ಶ್ರೀಲಂಕಾ ವಿರುದ್ಧ ಕೊನೆ ಟೆಸ್ಟ್ ಪಂದ್ಯಕ್ಕೆ ಕರುಣ್ ನಾಯರ್
ಮುಂಬೈ, ಆಗಸ್ಟ್ 24: ರಣಜಿ ಫೈನಲ್ ನಲ್ಲಿ ತ್ರಿಶತಕ ಹಾಗೂ ಇತ್ತೀಚೆಗೆ ದಕ್ಷಿಣ ಆಫ್ರಿಕಾ ಎ ವಿರುದ್ಧ ಭರ್ಜರಿ ಶತಕ ಸಿಡಿಸಿದ ಕರ್ನಾಟಕದ ಕರುಣ್ ನಾಯರ್ ಅವರಿಗೆ ಶ್ರೀಲಂಕಾ ವಿರುದ್ಧ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಆಡುವ ಅವಕಾಶ ಸಿಕ್ಕಿದೆ. ಈ ಶುಭ ಸುದ್ದಿಯನ್ನು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಕೆಎಸ್ ಸಿಎ ಸಮಾರಂಭದಲ್ಲಿ ಘೋಷಿಸಿದ್ದು ವಿಶೇಷವಾಗಿತ್ತು.
ಕರ್ನಾಟಕದ ಪ್ರತಿಭಾವಂತ ಬ್ಯಾಟ್ಸ್ ಮನ್ ಕರುಣ್ ನಾಯರ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 'ಎ' ತಂಡದ ಮಾನ ಉಳಿಸಿದ್ದರು. ದಕ್ಷಿಣ ಆಫ್ರಿಕಾ 'ಎ' ತಂಡದ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ ಡ್ರಾ ಸಾಧಿಸಿದೆ. [ತಮಿಳುನಾಡು ಬಗ್ಗು ಬಡಿದು ಟ್ರೋಫಿ ಎತ್ತಿದ ಕರ್ನಾಟಕ]
ಭಾರತ ಎ ಪರ 23 ವರ್ಷ ವಯಸ್ಸಿನ ಕರುಣ್ ನಾಯರ್ ಅವರು ಅಜೇಯ 114ರನ್ ಗಳಿಸಿದ್ದು ಪಂದ್ಯ ಡ್ರಾ ಮಾಡಿಕೊಳ್ಳಲು ನೆರವಾಗಿತ್ತು. [ಗುಂಡಪ್ಪ ವಿಶ್ವನಾಥ್ ದಾಖಲೆ ಮುರಿದ ಕರುಣ್]
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಲಂಕಾ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು 63 ರನ್ ಗಳಿಂದ ಸೋತಿದ್ದು, ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಸನಿಹದಲ್ಲಿದೆ.

ಕರುಣ್, ನಮನ್ ಗೆ ಮೊದಲ ಅನುಭವ
ಆಗಸ್ಟ್ 28ರಂದು ಸಿಂಹಳೀಸ್ ಸ್ಫೋರ್ಟ್ಸ್ ಕ್ಲಬ್ ನಲ್ಲಿ ಆರಂಭವಾಗಲಿರುವ ಸರಣಿಯ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಈ ಇಬ್ಬರು ಆಟಗಾರರಿಗೆ ಮೊದಲ ಅನುಭವ ನೀಡಲಿದೆ.ಕನ್ನಡಿಗ ಕೆಎಲ್ ರಾಹುಲ್ ಅವರು ಈಗಾಗಲೇ ಟೆಸ್ಟ್ ಸರಣಿಯಲ್ಲಿ ಶತಕ ಬಾರಿಸಿ ಉತ್ತಮ ಸಾಧನೆ ತೋರಿದ್ದಾರೆ.

ಕರುಣ್ ನಾಯರ್
ಕಳೆದ ಮಾರ್ಚ್ ತಿಂಗಳಿನಲ್ಲಿ ಕರ್ನಾಟಕ ಪರ ಆಡುತ್ತಾ ರಣಜಿ ಫೈನಲ್ ನಲ್ಲಿ ತಮಿಳುನಾಡು ವಿರುದ್ಧ ಕರುಣ್ ನಾಯರ್ ಅವರು ತ್ರಿಶತಕ ಬಾರಿಸಿದ್ದರು. 23 ವರ್ಷ ವಯಸ್ಸಿನ ಕರುಣ್ ಪ್ರಥಮ ದರ್ಜೆಯಲ್ಲಿ 23 ಪಂದ್ಯಗಳಲ್ಲಿ 50ಕ್ಕೂ ಅಧಿಕ ರನ್ ಸರಾಸರಿಯಂತೆ 1,724ರನ್ ಕಲೆ ಹಾಕಿದ್ದಾರೆ.

ಅನುಭವಿ ವಿಕೆಟ್ ಕೀಪರ್
32 ವರ್ಷ ನಮನ್ ಓಜಾ ಅವರು ಟೀಂ ಇಂಡಿಯಾ ಪರ 2 ಏಕದಿನ ಪಂದ್ಯ 1 ಟಿ20 ಪಂದ್ಯವನ್ನಾಡಿದ್ದಾರೆ. ಪ್ರಥಮ ದರ್ಜೆಯಲ್ಲಿ 112 ಪಂದ್ಯಗಳಲ್ಲಿ 7,500ಕ್ಕೂ ಅಧಿಕ ರನ್ ಗಳಿಸಿದ್ದಾರೆ.

ಆಡುವ XI ಆಯ್ಕೆಯನ್ನು ಇನ್ನಷ್ಟು ಕಷ್ಟ
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಲಂಕಾ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು 63 ರನ್ ಗಳಿಂದ ಸೋತಿದ್ದು, ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಸನಿಹದಲ್ಲಿದೆ. ತಂಡದಲ್ಲಿ ಗಾಯದ ಸಮಸ್ಯೆ ಹೆಚ್ಚಾಗಿರುವುದು ಆಡುವ XI ಆಯ್ಕೆಯನ್ನು ಇನ್ನಷ್ಟು ಕಷ್ಟಗೊಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications