿ

ತಮಿಳುನಾಡು ಆಡುವ ಬಳಗ: ಸಾಯಿ ಸುದರ್ಶನ್, ಎನ್ ಜಗದೀಸನ್ (ನಾಯಕ), ಬಾಬಾ ಇಂದ್ರಜಿತ್, ವಾಷಿಂಗ್ಟನ್ ಸುಂದರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಜಗತೀಸನ್ ಕೌಸಿಕ್, ಶಾರುಖ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಆರ್ ಸಿಲಂಬರಸನ್, ಮಣಿಮಾರನ್ ಸಿದ್ಧಾರ್ಥ್, ಸಂದೀಪ್ ವಾರಿಯರ್
ಬೆಂಚ್: ಕೌಶಿಕ್ ಗಾಂಧಿ, ಮುರುಗನ್ ಅಶ್ವಿನ್, ಎಂ ಮೊಹಮ್ಮದ್, ವಿಜಯ್ ಶಂಕರ್, ಲಕ್ಷ್ಮೇಶ ಸೂರ್ಯಪ್ರಕಾಶ್, ಗಂಗಾ ಶ್ರೀಧರ್ ರಾಜು, ಹರಿ ನಿಶಾಂತ್, ಸಂಜಯ್ ಯಾದವ್, ಪಿ ಸರವಣ ಕುಮಾರ್

Story first published: Thursday, December 9, 2021, 16:36 [IST]
Other articles published on Dec 9, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+