ದಕ್ಷಿಣ ಆಫ್ರಿಕಾ ಟಿಕೆಟ್ ಮಿಸ್ ಮಾಡಿಕೊಂಡ ಜಡೇಜಾ, ಶುಭ್ಮನ್, ಅಕ್ಷರ್ ಪಟೇಲ್!

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸುದೀರ್ಘ ಸರಣಿಗೆ ಟೀಂ ಇಂಡಿಯಾ ರೆಡಿಯಾಗಿದ್ದು, ಹರಿಣಗಳ ನಾಡಿಗೆ ಹೆಜ್ಜೆ ಇಡಲು ಕಾದುಕುಳಿತಿದೆ. ಹಿರಿಯ ಆಟಗಾರರ ಆಯ್ಕೆ ಸಮಿತಿಯು ಇಂದು ಡಿಸೆಂಬರ್ 26ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾವನ್ನ ಪ್ರಕಟಿಸಿದೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮುನ್ನಡೆಯಲಿರುವ ತಂಡದಲ್ಲಿ 18 ಸದಸ್ಯರನ್ನ ಕಾಣಬಹುದಾಗಿದೆ. ಇದರ ಜೊತೆಗೆ ಸ್ಟ್ಯಾಂಡ್ ಬೈ ಆಗಿ ನಾಲ್ವರು ಆಟಗಾರರನ್ನ ನೇಮಿಸಲಾಗಿದೆ. ಆದ್ರೆ ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಆಲ್‌ರೌಂಡರ್ ಅಕ್ಷರ್ ಪಟೇಲ್, ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಪ್ರಮುಖ ಸದಸ್ಯನಾಗಿದ್ದ ರವೀಂದ್ರ ಜಡೇಜಾ ಮತ್ತು ಶುಭ್ಮನ್ ಗಿಲ್‌ರನ್ನ ತಂಡ ಮಿಸ್‌ಮಾಡಿಕೊಂಡಿದೆ.

ಆಯ್ಕೆಗೆ ಲಭ್ಯವಿಲ್ಲ ಜಡ್ಡು, ಅಕ್ಷರ್, ಗಿಲ್
ಹೌದು ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಪ್ರಕಟಿಸಿರುವ 18 ಸದಸ್ಯರ ಭಾರತ ಟೆಸ್ಟ್ ತಂಡದಲ್ಲಿ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಶುಭ್ಮನ್ ಗಿಲ್ ಮತ್ತು ರಾಹುಲ್ ಚಹಾರ್ ಹೆಸರು ಕಂಡುಬಂದಿಲ್ಲ. ಇದಕ್ಕೆ ಕಾರಣ ಈ ಆಟಗಾರರು ಗಾಯಗಳಿಂದಾಗಿ ಆಯ್ಕೆಗೆ ಲಭ್ಯವಿಲ್ಲ ಮತ್ತು ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಪುನರ್ವಸತಿ ಶಿಬಿರದಲ್ಲಿ ಫಿಟ್ನೆಸ್‌ಗಾಗಿ ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾಗೆ ಹಾರುವ ಕನಸನ್ನ ಕಾಣುತ್ತಿದ್ದ ಈ ಪ್ರಮುಖ ಆಟಗಾರರು ಪ್ರಮುಖ ಟೂರ್ನಿಯಿಂದ ವಂಚಿತರಾಗಿದ್ದಾರೆ.
ಅಂತೂ ವಿರಾಟ್ ಕೊಹ್ಲಿ ಕೈ ಜಾರಿತು ODI ನಾಯಕತ್ವ: ರೋಹಿತ್ ಶರ್ಮಾಗೆ ಪಟ್ಟ ಕಟ್ಟಿದ BCCI

ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊ. ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.
ಸ್ಟ್ಯಾಂಡ್ ಬೈ ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ದೀಪಕ್ ಚಾಹರ್, ಅರ್ಜಾನ್ ನಾಗ್ವಾಸ್ವಾಲ್ಲಾ
ಕೊಹ್ಲಿ-ಶಾಸ್ತ್ರಿ ಕಡೆಗಣಿಸಲ್ಪಟ್ಟಿದ್ದ ಕುಂಬ್ಳೆಯ ಮತ್ತೊಂದು ನೀತಿ ಜಾರಿಗೆ ತಂದ ದ್ರಾವಿಡ್; ಆಟಗಾರರಿಗೆ ಸಂಕಷ್ಟ ಖಚಿತ!

ಸೆಂಚುರಿಯನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ
ಈ ಮೊದಲು ಸರಣಿಯ ಮೊದಲ ಎರಡು ಟೆಸ್ಟ್‌ಗಳನ್ನು ಜೋಹಾನ್ಸ್‌ಬರ್ಗ್ ಮತ್ತು ಪ್ರಿಟೋರಿಯಾದಲ್ಲಿ ನಿಗದಿಪಡಿಸಲಾಗಿತ್ತು. ಆದ್ರೆ ಈ ವೆನ್ಯೂಗಳನ್ನ ಮತ್ತೆ ಪರಿಷ್ಕರಿಸಿದ್ದು, ಸೆಂಚುರಿಯನ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26ರಂದು ನಡೆಯಲಿದೆ. ಇನ್ನು ಎರಡನೇ ಪಂದ್ಯವು ಹೊಸ ವರ್ಷದಲ್ಲಿ, ಅಂದರೆ 2022 ರಿಂದ ಆರಂಭವಾಗಲಿದೆ.

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ ಹೀಗಿದೆ
ಮೊದಲ ಟೆಸ್ಟ್: ಡಿಸೆಂಬರ್ 26-30, ಸೂಪರ್‌ಸ್ಪೋರ್ಟ್ಸ್ ಪಾರ್ಕ್, ಸೆಂಚುರಿಯನ್
ಎರಡನೇ ಟೆಸ್ಟ್: ಜನವರಿ 3-7, ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್
ಮೂರನೇ ಟೆಸ್ಟ್: ಜನವರಿ 11-15, ನ್ಯೂಲ್ಯಾಂಡ್ಸ್, ಕೇಪ್ ಟೌನ್

ಏಕದಿನ ಸರಣಿ ವೇಳಾಪಟ್ಟಿ
ಭಾರತವು ಮೂರು ಏಕದಿನ ಪಂದ್ಯಗಳನ್ನು ಸಹ ಆಡುತ್ತದೆ. ಆದರೆ ಬಿಸಿಸಿಐ ಮೊದಲೇ ಘೋಷಿಸಿದಂತೆ ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು ಮತ್ತೆ ನಿಗದಿಪಡಿಸಲಾಗುತ್ತದೆ.
ಮೊದಲ ಏಕದಿನ: ಜನವರಿ 19 , ಬೆಟ್ವೇ, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್ ಟೌನ್, ಸಮಯ - 2.00 PM
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications