ವಿಜಯ್ ಹಜಾರೆ ಟ್ರೋಫಿ 2021-22: ಬಲಿಷ್ಠ ತಂಡ ಪ್ರಕಟಿಸಿದ ತಮಿಳುನಾಡು, ದಿನೇಶ್ ಕಾರ್ತಿಕ್, ಸುಂದರ್ ಕಂಬ್ಯಾಕ್

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯನ್ನ ತನ್ನ ಮಡಿಲಿಗೆ ಹಾಕಿಕೊಂಡಿರುವ ತಮಿಳುನಾಡು ತಂಡ ಮುಂಬರುವ ವಿಜಯ್ ಹಜಾರೆ ಟ್ರೋಫಿಗೆ ತಂಡವನ್ನ ಪ್ರಕಟಿಸಿದೆ. ಡಿಸೆಂಬರ್ 8ರಂದು ಪ್ರಾರಂಭಗೊಳ್ಳಲಿರುವ ಏಕದಿನ ಟೂರ್ನಮೆಂಟ್‌ಗೆ ಬಲಿಷ್ಠ ತಂಡವನ್ನ ಪ್ರಕಟಿಸಿದೆ.
ಕರ್ನಾಟಕ ವಿರುದ್ಧ SMAT ಫೈನಲ್‌ನಲ್ಲಿ ಕೊನೆಯ ಎಸೆತದಲ್ಲಿ ಜಯವನ್ನ ಪಡೆದ ತಮಿಳುನಾಡು ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೈಟಲ್ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಗೆಲುವಿನ ಜೋಶ್‌ನಲ್ಲಿರುವ ತಮಿಳುನಾಡು ಟೀಮ್ ಇದೀಗ 20 ಸದಸ್ಯರನ್ನೊಳಗೊಂಡ ಬಲಿಷ್ಠ ತಂಡವನ್ನ ಟೂರ್ನಮೆಂಟ್‌ಗೆ ಕೊಂಡೊಯ್ಯಲಿದೆ.
ದಿನೇಶ್ ಕಾರ್ತಿಕ್ ಅನುಪಸ್ಥಿತಿಯಲ್ಲಿ ಆಲ್‌ರೌಂಡರ್ ವಿಜಯ್ ಶಂಕರ್ ತಮಿಳುನಾಡು ತಂಡವನ್ನ ಮುನ್ನಡೆಸಿದ್ರು. ಆದ್ರೆ ಕಾರ್ತಿಕ್ ಇದೀಗ ಕಂಬ್ಯಾಂಕ್ ಮಾಡಿದ್ದಾರೆ.

ತಮಿಳುನಾಡು ತಂಡಕ್ಕೆ DK ಕಂಬ್ಯಾಕ್, ಸುಂದರ್ ಸಾಥ್
ತಮಿಳುನಾಡು ತಂಡದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ತಮಿಳುನಾಡು ತಂಡಕ್ಕೆ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಈ ಮೂಲಕ ತಮಿಳುನಾಡು ತಂಡದ ಬಲ ಮತ್ತಷ್ಟು ಹೆಚ್ಚಿದೆ. ಓಪನಿಂಗ್ ಬ್ಯಾಟ್ಸ್‌ಮನ್ ನಾರಾಯಣ್ ಜಗದೀಶನ್ ಉಪನಾಯಕನಾಗಿ ಆಯ್ಕೆಗೊಂಡಿದ್ದಾರೆ.
ಇನ್ನು ಡಿಕೆ ಜೊತೆಗೆ ಬೌಲಿಂಗ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ತಂಡಕ್ಕೆ ಕಂಬ್ಯಾಕ್ ಆಗಿರುವುದು ತಮಿಳುನಾಡು ತಂಡದ ಬಲ ಹೆಚ್ಚಿಸಿದೆ.
IPL 2022: 10 ತಂಡಗಳು, 74 ಪಂದ್ಯಗಳು, ಚೆನ್ನೈನಲ್ಲಿ ಮೊದಲ ಪಂದ್ಯ

ಬಾಬಾ ಅಪರ್ಜಿತ್ ಅಲಭ್ಯತೆ ಕಾಡಲಿದೆ
ಬಾಬಾ ಅಪರ್ಜಿತ್ ಪ್ರಸ್ತುತ 2021-22ರ ದಕ್ಷಿಣ ಆಫ್ರಿಕಾ ಎ ಪ್ರವಾಸಕ್ಕಾಗಿ ಭಾರತ ಎ ತಂಡದಲ್ಲಿದ್ದಾರೆ. ಆದ್ರೆ ಈ ಪ್ರವಾಸದ ಬಳಿಕ ಅವರು ನಂತರದ ದಿನಾಂಕದಲ್ಲಿ ಲಭ್ಯವಿದ್ದರೆ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ಸಹ ನಿರ್ದಿಷ್ಟಪಡಿಸಲಾಗಿದೆ.
ತಂಡವು ಉತ್ತಮ ಅನುಭವಿ ಮತ್ತು ಯುವ ಪ್ರತಿಭೆಗಳ ಮಿಶ್ರಣವನ್ನು ಹೊಂದಿದೆ. ಅದ್ರಲ್ಲೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2021 ರಲ್ಲಿ ತಮ್ಮ ಪರಾಕ್ರಮವನ್ನು ಪ್ರದರ್ಶಿಸಿದ ನಂತರ ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ತಮಿಳುನಾಡು, ಹಾಲಿ ಚಾಂಪಿಯನ್ ಮುಂಬೈನೊಂದಿಗೆ ಸೆಣಸಾಟ ನಡೆಸಲಿದೆ.

ವಿಜಯ್ ಹಜಾರೆ ಟೂರ್ನಿಗೆ ತಮಿಳುನಾಡು ಸ್ಕ್ವಾಡ್
ವಿಜಯ್ ಶಂಕರ್ (ನಾಯಕ), ನಾರಾಯಣ ಜಗದೀಶನ್ (ಉಪನಾಯಕ), ದಿನೇಶ್ ಕಾರ್ತಿಕ್, ಹರಿ ನಿಶಾಂತ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಶಾರುಖ್ ಖಾನ್, ಮುರುಗನ್ ಅಶ್ವಿನ್, ಸಂದೀಪ್ ವಾರಿಯರ್, ವಾಷಿಂಗ್ಟನ್ ಸುಂದರ್, ಮಣಿಮಾರನ್ ಸಿದ್ಧಾರ್ಥ್, ಬಿ. ಸಾಯಿ ಸುದರ್ಶನ್, ವಿ.ಗಂಗಾ ಶ್ರೀಧರ್ ರಾಜು, ಎಂ ಮೊಹಮ್ಮದ್, ಜೆ.ಕೌಸಿಕ್, ಪಿ.ಸರವಣ ಕುಮಾರ್, ಎಲ್.ಸೂರ್ಯಪ್ರಕಾಶ್, ಬಾಬಾ ಇಂದ್ರಜಿತ್, ಆರ್.ಸಂಜಯ್ ಯಾದವ್, ಎಂ.ಕೌಶಿಕ್ ಗಾಂಧಿ, ಆರ್.ಸಿಲಂಬರಸನ್

ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಉಳಿಸಿಕೊಂಡ ತಮಿಳುನಾಡು
SMAT ಟಿ20 ಟೂರ್ನಮೆಂಟ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿದ ತಮಿಳುನಾಡು ತಂಡದ ಟ್ರೋಫಿಯನ್ನ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಕರ್ನಾಟಕ ವಿರುದ್ಧ ಫೈನಲ್‌ನಲ್ಲಿ ಕೊನೆಯ ಎಸೆತದಲ್ಲಿ ತಮಿಳುನಾಡಿನ ಫಿನಿಷರ್ ಶಾರೂಕ್ ಖಾನ್ ಸಿಡಿಸಿದ ಸಿಕ್ಸರ್ ದಕ್ಷಿಣ ಭಾರತದ ತಂಡಕ್ಕೆ ವಿಜಯ ಮಾಲೆ ತೊಡಿಸಿತು. ಶಾರೂಖ್‌ರ ಎಪಿಕ್ ರನ್ ಚೇಸ್ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಫಿನಿಷಿಂಗ್ ಸ್ಟೈಲ್ ನೆನಪಿಸುವಂತಿತ್ತು.
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ರೀತಿಯ ಸಂದರ್ಭದಲ್ಲಿ ಸುಲಭವಾಗಿ ಎದುರಾಳಿ ಬೌಲರ್‌ಗಳನ್ನ ಮಣಿಸಿ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದಾರೆ. ಅದೇ ಆಲೋಚನೆಗಳನ್ನು ಕಾರ್ಯಗತಗೊಳಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶಾರೂಖ್ 15 ಎಸೆತಗಳಲ್ಲಿ 33 ರನ್ ಗಳಿಸಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications