Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತೆಂಡೂಲ್ಕರ್ ಜೊತೆಗಿನ ಫೋಟೋ ಹಾಕಿ ಫ್ರೆಂಡ್ಸ್ ರೀಯೂನಿಯನ್ ಕಾಲೆಳೆದ ವಿನೋದ್ ಕಾಂಬ್ಳಿ

Vinod Kambli hilariously trolls FRIENDS Reunion

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚಾಗಿ ಟ್ರೆಂಡ್ ಆಗುತ್ತಿರುವ ವಿಷಯವೆಂದರೆ ಅದು 'ಫ್ರೆಂಡ್ಸ್ ರೀ ಯೂನಿಯನ್'. ಜನಪ್ರಿಯ ಟಿವಿ ಸರಣಿಯಾದ ಆಗಿರುವ ಫ್ರೆಂಡ್ಸ್‌ನಲ್ಲಿ ನಟಿಸಿದ್ದ ಕಲಾವಿದರೆಲ್ಲಾ ಮತ್ತೆ ಒಟ್ಟಿಗೆ ಸೇರಿದ ವಿಶೇಷ ಸಂಚಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಗೀಡಾಗಿದೆ.

ದುಡ್ಡಿಗಾಗಿ ಆಡಬೇಡಿ ದೇಶಕ್ಕಾಗಿ ಆಡಿ; ಲಂಕಾ ಆಟಗಾರರಿಗೆ ಅರವಿಂದ ಡಿ ಸಿಲ್ವಾ ತರಾಟೆ

ಈ ವಿಷಯದ ಮೇಲೆ ಹಲವಾರು ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರು ಟ್ವೀಟ್ ಮಾಡಿದ್ದರು. ಇತ್ತೀಚೆಗಷ್ಟೇ ರೋಹಿತ್ ಶರ್ಮಾ ಕೂಡ ಮೈದಾನದಲ್ಲಿ ಪ್ರೇಕ್ಷಕರ ಮುಂದೆ ತಾವು ಬ್ಯಾಟ್ ಮಾಡುತ್ತಿದ್ದ ಚಿತ್ರವೊಂದನ್ನು ಹಾಕಿ ಈ ರೀತಿಯ ಫ್ರೆಂಡ್ಸ್ ರೀಯೂನಿಯನ್ ಬೇಕು ಎಂದು ಬರೆದುಕೊಂಡಿದ್ದರು. ಹೀಗೆ ರೋಹಿತ್ ಶರ್ಮಾವರೆಗೂ ಕೂಡ ಈ 'ಫ್ರೆಂಡ್ಸ್ ರೀಯೂನಿಯನ್' ಟ್ರೆಂಡ್ ಹಬ್ಬಿತ್ತು.

ಆದರೆ ಇದೀಗ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಈ ಟ್ರೆಂಡ್ ವಿರುದ್ಧವಾಗಿ ಟ್ವೀಟ್ ಮಾಡಿದ್ದಾರೆ. ಹೌದು ಸಚಿನ್ ತೆಂಡೂಲ್ಕರ್ ಜೊತೆಗಿನ ತಮ್ಮ ಹಳೆಯ ಫೋಟೋ ಹಾಗೂ ಇತ್ತೀಚಿನ ಫೋಟೋಗಳೆರಡನ್ನೂ ಟ್ವೀಟ್ ಮಾಡುವ ಮೂಲಕ 'ಚಿಕ್ಕ ಹುಡುಗರು ರೀಯೂನಿಯನ್ ಹೊಂದಲು ಇಚ್ಛಿಸುತ್ತಾರೆ, ದೊಡ್ಡವರು ಎಂದೆಂದಿಗೂ ಜೊತೆಯಾಗಿಯೇ ಇರುತ್ತಾರೆ' ಎಂದು ಬರೆದುಕೊಳ್ಳುವ ಮೂಲಕ ಫ್ರೆಂಡ್ಸ್ ರೀಯೂನಿಯನ್ ಟ್ರೆಂಡ್‌‌ನ ಕಾಲೆಳೆದಿದ್ದಾರೆ.

Story first published: Friday, May 28, 2021, 11:21 [IST]
Other articles published on May 28, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+