IPL 2022: 10 ತಂಡಗಳು, 74 ಪಂದ್ಯಗಳು, ಚೆನ್ನೈನಲ್ಲಿ ಮೊದಲ ಪಂದ್ಯ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿ ಕುರಿತಾಗಿ ಸುದ್ದಿ ಹೊರಬಿದ್ದಿದ್ದು, ಮುಂಬರುವ ಸೀಸನ್‌ಏಪ್ರಿಲ್, 2, 2022ರಂದು ಪ್ರಾರಂಭಗೊಳ್ಳಲಿದೆ. ಡಿಫೆಂಡಿಂಗ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಉದ್ಘಾಟನಾ ಪಂದ್ಯವನ್ನಾಡಲಿದ್ದು, ಚೆನ್ನೈನ ಚೆಪಾಕ್ ಅಂಗಳ ಆರಂಭಿಕ ಪಂದ್ಯದ ಆತಿಥ್ಯವಹಿಸಲಿದೆ.

ಕ್ರಿಕ್‌ಬಝ್ ವರದಿಯ ಪ್ರಕಾರ, ಪಂದ್ಯಗಳನ್ನು ಅಂತಿಮಗೊಳಿಸಲಾಗಿಲ್ಲ. ಆದರೆ ಬಿಸಿಸಿಐ ಆಂತರಿಕವಾಗಿ ಪ್ರಮುಖ ಮಧ್ಯಸ್ಥಗಾರರಿಗೆ ತಿಳಿಸಿದ್ದು, ಮಂಡಳಿಯು ಐಪಿಎಲ್ 2022 ಅನ್ನು ಏಪ್ರಿಲ್ 2 ರಂದು ಚೆನ್ನೈನಲ್ಲಿ ಪ್ರಾರಂಭಿಸಲು ಯೋಜಿಸುತ್ತಿದೆ.

74 ಪಂದ್ಯಗಳು 10 ತಂಡಗಳು
ಇದುವರೆಗೂ ಐಪಿಎಲ್ ಸೀಸನ್‌ನಲ್ಲಿ ಎಂಟು ತಂಡಗಳು ಒಟ್ಟು 60 ಪಂದ್ಯಗಳನ್ನ ಆಡುತ್ತಿದ್ದವು. ಆದ್ರೆ ಈ ಸೀಸನ್‌ನಲ್ಲಿ ಎರಡು ಹೆಚ್ಚುವರಿ ತಂಡಗಳು ಸೇರ್ಪಡೆಯಾಗುವುದರಿಂದ ಒಟ್ಟು 74 ಪಂದ್ಯಗಳು ನಡೆಯಲಿದೆ. ಅಂತಿಮ ಪಂದ್ಯವು ಜೂನ್‌ನ ಮೊದಲ ವಾರದಲ್ಲಿ ನಡೆಯಬಹುದು. ಅಂದರೆ ಜೂನ್ 4 ಇಲ್ಲವೆ 5ರಂದು ಫೈನಲ್ ಪಂದ್ಯ ನಡೆಯಲಿದೆ.

ಪ್ರತಿ ತಂಡಗಳಿಗೆ 14 ಪಂದ್ಯಗಳು
ಸದ್ಯ ಇರುವ ನಿಯಮದ ಪ್ರಕಾರ ಪ್ರತಿ ತಂಡಗಳು ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನ ಆಡುತ್ತಿದ್ದವು. ಅದರಲ್ಲಿ ಏಳು ಪಂದ್ಯಗಳು ತವರಿನ ಅಂಗಳದಲ್ಲಿ, ಏಳು ಪಂದ್ಯಗಳು ಇತರೆ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್‌: ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್‌: ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಚೆನ್ನೈ ಸೂಪರ್ ಕಿಂಗ್ಸ್ ಹಾಲಿ ಚಾಂಪಿಯನ್ ಆಗಿರುವುದರಿಂದ, ಉದ್ಘಾಟನಾ ಪಂದ್ಯಕ್ಕೆ ಚೆನ್ನೈ ಸ್ಪಷ್ಟ ಆಯ್ಕೆಯಾಗಿದೆ. ಆದರೆ ಅವರ ಎದುರಾಳಿಗಳು ಮತ್ತೆ ಮುಂಬೈ ಇಂಡಿಯನ್ಸ್ ಆಗುತ್ತಾರೆಯೇ ಎಂಬ ಯಾವುದೇ ನಿರ್ಧಾರ ಹೊರಬಿದ್ದಿಲ್ಲ.

ಇತ್ತೀಚೆಗಷ್ಟೇ ಐಪಿಎಲ್ ಸಂಪೂರ್ಣವಾಗಿ ಭಾರತಕ್ಕೆ ಮರಳಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ತಿಳಿಸಿದ್ದರು. ಚೆನ್ನೈನಲ್ಲಿ ಇತ್ತೀಚೆಗೆ ನಡೆದ ಸಿಎಸ್‌ಕೆ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ಭಾರತದಲ್ಲೇ ಐಪಿಎಲ್ ನಡೆಯಲಿದೆ ಎಂದು ಘೋಷಿಸಿದ್ರು.

''ಚೆಪಾಕ್‌ನಲ್ಲಿ ಸಿಎಸ್‌ಕೆ ಪಂದ್ಯವನ್ನು ನೋಡಲು ನೀವೆಲ್ಲರೂ ಕಾಯುತ್ತಿದ್ದೀರಿ ಎಂದು ನನಗೆ ತಿಳಿದಿದೆ. ಸರಿ, ಆ ಕ್ಷಣವು ಹೆಚ್ಚು ದೂರವಿಲ್ಲ. ಐಪಿಎಲ್‌ನ 15 ನೇ ಸೀಸನ್ ಭಾರತದಲ್ಲಿ ನಡೆಯಲಿದೆ ಮತ್ತು ಎರಡು ಹೊಸ ತಂಡಗಳು ಸೇರ್ಪಡೆಗೊಳ್ಳುವುದರೊಂದಿಗೆ ಇದು ಹಿಂದೆಂದಿಗಿಂತಲೂ ಹೆಚ್ಚು ರೋಮಾಂಚನಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಮೆಗಾ ಹರಾಜು ಬರಲಿದೆ, ಆದ್ದರಿಂದ ಹೊಸ ಸಂಯೋಜನೆಗಳು ಹೇಗಿರುತ್ತವೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ" ಎಂದು ಬಿಸಿಸಿಐ ಕಾರ್ಯದರ್ಶಿ ಸಮಾರಂಭದಲ್ಲಿ ಹೇಳಿದರು.

ಕೋವಿಡ್ -19 ಸಾಂಕ್ರಾಮಿಕದ ಕಾರಣದಿಂದಾಗಿ ಐಪಿಎಲ್ 2020ರ ಪೂರ್ಣ ಸೀಸನ್ ಮತ್ತು ಐಪಿಎಲ್ 2021ರ ಅರ್ಧ ಸೀಸನ್‌ ಯುಎಇನಲ್ಲಿ ನಡೆಯಿತು.

IPL ಅಭಿಮಾನಿಗಳಿಗೆ ಗುಡ್ ನ್ಯೂಸ್: ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Wednesday, November 24, 2021, 12:48 [IST]
Other articles published on Nov 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X