Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಪಿಎಲ್: ಉಳಿಸಿಕೊಂಡ ಆಟಗಾರರಲ್ಲಿ ವಿನಯ್, ಮನೀಷ್ ಪ್ರಮುಖರು

Vinay Kumar, Manish Pandey head list of retained players

ಬೆಂಗಳೂರು, ಜುಲೈ 18: ಏಳು ಫ್ರಾಂಚೈಸಿಗಳು ಜುಲೈ 21ರ ಶನಿವಾರ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) VIIಕ್ಕಾಗಿ ನಡೆಯುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿವೆ. ಆದರೆ ಹರಾಜಿಗೆ ಮುನ್ನ ತಂಡಗಳು ತನ್ನಲ್ಲೇ ಉಳಿಸಿಕೊಂಡಿರುವ ಆಟಗಾರರ ಸಾಲಿನಲ್ಲಿ ಮನೀಷ್ ಪಾಂಡೆ, ವಿನಯ್ ಕುಮಾರ್ ಪ್ರಮುಖರು.

ಏಳು ತಂಡಗಳಲ್ಲ ಒಂದೊಂದು ತಂಡ ತಲಾ ನಾಲ್ಕು ನಾಲ್ಕು ಮಂದಿಯನ್ನು ತನ್ನಲ್ಲೇ ಉಳಿಸಿಕೊಳ್ಳಬಹುದು. ಹೀಗಾಗಿ ಒಟ್ಟು 28 ಆಟಗಾರರು ಉಳಿಸಿಕೊಂಡ ಆಟಗಾರರ ಸಾಲಿನಲ್ಲಿ ಬರುತ್ತಾರೆ. ಆದರೆ ಫ್ರಾಂಚೈಸಿಗಳು ಸುಮ್ಮನೆ ಆಟಗಾರರನ್ನು ತನ್ನಲೇ ಉಳಿಸಿಕೊಳ್ಳಲೊಲ್ಲವು. ಪ್ರತಿಭೆಗಳಿಗನುಗುಣವಾಗಿ ಆಟಗಾರರ ಉಳಿಕೆಗೆ ಆದ್ಯತೆ ನೀಡಲು ಫ್ರಾಂಚೈಸಿಗಳು ಮುಂದಾಗಲಿವೆ.

ಭಾರತ ತಂಡದಲ್ಲಿದ್ದ ಅಂತಾರಾಷ್ಟ್ರೀಯ ಆಟಗಾರರಾದ ವಿನಯ್ ಅವರನ್ನು ಹುಬ್ಳಿ ಟೈಗರ್ಸ್, ಮನೀಷ್ ಪಾಂಡೆ ಮತ್ತು ಸ್ಟುವರ್ಟ್ ಬಿನ್ನಿ ಅವರನ್ನು ಬೆಳಗಾವಿ ಪ್ಯಾಂಥರ್ಸ್ ಉಳಿಸಿಕೊಂಡಿದ್ದು, ಈ ಮೂವರೂ ಫ್ರಾಂಚೈಸಿಗಳು ಉಳಿಕೆ ಆದ್ಯತೆಯಿಟ್ಟ ಆಟಗಾರರಲ್ಲಿ ಪ್ರಮುಖರು.

ಬೇರೆ ಬೇರೆ ಕಾರಣಗಳಿಗಾಗಿ ಮಾಯಂಕ್ ಅಗರ್ವಾಲ್, ಕರುಣ್ ನಾಯರ್, ಕೆ ಗೌತಮ್ ಮತ್ತು ಶ್ರೇಯಸ್ ಗೋಪಾಲ್ ಅವರಂತ ಆಟಗಾರರನ್ನು ತಂಡಗಳು ಉಳಿಸಿಕೊಂಡಿಲ್ಲ. ಆದರೆ ಈ ಆಟಗಾರರಲ್ಲಿ ಅಗರ್ವಾಲ್, ನಾಯರ್ ಶನಿವಾರದ ಹರಾಜು ಪ್ರಕ್ರಿಕೆಯಲ್ಲಿ ದೊಡ್ಡ ಮೊತ್ತಕ್ಕೆ ಖರೀದಿಸ್ಪಡುವುದರಲ್ಲಿ ಅನುಮಾನವಿಲ್ಲ.

Story first published: Wednesday, July 18, 2018, 20:48 [IST]
Other articles published on Jul 18, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+