ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಮೇಲಿನ ಕೋಪಕ್ಕೆ ಅಂಪೈರ್‌ ನಿಗೆಲ್‌ ಲಾಂಗ್‌ ಮಾಡಿದ್ದೇನು?

IPL 2019 : ಬೆಂಗಳೂರಿನಲ್ಲಿ ಬಾಗಿಲು ಮುರಿದ ಅಂಪೈರ್..! ಇದಕ್ಕೆ ಕಾರಣ ವಿರಾಟ್..!? | Oneindia Kannada
umpire Nigel Llong damages door, After spat with Virat Kohli

ಬೆಂಗಳೂರು, ಮೇ 07: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯಲ್ಲಿ ಈ ಬಾರಿ ಅಂಪೈರ್‌ಗಳು ಕೂಡ ಸಾಕಷ್ಟು ಸುದ್ದಿ ಮಾಡಿದ್ದಾರೆ. ಟೂರ್ನಿಯ ಆರಂಭದಲ್ಲಿ ಕಳಪೆ ನಿರ್ಧಾರಗಳ ಮೂಲಕ ಮತ್ತು ಚೆಂಡನ್ನು ಜೇಬಲ್ಲೇ ಇರಿಸಿ ಬೇರೆಲ್ಲಾ ಕಡೆ ಹುಡುಕಾಟ ನಡೆಸಿದ್ದು, ಹೀಗೆ ಹಲವು ಬಾರಿ ಅಂಪೈರ್‌ಗಳು ಎಲ್ಲರ ಗಮನ ತಮ್ಮತ್ತ ಸೆಳೆದಿದ್ದರು.

ಐಪಿಎಲ್‌ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದೀಗ ಈ ಪಟ್ಟಿಗೆ ಐಸಿಸಿ ಎಲೈಟ್‌ ಪ್ಯಾನೆಲ್‌ ಅಂಪೈರ್‌ ನಿಗೆಲ್‌ ಲಾಂಗ್‌ ಹೊಸ ಸೇರ್ಪಡೆಯಾಗಿದ್ದಾರೆ. ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ಜತೆಗಿನ ಮಾತಿನ ಚಕಮಕಿ ಬಳಿಕ ಅಂಪೈರ್‌ ರೂಮ್‌ಗೆ ತೆರಳಿದ ಲಾಂಗ್‌ ಕೊಠಡಿಯ ಬಾಗಿಲಿಗೆ ಕೋಪದಿಂದ ಒದ್ದು ಮುರಿದು ಹಾಕಿದ್ದಾರೆ.

RCB ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ!RCB ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ!

ಮೇ 4ರಂದು (ಶನಿವಾರ) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಸನ್‌ರೈಸರ್ಸ್‌ ಹೈದರಬಾದ್‌ ನಡುವಣ ಪಂದ್ಯದ ವೇಳೆ ನಡೆದ ಘಟನೆಯಿದು. ಆರ್‌ಸಿಬಿ ತಂಡದ ವೇಗಿ ಉಮೇಶ್‌ ಯಾದವ್‌ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ನೋಬಾಲ್‌ ಎಸೆದಿದ್ದಾರೆ ಎಂದು ಲಾಂಗ್‌ ತೀರ್ಪು ನೀಡಿದ್ದರು.

ಆದರೆ, ಟೆಲಿವಿಷನ್‌ ರೀಪ್ಲೇನಲ್ಲಿ ಉಮೇಶ್‌ ಅವರ ಪಾದ ಗೆರೆಯ ಒಳಗೇ ಇರುವುದು ಸ್ಪಷ್ಟವಾಗಿತ್ತು. ಇದಕ್ಕೆ ಬೌಲರ್‌ ಉಮೇಶ್‌ ಮತ್ತು ನಾಯಕ ಕೊಹ್ಲಿ ಕೂಡಲೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಲಾಂಗ್‌ ಮತ್ತು ಕೊಹ್ಲಿ ನಡುವೆ ಕೆಲಕಾಲ ಮಾತಿನ ಚಕಮಕಿಯೂ ನಡೆಯಿತು.

 ಅವಕಾಶ ಸಿಕ್ರೆ ಮಿ. ನ್ಯಾಗ್ಸ್‌ ಪಾತ್ರ ಮಾಡ್ತೇನೆಂದ ಕೊಹ್ಲಿ: ವಿಡಿಯೊ ಅವಕಾಶ ಸಿಕ್ರೆ ಮಿ. ನ್ಯಾಗ್ಸ್‌ ಪಾತ್ರ ಮಾಡ್ತೇನೆಂದ ಕೊಹ್ಲಿ: ವಿಡಿಯೊ

ಇದಾದ ಬಳಿಕ ಇನಿಂಗ್ಸ್‌ ಬ್ರೇಕ್‌ ವೇಳೆ ಅಂಪೈರ್‌ ರೂಮ್‌ಗೆ ತೆರಳಿದ ನಿಗೆಲ್‌ ಲಾಂಗ್‌, ವಿರಾಟ್‌ ಕೊಹ್ಲಿ ಅವರ ಮೇಲಿನ ಕೋಪವನ್ನು ಕೊಠಡಿಯ ಬಾಗಿಲಿನ ಮೇಲೆ ತೀರಿಸಿ ಅದನ್ನು ಮುರಿದು ಹಾಕಿದ್ದಾರೆ. ಕೊನೆಗೆ ತಮ್ಮ ತಪ್ಪಿನ ಅರಿವಾಗಿ ಕೂಡಲೇ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಅಧಿಕಾರಿಗಳಿಗೆ ಕೊಠಡಿ ಬಾಗಿಲನ್ನು ಸರಿ ಪಡಿಸಲು 5000 ರೂ. ಹಣವನ್ನು ನೀಡಿದ್ದಾರೆ. ಲಾಂಗ್‌ ಹಣ ನೀಡಿರುವುದನ್ನು ಕೆ.ಎಸ್‌.ಸಿ.ಎ ಕಾರ್ಯದರ್ಶಿ ಸುಧಾಕರ್‌ ರಾವ್‌ ಬಿಸಿಸಿಐಗೆ ತಿಳಿಸಿದ್ದಾರೆ.

 ರಾಹುಲ್‌ ಬ್ಯಾಟಿಂಗ್‌ ಬಗ್ಗೆ ಕ್ರಿಸ್‌ ಗೇಲ್‌ ಈ ರೀತಿ ಹೇಳಿದ್ದಾರೆ ರಾಹುಲ್‌ ಬ್ಯಾಟಿಂಗ್‌ ಬಗ್ಗೆ ಕ್ರಿಸ್‌ ಗೇಲ್‌ ಈ ರೀತಿ ಹೇಳಿದ್ದಾರೆ

56 ಟೆಸ್ಟ್‌ ಪಂದ್ಯಗಳಲ್ಲಿ ಅಂಪೈರ್‌ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಬ್ರಿಟನ್‌ ಮೂಲದ ಅಂಪೈರ್‌, 123 ಏಕದಿನ ಪಂದ್ಯಗಳು ಮತ್ತು 32 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲೂ ಅಂಪೈರ್‌ ಜವಾಬ್ದಾರಿ ನಿಭಾಯಿಸಿದ್ದಾರೆ. ಇದೀಗ ಮೇ 12ರಂದು ನಡೆಯಲಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಫೈನಲ್‌ ಪಂದ್ಯದಲ್ಲೂ ಲಾಂಗ್‌ ಅಂಪೈರ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

Story first published: Tuesday, May 7, 2019, 18:12 [IST]
Other articles published on May 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X