ಯುಜುವೇಂದ್ರ ಚಾಹಲ್ ಕಾಲೆಳೆದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಕಟಕ್, ಡಿಸೆಂಬರ್ 21: ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ. ಭಾರತ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಭಾರತ ಭಾನುವಾರ (ಡಿಸೆಂಬರ್ 22) 3ನೇ ಏಕದಿನ ಪಂದ್ಯವನ್ನಾಡಲಿದೆ. ಇದಕ್ಕೂ ಮುನ್ನ ಕೊಹ್ಲಿ-ಚಾಹಲ್ ಟ್ರೋಲ್‌ಗಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ.
ವಿಂಡೀಸ್ ವಿರುದ್ಧದ 3ನೇ ಮತ್ತು ಕೊನೆಯ ಏಕದಿನ ಪಂದ್ಯಕ್ಕೂ ಮುನ್ನ ಚಾಹಲ್ ಒಂದು ಫೋಟೋವನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಆ ಚಿತ್ರದಲ್ಲಿ ಚಾಹಲ್, ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ಬ್ಯಾಟ್ ಹಿಡಿದುಕೊಂಡಿದ್ದರು. ಜೊತೆಗೆ '10 ಕೆಜಿಯ ಬ್ಯಾಟ್, 2.5 ಕೆಜಿಯ ಕೈ!!' ಎಂದು ಸಾಲೊಂದನ್ನು ಬರೆದುಕೊಂಡಿದ್ದರು.
ಇದಕ್ಕೆ ನಾಯಕ ವಿರಾಟ್ ಮಾಡಿರುವ ರಿಪ್ಲೆ ಇನ್ನೂ ಮಜವಾಗಿದೆ. ಚಾಹಲ್ ಫೋಟೋಗೆ ಕೊಹ್ಲಿ, 'ಅಬೇ ತೇರಿ ಥೈ ಸೆ ಬಡೀ ಕಾಫ್ ಹೈ ಉಸ್ಕಿ' (ನಿನ್ನ ತೊಡೆಗಿಂತಲೂ ಆತನ ಕಾಲಿನ ಹಿಂಭಾಗದ ಸ್ನಾಯು ದೊಡ್ಡದು,' ಎಂದು ಕಾಮೆಂಟ್ ಮಾಡಿದ್ದಾರೆ. ದೈತ್ಯ ದೇಹಿ ಪೊಲಾರ್ಡ್‌ಗೆ ಸಣಕಲು ಶರೀರದ ಚಾಹಲ್‌ನ ಹೋಲಿಸಿ ವಿರಾಟ್ ಹೀಗೆ ತಮಾಷೆ ಮಾಡಿದ್ದಾರೆ.

ಭಾರತ vs ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಟಿ20 ಸರಣಿ 2-1ರಿಂದ ಭಾರತದ ಪಾಲಾಗಿದೆ. 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ವಿಂಡೀಸ್ ಗೆದ್ದಿದ್ದರೆ, ದ್ವಿತೀಯ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿತ್ತು. ಸರಣಿ ಗೆಲುವು ನಿರ್ಧರಿಸಲಿರುವ ಅಂತಿಮ ಪಂದ್ಯ ಭಾನುವಾರ 1.30 pmಗೆ ಕಟಕ್‌ನ ಬಾರಬತಿ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications