ವಿಂಡೀಸ್ ವಿರುದ್ಧ ಅತ್ಯಧಿಕ ರನ್: ಸಚಿನ್ ದಾಖಲೆ ಮುರಿದ ಕೊಹ್ಲಿ


ವೈಜಾಗ್, ಅಕ್ಟೋಬರ್ 24: ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ನಿರ್ಮಿಸಿದ್ದ ದಾಖಲೆಯೊಂದನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುರಿದಿದ್ದಾರೆ.
ವೆಸ್ಟ್‌ಇಂಡೀಸ್ ವಿರುದ್ಧದ 5 ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಸರಣಿಯ ವೇಳೆ ಕೊಹ್ಲಿ ಅವರು ಈ ಸಾಧನೆ ಮಾಡಬಹುದಾಗಿದೆ. ಈ ಮೂಲಕ ವೆಸ್ಟ್‌ಇಂಡೀಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಭಾರತದ ಬ್ಯಾಟ್ಸ್ ಮನ್ ಎನಿಸಿಕೊಳ್ಳಬಹುದಾಗಿದೆ
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ತಮ್ಮ 37ನೇ ಶತಕ ಸಿಡಿಸಿದ ಕೊಹ್ಲಿ 129 ಎಸೆತಗಳಲ್ಲಿ 157ರನ್(13 ಬೌಂಡರಿ, 4 ಸಿಕ್ಸರ್) ಚೆಚ್ಚಿದರು. ಮೊದಲ ಏಕದಿನ ಪಂದ್ಯದಲ್ಲಿ 141ರನ್ ಬಾರಿಸಿದರು. ಒಟ್ಟಾರೆ, ಎರಡು ಪಂದ್ಯಗಳಿಂದ ಇಲ್ಲಿ ತನಕ 298ರನ್ ಕಲೆ ಹಾಕಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ್ದ ಸಚಿನ್ ದಾಖಲೆ ಮುರಿಯಲು ಕೊಹ್ಲಿಗೆ ಕೇವಲ 187 ರನ್ ಅಗತ್ಯವಿತ್ತು. ಈ ಸಾಧನೆ ಮಾಡಲು 5 ಏಕದಿನ ಪಂದ್ಯಗಳಿತ್ತು. ಆದರೆ, ಎರಡನೇ ಪಂದ್ಯದಲ್ಲೇ ಕೊಹ್ಲಿ ಈ ದಾಖಲೆ ಬದಿಗೊತ್ತಿದ್ದಾರೆ.
ತೆಂಡೂಲ್ಕರ್ ಅವರು ವಿಂಡೀಸ್ ವಿರುದ್ಧ 39 ಪಂದ್ಯಗಳನ್ನು ಆಡಿದ್ದು 52.73ರ ಸರಾಸರಿಯಲ್ಲಿ 4 ಶತಕ, 11 ಅರ್ಧಶತಕಗಳ ಸಹಿತ 1,573 ರನ್ ಗಳಿಸಿದ್ದಾರೆ. ತೆಂಡೂಲ್ಕರ್, ಕೊಹ್ಲಿ, ದ್ರಾವಿಡ್ ಹಾಗೂ ಗಂಗುಲಿ ವಿಂಡೀಸ್ ವಿರುದ್ಧ 1,000ಕ್ಕೂ ಅಧಿಕ ರನ್ ಗಳಿಸಿದ ಬ್ಯಾಟ್ಸ್ ಮನ್ ಗಳಾಗಿದ್ದಾರೆ.

ಮೊಹಮ್ಮದ್ ಅಜರುದ್ದೀನ್
ಪಂದ್ಯ :43
ರನ್ :998
ರನ್ ಸರಾಸರಿ: 26.26
100: 0
50 : 2
ಗರಿಷ್ಠ : 81
ಸ್ಟ್ರೈಕ್ ರೇಟ್: 73.17

ಸೌರವ್ ಗಂಗೂಲಿ
ಪಂದ್ಯ :27
ರನ್ : 1142
ರನ್ ಸರಾಸರಿ: 47.58
100: 0
50 : 11
ಗರಿಷ್ಠ : 98
ಸ್ಟ್ರೈಕ್ ರೇಟ್: 72.19

ರಾಹುಲ್ ದ್ರಾವಿಡ್
ಪಂದ್ಯ : 40
ರನ್ : 1348
ರನ್ ಸರಾಸರಿ: 42.13
100: 3
50 : 8
ಗರಿಷ್ಠ : 109*
ಸ್ಟ್ರೈಕ್ ರೇಟ್: 74.39

ಸಚಿನ್ ತೆಂಡೂಲ್ಕರ್
ಪಂದ್ಯ : 39
ರನ್ : 1573
ರನ್ ಸರಾಸರಿ: 52.43
100: 4
50 : 11
ಗರಿಷ್ಠ : 141*
ಸ್ಟ್ರೈಕ್ ರೇಟ್: 78.03

ವಿರಾಟ್ ಕೊಹ್ಲಿ
ಪಂದ್ಯ :27
ರನ್ : 1387
ರನ್ ಸರಾಸರಿ: 60.30
100: 4
50 : 9
ಗರಿಷ್ಠ : 151*
ಸ್ಟ್ರೈಕ್ ರೇಟ್: 92.28
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications