For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೂ ಮುನ್ನ ಕೊಹ್ಲಿಗೆ ಎಚ್ಚರಿಕೆ ನೀಡಿದ ಬಾಲ್ಯದ ಕೋಚ್!

Virat kohli

ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಸೇರಿದಂತೆ ಉಳಿದ ಲಿಮಿಟೆಡ್ ಓವರ್ ಸರಣಿ ಕುರಿತಾಗಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಬಾಲ್ಯದ ಕೋಚ್ ರಾಜಕುಮಾರ್ ಶರ್ಮಾ ಎಚ್ಚರಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಜುಲೈ 1 ರಂದು ಆರಂಭವಾಗಲಿದೆ. ಕಳೆದ ವರ್ಷ ನಡೆದ ಐದು ಪಂದ್ಯಗಳ ಸರಣಿಯಲ್ಲಿ ಇದು 5ನೇ ಪಂದ್ಯವಾಗಿದ್ದು, ಭಾರತ 2-1ರಲ್ಲಿ ಮುನ್ನಡೆ ಸಾಧಿಸಿತ್ತು.

ವಿರಾಟ್ ಕೊಹ್ಲಿ ಮೇಲಿದೆ ಎಲ್ಲರ ಕಣ್ಣು

ವಿರಾಟ್ ಕೊಹ್ಲಿ ಮೇಲಿದೆ ಎಲ್ಲರ ಕಣ್ಣು

ಇಂಗ್ಲೆಂಡ್ ಟೆಸ್ಟ್‌ನ ಈ ಪಂದ್ಯದಲ್ಲಿ ಭಾರತೀಯ ಅಭಿಮಾನಿಗಳೆಲ್ಲರ ಗಮನ ವಿರಾಟ್ ಕೊಹ್ಲಿ ಮೇಲಿದೆ. ಕಳೆದ 2 ವರ್ಷಗಳಿಂದ ಶತಕ ಬಾರಿಸದೇ ಇರುವ ಅವರು ನಾಯಕತ್ವಕ್ಕೆ ಗುಡ್‌ಬೈ ಹೇಳಿದ ಬಳಿಕ ತಾಜಾತನದಿಂದ ಕಂಗೊಳಿಸಲಿದ್ದಾರೆ. ಹೀಗಾಗಿ ಈ ಟೆಸ್ಟ್‌ನಲ್ಲಿ ಅವರ ಪುನರಾಗಮನ ಖಂಡಿತಾ ಆಗುವ ನಿರೀಕ್ಷೆ ಇದೆ.

ವಿರಾಟ್ ಕೊಹ್ಲಿ ಐಪಿಎಲ್ 2022ರ ಸೀಸನ್‌ನಲ್ಲಿ ರನ್‌ಗಳಿಸಲು ವಿಫಲರಾದರು. ಅಲ್ಲಿ ಅವರು 16 ಇನ್ನಿಂಗ್ಸ್‌ಗಳಲ್ಲಿ 22.73 ರ ಕಳಪೆ ಸರಾಸರಿಯಲ್ಲಿ 341 ರನ್ ಗಳಿಸಿದರು. ಇದಕ್ಕೂ ಮೊದಲು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕ ಸಿಡಿಸಿದ ಬಳಿಕ ವಿರಾಟ್ ಶತಕದ ಬರ ಎದುರಿಸುತ್ತಿದ್ದಾರೆ. ಆದ್ದರಿಂದ ಇಂಗ್ಲೆಂಡ್‌ನಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಬಹುದು ಎಂದು ನಂಬಲಾಗಿದೆ

ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ 90+ ಬಾರಿಸಿ ಶತಕ ಮಿಸ್ ಮಾಡಿಕೊಂಡ ಸಕ್ರಿಯ ಆಟಗಾರರಿವರು

ಕೊಹ್ಲಿ ಎಚ್ಚರದಿಂದರಬೇಕು: ರಾಜ್‌ಕುಮಾರ್ ಶರ್ಮಾ

ಕೊಹ್ಲಿ ಎಚ್ಚರದಿಂದರಬೇಕು: ರಾಜ್‌ಕುಮಾರ್ ಶರ್ಮಾ

ವಿರಾಟ್ ಕೊಹ್ಲಿ ಈ ಪರಿಸ್ಥಿತಿಯಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಅಭಿಮಾನಿಗಳಿಗೆ ಅದ್ಭುತ ಪಂದ್ಯವೊಂದು ಕಾದಿದೆ. ಏಕೆಂದರೆ ವಿರಾಟ್ ಕೊಹ್ಲಿ-ಆಂಡರ್ಸನ್ ಕಾದಾಟ ಉತ್ತಮವಾಗಿರುತ್ತದೆ. ವಿಕೆಟ್ ಪಡೆಯುವ ಉತ್ಸಾಹದಲ್ಲಿರುವ ಆ್ಯಂಡರ್ಸನ್ ಗೆ ಈ ಬಾರಿ ಗೆಲ್ಲುವ ಅವಕಾಶವಿದೆ ಎಂದಿದ್ದಾರೆ.

'Fab-4' ಪೈಕಿ ಅತಿ ಹೆಚ್ಚು ಟೆಸ್ಟ್ ರನ್‌ ಗಳಿಸುವ ಆಟಗಾರ ಈತ: ಭವಿಷ್ಯ ನುಡಿದ ಆಸಿಸ್ ದಿಗ್ಗಜ

ಈಗಾಗಲೇ ಹಲವು ಬಾರಿ ಕೊಹ್ಲಿ ವಿಕೆಟ್ ಉರುಳಿಸಿರುವ ಆ್ಯಂಡರ್ಸನ್

ಈಗಾಗಲೇ ಹಲವು ಬಾರಿ ಕೊಹ್ಲಿ ವಿಕೆಟ್ ಉರುಳಿಸಿರುವ ಆ್ಯಂಡರ್ಸನ್

ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ರಲ್ಲೂ ಇಂಗ್ಲೆಂಡ್‌ ಪಿಚ್‌ನಲ್ಲಿ ಆ್ಯಂಡರ್ಸನ್ ಹಲವು ಬಾರಿ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ವಿಕೆಟ್ ಪಡೆದಿರುವುದು ಆ್ಯಂಡರ್ಸನ್ ಗೆ ಮಾನಸಿಕವಾಗಿ ದೊಡ್ಡ ಶಕ್ತಿಯಾಗಿದೆ. ಇದು ವಿರಾಟ್ ಕೊಹ್ಲಿಗೆ ಕೊಂಚ ಕಹಿಯಾಗಲಿದೆ. 2014 ರಲ್ಲಿ ಅವರು 4 ಬಾರಿ ವಿರಾಟ್‌ನನ್ನು ಔಟ್ ಮಾಡಿದ್ದರು. ಹಾಗಾಗಿ ಇಲ್ಲಿ ಕೊಹ್ಲಿ ಮಾನಸಿಕವಾಗಿ ಎಷ್ಟು ಧೈರ್ಯಶಾಲಿ ಎಂಬುದು ಮುಖ್ಯ.

ಭಾರತೀಯ ಪಿಚ್‌ಗಳಲ್ಲಿ ಸ್ವಿಂಗ್ ಆಗುವುದು ಬಹಳ ಕಡಿಮೆ ಆದ್ರೆ, ಇಂಗ್ಲೆಂಡ್ ಪಿಚ್‌ಗಳಲ್ಲಿ ಸ್ವಿಂಗ್‌ಗೇನು ಕೊರತೆ ಇಲ್ಲ. ಹೀಗಾಗಿ ಪಿಚ್‌ನ ಗತಿಯನ್ನ ಅರಿತು ಬ್ಯಾಟ್ ಬೀಸಬೇಕಿದೆ.
ಇಲ್ಲದಿದ್ದರೆ ಅದು ಆಟಗಾರನ ಮನಸ್ಥಿತಿಯನ್ನ ಉಸಿರುಗಟ್ಟಿಸುತ್ತದೆ. ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರರು ಸವಾಲನ್ನು ಸ್ವೀಕರಿಸಿ ಗಟ್ಟಿಯಾಗಿ ನಿಂತರೆ ಆ್ಯಂಡರ್ಸನ್ ಬೌಲಿಂಗ್‌ಗೆ ಔಟಾಗುವುದಿಲ್ಲ. 2018ರಲ್ಲಿ ಆ್ಯಕ್ಷನ್ ತೋರಿದ ವಿರಾಟ್ ಮತ್ತೊಮ್ಮೆ ಅದೇ ಆಟ ಪ್ರದರ್ಶಿಸಬೇಕು.

Story first published: Friday, June 24, 2022, 10:30 [IST]
Other articles published on Jun 24, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+