ದುಡ್ಡಿಗಾಗಿ ಆಡಬೇಡಿ ದೇಶಕ್ಕಾಗಿ ಆಡಿ; ಲಂಕಾ ಆಟಗಾರರಿಗೆ ಅರವಿಂದ ಡಿ ಸಿಲ್ವಾ ತರಾಟೆ

ಇತ್ತೀಚೆಗಷ್ಟೇ ಶ್ರೀಲಂಕಾ ತಂಡದ ಆಟಗಾರರು ತಮ್ಮ ಕ್ರಿಕೆಟ್ ಬೋರ್ಡ್ ವಿರುದ್ಧವೇ ತಿರುಗಿಬಿದ್ದಿದ್ದರು. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಇತ್ತೀಚೆಗಷ್ಟೇ ನೂತನ ವೇತನ ಶ್ರೇಣಿಯನ್ನು ಬಿಡುಗಡೆ ಮಾಡಿತ್ತು, ಆದರೆ ಈ ವೇತನ ಆಟಗಾರರಿಗೆ ಸಮಾಧಾನಕರವಾಗಿರಲಿಲ್ಲ. ಹೀಗಾಗಿ ಲಂಕಾ ತಂಡದ ಆಟಗಾರರು ವೇತನ ಶ್ರೇಣಿ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ನಿರಾಕರಣೆ ಮಾಡಿದ್ದರು.

ಶೀಘ್ರದಲ್ಲಿಯೇ ಕೊಹ್ಲಿ ರೋಹಿತ್‌ಗೆ ನಾಯಕತ್ವ ಬಿಟ್ಟುಕೊಡುವುದು ಖಚಿತ ಎಂದ ಮಾಜಿ ಕ್ರಿಕೆಟಿಗ

ಈ ಕುರಿತು ಇದೀಗ ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ ಹಾಗೂ ಶ್ರೀಲಂಕಾ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಅರವಿಂದ ಡಿ ಸಿಲ್ವಾ ಪ್ರತಿಕ್ರಿಯೆ ನೀಡಿದ್ದಾರೆ. 'ಕ್ರಿಕೆಟಿಗರು ತಮ್ಮ ದೇಶಕ್ಕೋಸ್ಕರ ಕ್ರಿಕೆಟ್ ಆಡಬೇಕೆ ಹೊರತು ವೇತನ ಶ್ರೇಣಿ ಸರಿಯಿಲ್ಲ ಎಂದು ಬೋರ್ಡ್ ವಿರುದ್ಧ ತಿರುಗಿ ಬೀಳಬಾರದು. ನಮ್ಮ ಕ್ರಿಕೆಟ್ ಸಮಿತಿ ಆಟಗಾರರಿಗೆ ಈ ಹಿಂದಿಗಿಂತಲೂ ಹೆಚ್ಚಿನ ಸವಲತ್ತುಗಳನ್ನು ಒದಗಿಸಿದೆ, ಆಟಗಾರರ ಪ್ರದರ್ಶನದ ಆಧಾರದ ಮೇಲೆ ವೇತನ ಶ್ರೇಣಿಯನ್ನು ಪ್ರಕಟಿಸಿದ್ದು ಎಲ್ಲರಿಗೂ ಉತ್ತಮ ರೀತಿಯ ವೇತನವೇ ಸಿಗಲಿದೆ. ಆಟಗಾರರು ದೂರನ್ನು ಹೇಳುವ ಬದಲು ಉತ್ತಮ ಆಟವನ್ನು ಪ್ರದರ್ಶಿಸಬೇಕು' ಎಂದು ಅರವಿಂದ ಡಿ ಸಿಲ್ವಾ ಹೇಳಿದ್ದಾರೆ.

ಇಂಗ್ಲೆಂಡ್, ಪಾಕಿಸ್ತಾನ ಅಲ್ಲ ಈ ತಂಡ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲಲಿದೆ ಎಂದ ವಾಸಿಮ್ ಅಕ್ರಮ್

ಪ್ರಸ್ತುತ ಬಾಂಗ್ಲಾದೇಶದ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ತಂಡ 3 ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಈ ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳು ಮುಗಿದಿದ್ದು ಶ್ರೀಲಂಕಾ ತಂಡ ಎರಡೂ ಪಂದ್ಯಗಳಲ್ಲಿಯೂ ಬಾಂಗ್ಲಾದೇಶದ ವಿರುದ್ಧ ಸೋಲುಂಡಿದೆ. ಸರಣಿಯ ಮೂರನೇ ಪಂದ್ಯ ಶುಕ್ರವಾರ ನಡೆಯಲಿದ್ದು ಲಂಕಾ ತಂಡ ಒಂದು ಪಂದ್ಯವನ್ನಾದರೂ ಗೆಲ್ಲುತ್ತಾ ಎಂಬುದನ್ನು ಕಾದು ನೋಡಬೇಕಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, May 28, 2021, 10:30 [IST]
Other articles published on May 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X