RCB ಬಗ್ಗೆ ಮಾಜಿ ಮಾಲೀಕ ವಿಜಯ್ ಮಲ್ಯ ಹೇಳಿದ್ದೇನು?

ಬೆಂಗಳೂರು, ಮೇ 08: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಕೊನೆಯ ಸ್ಥಾನ ಪಡೆದು ಸ್ಪರ್ಧೆಯಿಂದ ಹೊರ ಬಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪೇಪರ್ ಮೇಲಷ್ಟೇ ಅದ್ಭುತ ತಂಡವೆಂದು ಆರ್‌ಸಿಬಿಯ ಮಾಜಿ ಸಹ ಮಾಲೀಕ ವಿಜಯ್ ಮಲ್ಯ ವ್ಯಂಗ್ಯವಾಡಿದ್ದಾರೆ.
ತಂಡದ ಪ್ರದರ್ಶನ ಕುರಿತಾಗಿ ಮತ್ತು ಅಭಿಮಾನಿಗಳಿಗಾಗಿ ನಾಯಕ ವಿರಾಟ್ ಕೊಹ್ಲಿ ವಿಶೇಷ ಟ್ವೀಟ್ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಮಲ್ಯ, ಕೊಹ್ಲಿ ಹೊರತಾಗಿ, ಎಬಿ ಡಿ'ವಿಲಿಯರ್ಸ್, ಮಾರ್ಕಸ್ ಸ್ಟೋಯ್ನಿಸ್, ಮೊಯೀನ್ ಅಲಿ ಹಾಗೂ ಶಿಮ್ರಾನ್ ಹೆಟ್ಮಾಯೆರ್ ಅವರನ್ನು ಒಳಗೊಂಡ ಆರ್‌ಸಿಬಿ ತಂಡವನ್ನು "ಅದ್ಭುತ ತಂಡ ಆದರೆ, ದುರದೃಷ್ಟವಶಾತ್ ಕೇವಲ ಪೇಪರ್ ಮೇಲಷ್ಟೇ,'' ಎಂದು ಲೇವಡಿ ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಕಳಪೆ ಆರಂಭ ಕಂಡು ಸಾಲು ಸಾಲು ಪಂದ್ಯಗಳನ್ನು ಸೋತಿತು. ಸತತ 7 ಪಂದ್ಯಗಳನ್ನು ಸೋತು ಕಂಗಾಲಾಗಿದ್ದ ವಿರಾಟ್ ಕೊಹ್ಲಿ ಸಾರಥ್ಯದ ಆರ್‌ಸಿಬಿ, ಟೂರ್ನಿಯ ದ್ವಿತೀಯಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿ 5 ಪಂದ್ಯಗಳಲ್ಲಿ ಜಯ ದಾಖಲಿಸಿತು. ಆದರೆ, ಅಷ್ಟೊತ್ತಿಗಾಗಲೇ ತಂಡಕ್ಕೆ ಪ್ಲೇ ಆಫ್ಸ್‌ನ ಕದ ಮುಚ್ಚಿ ಹೋಗಿತ್ತು.
ಕೊಹ್ಲಿ ಮೇಲಿನ ಕೋಪಕ್ಕೆ ಅಂಪೈರ್ ನಿಗೆಲ್ ಲಾಂಗ್ ಮಾಡಿದ್ದೇನು?
ಇದಾದ ಬಳಿಕ ತಂಡದ ನಾಯಕ ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ ತಮ್ಮ ತಂಡಕ್ಕೆ ನಿಸ್ವಾರ್ಥ ಬೆಂಬಲ ನೀಡಿದ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿ ಭಾವನಾತ್ಮಕ ಸಂದೇಶ ರವಾನಿಸಿದ್ದರು.
"ತಂಡದ ಎಲ್ಲಾ ಆಟಗಾರರಿಗೆ, ಸಹಾಯಕ ಸಿಬ್ಬಂದಿಗೆ, ಗ್ರೌಂಡ್ ಸ್ಟಾಫ್ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು.'' ಎಂದು ಟ್ವೀಟ್ ಮಾಡಿರುವ ಕೊಹ್ಲಿ ಅಂತ್ಯದಲ್ಲಿ 'ನೀವು ಇಲ್ಲಾಂದ್ರೆ ನಾವು ಏನು ಅಲ್ಲಾ' ಎಂದು ಕನ್ನಡದಲ್ಲೂ ಸಂದೇಶ ರವಾನಿಸಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯ್ ಮಲ್ಯ ಆರ್‌ಸಿಬಿ ತಂಡ ಪೇಪರ್ ಹುಲಿಯಂತೆ ಎನ್ನುವ ಹಾಗೆ ಅಣಕಿಸಿದ್ದಾರೆ. ಐಪಿಎಲ್‌ನಲ್ಲಿ ಮೂರು ಬಾರಿ ರನ್ನರ್ಸ್‌ಅಪ್ ಪ್ರಶಸ್ತಿ ಪಡೆದಿರುವ ರಾಯಲ್ ಚಾಲೆಂಜರ್ಸ್ ಸತತ 12 ಆವೃತ್ತಿಗಳಲ್ಲಿ ಪ್ರಶಸ್ತಿ ಗೆಲ್ಲದೇ ಉಳಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications