Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಾಷ್ಟ್ರೀಯ ಕ್ರೀಡಾ ದಿನದಂದು ಟ್ರೇಡ್ ಮಾರ್ಕ್ ಶಾಟ್ ಹೊಡೆದ ಸಚಿನ್ ತೆಂಡೂಲ್ಕರ್

Sachin tendulkar

ಸಚಿನ್ ತೆಂಡೂಲ್ಕರ್ ಮತ್ತೆ ಬ್ಯಾಟ್ ಕೈಗೆತ್ತಿಕೊಂಡಿದ್ದಾರೆ. ಹೌದಾ ಎಂದು ನಿಮಗೆ ಆಶ್ಚರ್ಯವಾಗಬಹುದು. ಟಿ20 ಅಲ್ಲ, ಟಿ10 ಆಡುವ ಹುಮ್ಮಸ್ಸಿನಲ್ಲಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಅದ್ಭುತ ಕವರ್ ಡ್ರೈವ್‌ ಸ್ಕ್ವೇರ್ ಕಟ್‌ಗಳು, ಸ್ಟ್ರೈಟ್‌ ಡ್ರೈವ್‌ ಮೂಲಕ ಮತ್ತೆ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಬ್ಯಾಟಿಂಗ್ ನೋಡುವುದು ಕ್ರಿಕೆಟ್ ಪ್ರೇಮಿಗಳಿಗೆ ಒಂದು ದೊಡ್ಡ ಔತಣವಾಗಿದೆ. ರಾಷ್ಟ್ರೀಯ ಕ್ರೀಡಾ ದಿನದಂದು ಇಂತಹ ಒಂದು ಅವಕಾಶ ಅಭಿಮಾನಿಗಳಿಗೆ ಒಲಿದುಬಂದಿತು.

ಸಚಿನ್ ತೆಂಡೂಲ್ಕರ್ ಕಳೆದ ವರ್ಷ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ಆಡಿದ್ದರು. ಲೀಗ್ ಆಫ್ ಲೆಜೆಂಡ್ಸ್ ಸೆಪ್ಟೆಂಬರ್ 16 ರಿಂದ ಪ್ರಾರಂಭವಾಗುತ್ತದೆ. ಹಾಗಾಗಿ ಸೌರವ್ ಗಂಗೂಲಿ ಕೂಡ ಆಡಲಿದ್ದಾರೆ. ಆದ್ರೆ ಇದುವರೆಗೂ ಕ್ರಿಕೆಟಿಗರ ಪಟ್ಟಿಯಲ್ಲಿ ಸಚಿನ್ ಹೆಸರು ಇಲ್ಲ. ಸೌರವ್ ಲೀಗ್ ಆಫ್ ಲೆಜೆಂಡ್ಸ್‌ಗೆ ಇನ್ನೂ ತಯಾರಿ ನಡೆಸಿಲ್ಲ. ಆದಾಗ್ಯೂ, ಭಾರತದ ಮಾಜಿ ನಾಯಕ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ಒಳಾಂಗಣದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿದೆ.

ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಜನ್ಮದಿನವನ್ನು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತದೆ. ಈ ದಿನದಂದು, ವಿವಿಧ ಕ್ರೀಡಾ ಪಟುಗಳು ಸಾಮಾಜಿಕ ಜಾಲತಾಣಗಳಲ್ಲಿ ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ಸಂದೇಶಗಳನ್ನು ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಂದೇಶದೊಂದಿಗೆ ಬರೆದುಕೊಂಡಿದ್ದಾರೆ, ಆಡಲು ವಯಸ್ಸು ಅಡ್ಡಿಯಿಲ್ಲ, ಕ್ರೀಡೆಗಳ ಮೂಲಕ ಭಾರತವನ್ನು ಸದೃಢ ರಾಷ್ಟ್ರವನ್ನಾಗಿ ಮಾಡಲು ಕರೆ ನೀಡಿದ್ದಾರೆ.

ಈ ಪೋಸ್ಟ್ ನಂತರ ಸಚಿನ್ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಸಚಿನ್ ಬ್ಯಾಟಿಂಗ್ ಮಾಡುತ್ತಿರುವುದನ್ನ ಕಾಣಬಹುದು. ರಾಷ್ಟ್ರೀಯ ಕ್ರೀಡಾ ದಿನದಂದು ನಿಮ್ಮ ನೆಚ್ಚಿನ ಕ್ರೀಡೆಯನ್ನು ನೀವು ಏಕೆ ಆಡಬಾರದು! ನನ್ನ ಜೀವನ ಕ್ರಿಕೆಟ್‌ಗೆ ಮುಡಿಪಾಗಿದೆ. ನಿಮ್ಮ ನೆಚ್ಚಿನ ಆಟದ ವೀಡಿಯೊವನ್ನು ಪೋಸ್ಟ್ ಮಾಡಿ ಎಂದು ಸಚಿನ್ ಒತ್ತಾಯಿಸಿದ್ದಾರೆ. ಇದೇ ವೇಳೆಯಲ್ಲಿ ಬ್ಯಾಟಿಂಗ್ ಮಾಡಿದ ರೀತಿ ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ.

Story first published: Monday, August 29, 2022, 23:59 [IST]
Other articles published on Aug 29, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+