ಏಷ್ಯಾದಲ್ಲಿ ತ್ವರಿತಗತಿಯಲ್ಲಿ 6 ಸಾವಿರ ರನ್, ಸಚಿನ್ ದಾಖಲೆ ಮುರಿದ ಕೊಹ್ಲಿ

ಪುಣೆ, ಅಕ್ಟೋಬರ್ 28: ಏಷ್ಯಾದಲ್ಲಿ ತ್ವರಿತಗತಿಯಲ್ಲಿ 6,000 ಏಕದಿನ ಅಂತಾರಾಷ್ಟ್ರೀಯ ರನ್ ಗಳಿಸಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಮತ್ತೊಂದು ದಾಖಲೆ ಬರೆದಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ಈ ದಾಖಲೆಯನ್ನು ಕೊಹ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸಾಧಿಸಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಏಕದಿನ ಪಂದ್ಯಗಳ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಶತಕ ಬಾರಿಸಿದರೂ, ಪಂದ್ಯ ಗೆಲ್ಲಲಾಗಲಿಲ್ಲ. ಆದರೆ, ಅನೇಕ ದಾಖಲೆಗಳನ್ನು ಮುರಿದರು. ಇದೇ ಪಂದ್ಯದಲ್ಲಿ ಏಷ್ಯಾದಲ್ಲಿ 6,000 ರನ್ ಗಡಿ ದಾಟಿದರು. ಈ ಮೂಲಕ ಏಷ್ಯಾದಲ್ಲಿ 6,000 ರನ್ ಗಡಿ ದಾಟಿದ 12ನೇ ಆಟಗಾರ ಎಂದೆನಿಸಿದರು.
ಸಚಿನ್ ತೆಂಡೂಲ್ಕರ್ ಅವರು ಈ ಹಿಂದೆ 142 ಇನ್ನಿಂಗ್ಸ್ ಗಳಲ್ಲಿ 6,000 ರನ್ ಗಡಿ ದಾಟಿ, ದಾಖಲೆ ಬರೆದಿದ್ದರು. ಆದರೆ, ವಿರಾಟ್ ಕೊಹ್ಲಿ ಅವರು 117 ಇನ್ನಿಂಗ್ಸ್ ನಲ್ಲೇ 6,000 ರನ್ ಗಳಿಸಿ, ಆ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
Story first published: Sunday, October 28, 2018, 12:04 [IST]
Other articles published on Oct 28, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications