
ಕೋಲ್ಕತ್ತಾದ ಜಾಧವ್‌ಪುರ ಯೂನಿವರ್ಸಿಟಿ ಗ್ರೌಂಡ್ 2ನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಗ್ರೂಪ್ B ಫೈಟ್‌ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಂತಹ ಕರ್ನಾಟಕ ಆರಂಭಿಕ ಮೇಲುಗೈ ಸಾಧಿಸಿದೆ. ನಾಯಕ ಮಯಾಂಕ್ ಅಗರ್ವಾಲ್ ಅನುಪಸ್ಥಿತಿಯಲ್ಲಿ ಆರ್. ಸಮರ್ಥ್ ತಂಡವನ್ನ ಮುನ್ನಡೆಸುತ್ತಿದ್ದು, ಬೌಲರ್‌ಗಳು ಉತ್ತಮವಾಗಿ ಸ್ಪಂದಿಸಿದ್ದಾರೆ.
ಮೊದಲ 15 ಓವರ್‌ಗಳಲ್ಲಿ ಡೆಲ್ಲಿಯ ಪ್ರಮುಖ ನಾಲ್ಕು ವಿಕೆಟ್‌ಗಳನ್ನ ಎಗರಿಸುವಲ್ಲಿ ಕರ್ನಾಟಕದ ಬೌಲರ್‌ಗಳು ಯಶಸ್ವಿಯಾಗಿದ್ದು, ಡೆಲ್ಲಿ ಪರ ಹಿಮ್ಮತ್ ಸಿಂಗ್ 1, ಧೃವ್ ಶೋರೆ 9, ಯಶ್ ಧುಲ್ 1, ಶಿವಾಂಕ್ ವೈಶಿಷ್ಟ್ 12ರನ್‌ಗಳಿಸಿ ರನೌಟ್ ಆಗಿದ್ದಾರೆ.
ಕರ್ನಾಟಕದ ಪರ ಅದ್ಭುತ ಬೌಲಿಂಗ್ ಮಾಡಿರುವ ವಾಸುಕಿ ಕೌಶಿಕ್ ಎರಡು ವಿಕೆಟ್ ಪಡೆದಿದ್ದು, ವಿಧ್ವತ್ ಕಾವೇರಪ್ಪ 1 ವಿಕೆಟ್ ತಮ್ಮದಾಗಿಸಿಕೊಂಡರು.
ಗ್ರೂಪ್ ಬಿನಲ್ಲಿ ಆಡಿರುವ 3 ಪಂದ್ಯಗಳನ್ನ ಗೆದ್ದಿರುವ ಮಯಾಂಕ್ ನಾಯಕತ್ವದ ಕರ್ನಾಟಕ ತಂಡವು ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿದ್ದು, ಅದಕ್ಕೂ ಮುನ್ನ ಡೆಲ್ಲಿ ತಂಡವನ್ನ ಎಷ್ಟು ಮೊತ್ತಕ್ಕೆ ಕಟ್ಟಿಹಾಕಲಿದೆ ಎಂಬುದನ್ನ ಕಾದು ನೋಡಬೇಕು.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಕರ್ನಾಟಕ:
ರವಿಕುಮಾರ್ ಸಮರ್ಥ್ (ನಾಯಕ), ನಿಕಿನ್ ಜೋಸ್, ಮನೀಶ್ ಪಾಂಡೆ, ಮನೋಜ್ ಬಂಡಾಜೆ, ಅಭಿನವ್ ಮನೋಹರ್, ಶರತ್ ಬಿಆರ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ವಾಸುಕಿ ಕೌಶಿಕ್, ರೋನಿತ್ ಮೋರೆ, ವಿಧ್ವತ್ ಕಾವೇರಪ್ಪ
ಬೆಂಚ್: ಮುರಳೀಧರ ವೆಂಕಟೇಶ್, ನಿಹಾಲ್ ಉಳ್ಳಾಲ್, ಜಗದೀಶ ಸುಚಿತ್, ಮಯಾಂಕ್ ಅಗರ್ವಾಲ್
ಡೆಲ್ಲಿ:
ಧೃವ್ ಶೊರೆ, ಹಿಮ್ಮತ್ ಸಿಂಗ್, ಯಶ್ ದುಲ್, ನಿತಿಶ್ ರಾನಾ (ನಾಯಕ), ಲಲಿತ್ ಯಾದವ್, ಆಯುಷ್ ಬದೋನಿ, ಲಕ್ಷಯ್ ತರೇಜಾ(ವಿಕೆಟ್ ಕೀಪರ್), ಶಿವಾಂಕ್ ವೈಶಿಷ್ಟ, ನವದೀಪ್ ಸೈನಿ, ಮಯಾಂಕ್ ಅಗರ್ವಾಲ್, ಪ್ರದೀಪ್ ಸಂಗ್ವಾನ್
ಬೆಂಚ್: ಜಾಂಟಿ ಸಿಧು, ಅನುಜ್ ರಾವತ್, ಇಶಾಂತ್ ಶರ್ಮಾ, ಶಿಖರ್ ಧವನ್, ಯೋಗೆಶ್ ಶರ್ಮಾ, ವೈಭವ್ ಕಂಡ್ಪಾಲ್, ಹ್ರಿತಿಕ್ ಶೊಕೀನ್, ಹರ್ಷಿತ್ ರಾನಾ