ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL: 45ನೇ ಏಕದಿನ ಶತಕ ಗಳಿಸಿ ದಾಖಲೆ ಮೇಲೆ ದಾಖಲೆ ಬರೆದ ವಿರಾಟ್ ಕೊಹ್ಲಿ

Virat Kohli Has Surpassed Sachin Tendulkar To Have Most Centuries Against Sri Lanka In ODIs

ಮಂಗಳವಾರ, ಜನವರಿ 10ರಂದು ಗುವಾಹಟಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭರ್ಜರಿ ಶತಕ ಬಾರಿಸಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ.

ಹಿಂದಿನ ಸರಣಿಯ ಅಂತಿಮ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ, ಇದೀಗ ತಮ್ಮ 45ನೇ ಏಕದಿನ ಶತಕ ಮತ್ತು ಒಟ್ಟಾರೆ 73ನೇ ಅಂತಾರಾಷ್ಟ್ರೀಯ ಶತಕ ಗಳಿಸಿದರು. ಟೆಸ್ಟ್‌ನಲ್ಲಿ 27 ಶತಕ ಹಾಗೂ ಟಿ20ಯಲ್ಲಿ ಒಂದು ಶತಕ ಸಿಡಿಸಿದ್ದಾರೆ.

IND vs SL: ದ್ವಿಶತಕ ವೀರ ಕಿಶನ್, ಟಿ20 ಶತಕವೀರ ಸೂರ್ಯನನ್ನು ಕೈಬಿಟ್ಟಿದ್ದು ಸರಿಯೇ?: ಮೊಹಮ್ಮದ್ ಕೈಫ್IND vs SL: ದ್ವಿಶತಕ ವೀರ ಕಿಶನ್, ಟಿ20 ಶತಕವೀರ ಸೂರ್ಯನನ್ನು ಕೈಬಿಟ್ಟಿದ್ದು ಸರಿಯೇ?: ಮೊಹಮ್ಮದ್ ಕೈಫ್

ಅಸ್ಸಾಂ ಬರ್ಸಾಪರ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ ಪ್ರೇಕ್ಷಕರ ಎದುರು ವಿರಾಟ್ ಕೊಹ್ಲಿ 87 ಎಸೆತಗಳನ್ನು ಎದುರಿಸಿ 12 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 113 ರನ್ ಗಳಿಸಿ ಕುಸಾನ್ ರಜಿತಗೆ ವಿಕೆಟ್ ಒಪ್ಪಿಸಿದರು.

ವಿರಾಟ್ ಕೊಹ್ಲಿ ಕೇವಲ 102 ಪಂದ್ಯಗಳಲ್ಲಿ 20 ಶತಕ

ವಿರಾಟ್ ಕೊಹ್ಲಿ ಕೇವಲ 102 ಪಂದ್ಯಗಳಲ್ಲಿ 20 ಶತಕ

ಇದೀಗ ವಿರಾಟ್ ಕೊಹ್ಲಿ ತಮ್ಮ ಖಾತೆಗೆ ಮತ್ತೊಂದು ಶತಕ ದಾಖಲಿಸುವಲ್ಲಿ ಯಶಸ್ವಿಯಾಗಿದ್ದು, ಏಕದಿನ ಕ್ರಿಕೆಟ್‌ನಲ್ಲಿ ತವರಿನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿರುವ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಕಳೆದ ನವೆಂಬರ್-ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿಯೂ ವಿರಾಟ್ ಕೊಹ್ಲಿ ಸುಮಾರು 4 ವರ್ಷಗಳ ಏಕದಿನ ಶತಕದ ಬರವನ್ನು ಕೊನೆಗೊಳಿಸಿದ್ದರು.

ಸಚಿನ್ ತೆಂಡೂಲ್ಕರ್ 164 ಪಂದ್ಯಗಳಲ್ಲಿ 20 ಶತಕಗಳೊಂದಿಗೆ ತವರಿನಲ್ಲಿ ಅತಿ ಹೆಚ್ಚು ಏಕದಿನ ಶತಕಗಳನ್ನು ಗಳಿಸಿದ ದಾಖಲೆ ಹೊಂದಿದ್ದು, ಅದೇ ರೀತಿ ವಿರಾಟ್ ಕೊಹ್ಲಿ ಕೇವಲ 102 ಪಂದ್ಯಗಳಲ್ಲಿ 20 ಶತಕ ಗಳಿಸಿ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ.

ತವರಿನಲ್ಲಿ ಹೆಚ್ಚಿನ ಏಕದಿನ ಶತಕ ಗಳಿಸಿದ ಬ್ಯಾಟ್ಸ್‌ಮನ್‌ಗಳು

ತವರಿನಲ್ಲಿ ಹೆಚ್ಚಿನ ಏಕದಿನ ಶತಕ ಗಳಿಸಿದ ಬ್ಯಾಟ್ಸ್‌ಮನ್‌ಗಳು

ವಿರಾಟ್ ಕೊಹ್ಲಿ - 102 ಏಕದಿನ ಪಂದ್ಯಗಳಲ್ಲಿ 20 ಶತಕ

ಸಚಿನ್ ತೆಂಡೂಲ್ಕರ್ - 164 ಏಕದಿನ ಪಂದ್ಯಗಳಲ್ಲಿ 20 ಶತಕ

ಹಾಶಿಮ್ ಆಮ್ಲಾ - 69 ಏಕದಿನ ಪಂದ್ಯಗಳಲ್ಲಿ 14 ಶತಕ

ರಿಕಿ ಪಾಂಟಿಂಗ್ - 153 ಏಕದಿನ ಪಂದ್ಯಗಳಲ್ಲಿ 13 ಶತಕ

ರಾಸ್ ಟೇಲರ್ - 110 ಏಕದಿನ ಪಂದ್ಯಗಳಲ್ಲಿ 12 ಶತಕ

ಭಾರತ vs ಶ್ರೀಲಂಕಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಗಳಿಸಿದವರು

ಭಾರತ vs ಶ್ರೀಲಂಕಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಗಳಿಸಿದವರು

ಇನ್ನು ವಿರಾಟ್ ಕೊಹ್ಲಿ ಅವರು ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಗಳಿಸಿದ್ದ ಸಚಿನ್ ತೆಂಡೂಲ್ಕರ್‌ ದಾಖಲೆಯನ್ನು ಅಳಿಸಿ ಹಾಕಿದರು. ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ 9 ಶತಕಗಳೊಂದಿಗೆ 64 ಸರಾಸರಿಯಲ್ಲಿ 2333 ರನ್ ಗಳಿಸಿದ್ದಾರೆ. ಮಾಜಿ ಬ್ಯಾಟರ್ ಸಚಿನ್ ತೆಂಡೂಲ್ಕರ್ 84 ಪಂದ್ಯಗಳಲ್ಲಿ 8 ಶತಕಗಳೊಂದಿಗೆ 3113 ರನ್‌ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ - 48 ಪಂದ್ಯಗಳಲ್ಲಿ 9 ಶತಕ

ಸಚಿನ್ ತೆಂಡೂಲ್ಕರ್ - 84 ಪಂದ್ಯಗಳಲ್ಲಿ 8 ಶತಕ

ಸನತ್ ಜಯಸೂರ್ಯ - 89 ಪಂದ್ಯಗಳಲ್ಲಿ 7 ಶತಕ

ಗೌತಮ್ ಗಂಭೀರ್ - 37 ಪಂದ್ಯಗಳಲ್ಲಿ 6 ಶತಕ

ರೋಹಿತ್ ಶರ್ಮಾ - 46 ಪಂದ್ಯಗಳಲ್ಲಿ 6 ಶತಕ

ಕುಮಾರ ಸಂಗಕ್ಕಾರ - 76 ಪಂದ್ಯಗಳಲ್ಲಿ 6 ಶತಕ

ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಲು ಕೇವಲ 67 ರನ್‌

ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಲು ಕೇವಲ 67 ರನ್‌

ಇದೇ ವೇಳೆ ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ ಅಗ್ರ 5ರೊಳಗೆ ಪ್ರವೇಶಿಸುವ ಅವಕಾಶವನ್ನು ವಿರಾಟ್ ಕೊಹ್ಲಿ ಮತ್ತಷ್ಟು ಸಮೀಪಿಸಿದ್ದಾರೆ. ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಲು ಕೇವಲ 67 ರನ್‌ಗಳ ಅಗತ್ಯವಿದ್ದು, ಮುಂಬರುವ ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಲು ವಿರಾಟ್ ಕೊಹ್ಲಿಗೆ ಉತ್ತಮ ಅವಕಾಶವಿದೆ.

ಸಚಿನ್ ತೆಂಡೂಲ್ಕರ್ - 463 ಏಕದಿನ ಪಂದ್ಯಗಳಲ್ಲಿ 18426 ರನ್

ಕುಮಾರ ಸಂಗಕ್ಕಾರ - 404 ಏಕದಿನ ಪಂದ್ಯಗಳಲ್ಲಿ 14234 ರನ್

ರಿಕಿ ಪಾಂಟಿಂಗ್ - 375 ಏಕದಿನ ಪಂದ್ಯಗಳಲ್ಲಿ 13704 ರನ್

ಸನತ್ ಜಯಸೂರ್ಯ - 445 ಏಕದಿನ ಪಂದ್ಯಗಳಲ್ಲಿ 134300 ರನ್

ಮಹೇಲಾ ಜಯವರ್ಧನೆ - 448 ಏಕದಿನ ಪಂದ್ಯಗಳಲ್ಲಿ 12650 ರನ್

ವಿರಾಟ್ ಕೊಹ್ಲಿ - 266 ಏಕದಿನ ಪಂದ್ಯಗಳಲ್ಲಿ 12584 ರನ್

Story first published: Tuesday, January 10, 2023, 17:45 [IST]
Other articles published on Jan 10, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X