ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ವಿಶಿಷ್ಠ ದಾಖಲೆಗಳೊಂದಿಗೆ ದಶಕ ಮುಗಿಸಿದ ವಿರಾಟ್ ಕೊಹ್ಲಿ!

Virat Kohli proves why he is King of ODI cricket | VIRAT KOHLI | KING KOHLI | ONEINDIA KANNADA
Virat Kohli ends decade with most runs, centuries, catches, man of the match awards

ನವದೆಹಲಿ, ಡಿಸೆಂಬರ್ 24: ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅರ್ಧಶತಕದಾಟದ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್ ರೋಚಕ ಜಯ ಗಳಿಸಿತ್ತು. ಅಲ್ಲದೆ 3 ಪಂದ್ಯಗಳ ಈ ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು.

ಶ್ರೀಲಂಕಾ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟಶ್ರೀಲಂಕಾ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ

ಕಟಕ್‌ನಲ್ಲಿ ನಡೆದ, ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಈ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಕಾರಣ ನಾಯಕ ವಿರಾಟ್ ಕೊಹ್ಲಿ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್-ರಾಹುಲ್ ಔಟಾದ ಬಳಿಕ ಕ್ರೀಸಿಗಂಟಿನಿಂದ ಕೊಹ್ಲಿ 81 ಎಸೆತಗಳಿಗೆ 85 ರನ್ ಸಿಡಿಸಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದ.ಆಫ್ರಿಕಾ ವೇಗಿ ವೆರ್ನಾನ್ ಫಿಲಾಂಡರ್ ನಿವೃತ್ತಿಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದ.ಆಫ್ರಿಕಾ ವೇಗಿ ವೆರ್ನಾನ್ ಫಿಲಾಂಡರ್ ನಿವೃತ್ತಿ

ಈ ವರ್ಷಾಂತ್ಯಕ್ಕೂ ಮುನ್ನ ದಶಕದ ಅವಧಿಯಲ್ಲಿ ವಿರಾಟ್ ಕೊಹ್ಲಿಯಿಂದಾದ ವಿಶೇಷ ಏಕದಿನ ದಾಖಲೆಗಳು ಕೆಳಗಿನಿಂತಿವೆ.

ಏಕದಿನ ಅತ್ಯಧಿಕ ರನ್

ಏಕದಿನ ಅತ್ಯಧಿಕ ರನ್

ವಿರಾಟ್ ಕೊಹ್ಲಿ ಒಟ್ಟು 233 ಏಕದಿನ ಇನ್ನಿಂಗ್ಸ್‌ಗಳಲ್ಲಿ 11609 ರನ್ ಗಳಿಸಿದ್ದಾರೆ. ಇದರಲ್ಲಿ 43 ಶತಕಗಳು, 55 ಅರ್ಧ ಶತಕಗಳು ಸೇರಿವೆ. ಅಲ್ಲದೆ 1095 ಫೋರ್‌ಗಳು, 120 ಸಿಕ್ಸರ್‌ಗಳನ್ನು ಕೂಡ ಬಾರಿಸಿದ್ದಾರೆ. ಕೊಹ್ಲಿ ಏಕದಿನದಲ್ಲಿ 59.84 ಸರಾಸರಿ, 93.28 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಕೊಹ್ಲಿ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದು 2008 ಆಗಸ್ಟ್‌ನಲ್ಲಿ.

ದಶಕದ ಅವಧಿಯಲ್ಲೂ ಕಿಂಗ್

ದಶಕದ ಅವಧಿಯಲ್ಲೂ ಕಿಂಗ್

ಏಕದಿನದಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಕೊಹ್ಲಿ, ದಶಕದ ಅವಧಿಯಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ಈ ಒಂದು ದಶತಕದಲ್ಲಿ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 11125 ರನ್ ಗಳಿಸಿದ್ದಾರೆ. ಇದರಲ್ಲಿ 42 ಶತಕಗಳು ಮತ್ತು 52 ಅರ್ಧ ಶತಕಗಳು ಸೇರಿವೆ. ಇವು ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ಮಟ್ಟದಲ್ಲಿ ದಶಕವೊಂದರಲ್ಲಿ ಆಟಗಾರನೊಬ್ಬ ತೋರಿಕೊಂಡ ಅತ್ಯುತ್ತಮ ಸಾಧನೆಯಾಗಿದೆ.

ರೋಹಿತ್ ಶರ್ಮಾ ಮೊದಲಿಗ

ರೋಹಿತ್ ಶರ್ಮಾ ಮೊದಲಿಗ

2019ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್‌ ಗಳಿಸಿದ ಆಟಗಾರರಲ್ಲಿ ಭಾರತ ರೋಹಿತ್ ಶರ್ಮಾ 1490 ರನ್‌ನೊಂದಿಗೆ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಈ ಸಾಲಿನಲ್ಲಿ ವಿರಾಟ್ ಕೊಹ್ಲಿ (1377 ರನ್), ವೆಸ್ಟ್ ಇಂಡೀಸ್‌ನ ಶಾಯ್ ಹೋಪ್ (1345), ಆಸ್ಟ್ರೇಲಿಯಾದ ಆ್ಯರನ್ ಫಿಂಚ್ (1141), ಪಾಕಿಸ್ತಾನದ ಬಾಬರ್ ಅಝಮ್ (1092) ಅನಂತರದ ಸ್ಥಾನಗಳಲ್ಲಿದ್ದಾರೆ.

ಅತೀ ಹೆಚ್ಚು ಪಂದ್ಯಶ್ರೇಷ್ಠ

ಅತೀ ಹೆಚ್ಚು ಪಂದ್ಯಶ್ರೇಷ್ಠ

ದಶಕದ ಅವಧಿಯಲ್ಲಿ ವಿರಾಟ್ ಕೊಹ್ಲಿಗೆ ಲಭಿಸಿದ ಒಟ್ಟು ಪಂದ್ಯಶ್ರೇಷ್ಠ ಪ್ರಶಸ್ತಿಗಳ ಸಂಖ್ಯೆ 35. ಸರಣಿಶ್ರೇಷ್ಠ ಪ್ರಶಸ್ತಿಗಳು 7. ಇನ್ನು ಈ ಅವಧಿಯಲ್ಲಿ ಕೊಹ್ಲಿ 1038 ಬೌಂಡರಿಗಳನ್ನು ಬಾರಿಸಿದ್ದಾರೆ. ವಿರಾಟ್ ಒಟ್ಟು 227 ಏಕದಿನ ಪಂದ್ಯಗಳನ್ನಾಡಿದ್ದು, ಫೀಲ್ಡರ್ ಆಗಿ 117 ಕ್ಯಾಚ್‌ಗಳನ್ನು ಪಡೆದಿದ್ದಾರೆ.

ವಿಶ್ವ ನಂ.1 ಆಟಗಾರ

ವಿಶ್ವ ನಂ.1 ಆಟಗಾರ

1 ಜನವರಿ 2010ರ ಏಕದಿನ ರ್ಯಾಂಕಿಂಗ್‌ನಲ್ಲಿ ಎಂಎಸ್ ಧೋನಿ, ಆಸ್ಟ್ರೇಲಿಯಾದ ಮೈಕಲ್ ಹಸ್ಸಿ, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್, ಸಚಿನ್ ತೆಂಡೂಲ್ಕರ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮೊದಲ 5 ಸ್ಥಾನಗಳಲ್ಲಿದ್ದರು. ಅಂದು ಕೊಹ್ಲಿ 10ರಲ್ಲೂ ಇರಲಿಲ್ಲ, ಈಗ ಅಂದರೆ ಡಿಸೆಂಬರ್ 23ರ ರ್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಬಾಬರ್ ಅಝಮ್ (ಪಾಕ್), ಫಾ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ), ರಾಸ್ ಟೇಲರ್ (ನ್ಯೂಜಿಲೆಂಡ್) ಮೊದಲ ಐದು ಸ್ಥಾನಗಳಲ್ಲಿದ್ದಾರೆ.

Story first published: Tuesday, December 24, 2019, 0:11 [IST]
Other articles published on Dec 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X