ವಿರಾಟ್ ಕೊಹ್ಲಿ ಟೀಂ ಇಂಡಿಯಾಗೆ ಹೊರೆಯಾಗಿದ್ದಾರೆ: ಡ್ಯಾನಿಶ್ ಕನೇರಿಯಾ

ಪಾಕಿಸ್ತಾನ ಮಾಜಿ ಬೌಲರ್ ಡ್ಯಾನೀಶ್ ಕನೇರಿಯಾ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕುರಿತಾಗಿ ಕಟು ಟೀಕೆ ಮಾಡಿದ್ದಾರೆ. ಎಷ್ಟು ಅವಕಾಶ ನೀಡಿದರೂ ಸಹ ಎಡವುತ್ತಿರುವ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ತಂಡಕ್ಕೆ ಹೊರೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಕೇವಲ 1ರನ್‌ಗೆ ಔಟಾಗುವ ಮೂಲಕ ಕೊಹ್ಲಿ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದರು.

ಕೊಹ್ಲಿ ಕಳಪೆ ಬ್ಯಾಟಿಂಗ್, ಅಲುಗಾಡಿದ ಟೀಂ ಇಂಡಿಯಾದ ಬ್ಯಾಟಿಂಗ್ ಆರ್ಡರ್
ರಿಚರ್ಡ್ ಗ್ಲೈಸನ್ ಅವರ 7 ನೇ ಓವರ್‌ನ ಮೊದಲ ಚೆಂಡನ್ನು ಅಸಡ್ಡೆ ರೀತಿಯಲ್ಲಿ ಹೊಡೆದ ಕೊಹ್ಲಿ ಹೊಡೆತವನ್ನ, ಡೇವಿಡ್ ಮಲನ್ ಕ್ಯಾಚ್ ಹಿಡಿಯುತ್ತಿದ್ದಂತೆ ಕೊಹ್ಲಿ 1 ರನ್ ಗೆ ಇನ್ನಿಂಗ್ಸ್ ಮುಗಿಸಿದ್ರು. ದೀರ್ಘ ಸಮಯದವರೆಗೆ ನಂಬರ್ ಒನ್ ಟಿ20 ಬ್ಯಾಟ್ಸ್‌ಮನ್ ಆಗಿದ್ದ ವಿರಾಟ್ ಈಗ ಅಷ್ಟೇ ಕೆಟ್ಟದಾಗಿ ವಿಕೆಟ್ ಒಪ್ಪಿಸುತ್ತಿದ್ದಾರೆ.
ಕಳೆದ ಎರಡೂವರೆ ವರ್ಷದಿಂದ ಒಂದು ಶತಕ ದಾಖಲಿಸಿದ ಕಿಂಗ್ ಕೊಹ್ಲಿ, ರನ್ ಬರ ಎದುರಿಸುತ್ತಿದ್ದಾರೆ. ಎಡ್ಜ್‌ಬಾಸ್ಟನ್‌ನಲ್ಲಿ ರೋಹಿತ್ ವಿಕೆಟ್ ಪತನದ ಬಳಿಕ ಕ್ರೀಸ್‌ನಲ್ಲಿದ್ದ ವಿರಾಟ್, ಕವರ್ ಡ್ರೈವ್ ಆಡಲು ಮುಂದಾಗಿ ಚೆಂಡನ್ನ ಅವರು ನಿರ್ಲಕ್ಷ್ಯದಿಂದ ಹೊಡೆದು ಔಟಾದರು. ಹೀಗಾಗಿ ಐದು ತಿಂಗಳ ಬಳಿಕ ಟಿ20 ಅಂತರಾಷ್ಟ್ರೀಯ ಪಂದ್ಯವನ್ನಾಡಿದ ವಿರಾಟ್ ಮತ್ತೊಮ್ಮೆ ಸಿಂಗಲ್ ಡಿಜಿಟ್‌ಗೆ ಔಟಾಗಿದ್ದು ವಿಪರ್ಯಾಸ. ಕೊಹ್ಲಿ ಔಟಾದ ಬಳಿಕ ತಂಡದ ಬ್ಯಾಲೆನ್ಸ್‌ನಲ್ಲಿ ಎಡವಟ್ಟಾಯಿತು. ಉತ್ತಮವಾಗಿ ಆರಂಭಿಸಿದ್ದ ಟೀಂ ಇಂಡಿಯಾ 11 ಓವರ್‌ಗಳಲ್ಲಿ 89ರನ್‌ಗೆ 5 ವಿಕೆಟ್ ಕಳೆದುಕೊಂಡಿತು.
IND vs END: ಭಾರತದ ಡ್ರೆಸ್ಸಿಂಗ್ ರೂಂಗೆ ವಿಶೇಷ ಭೇಟಿ ನೀಡಿದ ಎಂಎಸ್ ಧೋನಿ

ದೀಪಕ್ ಹೂಡಾ ಬದಲು ಕೊಹ್ಲಿಗೆ ಮಣೆ!
ಈ ಚುಟುಕು ಟೂರ್ನಿಗೂ ಮುನ್ನ ಐಪಿಎಲ್ 2022ರ ಸೀಸನ್‌ನಲ್ಲಿ ಆರ್‌ಸಿಬಿ ಪರ ಕಳಪೆ ಆಟವಾಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ, ವಿರಾಟ್ ಐದು ತಿಂಗಳ ಬಳಿಕ ಟಿ20 ಪಂದ್ಯವನ್ನಾಡಿದರು. ಅದ್ರಲ್ಲೂ ಹಾಟ್ ಫಾರ್ಮ್‌ನಲ್ಲಿದ್ದ ದೀಪಕ್ ಹೂಡಾ ಬದಲು ಕೊಹ್ಲಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಎಂಟ್ರಿ ನೀಡಿದ್ರು.
ಐರ್ಲೆಂಡ್ ವಿರುದ್ಧ ಶತಕ ದಾಖಲಿಸಿದ್ದ ದೀಪಕ್ ಹೂಡ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಹೀಗಿರುವಾಗ ಕೊಹ್ಲಿ ಬಂದ ಕೂಡಲೇ ಆತನನ್ನು ಬೆಂಚ್‌ನಲ್ಲಿ ಕೂರಿಸಿದ್ದು ಸಹ ಚರ್ಚೆಗೆ ಕಾರಣವಾಯ್ತು. ಇದ್ರ ನಡುವೆ ಕೊಹ್ಲಿ ಮತ್ತೆ ಕಳಪೆ ಆಟವಾಡಿ ಮತ್ತಷ್ಟು ಟೀಕೆಗೆ ಒಳಗಾಗಿದ್ದಾರೆ.
ಮತ್ತೊಮ್ಮೆ ಕೆಟ್ಟದಾಗಿ ಔಟಾದ ವಿರಾಟ್ ಕೊಹ್ಲಿ: ಇನ್ನೆಷ್ಟು ಚಾನ್ಸ್ ಕೊಡಬೇಕು ಎಂದ ನೆಟ್ಟಿಗರು!

ಟೀಂ ಇಂಡಿಯಾಗೆ ವಿರಾಟ್ ಹೊರೆಯಾಗಿದ್ದಾರೆ!
ವಿರಾಟ್ ಕೊಹ್ಲಿ ಈ ರೀತಿಯ ಫಾರ್ಮ್ ಟೀಂ ಇಂಡಿಯಾಗೆ ಹೊರೆಯಾಗಿ ಪರಿಣಮಿಸಿದೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ. ವಿರಾಟ್ ಮುಂದಿನ ದಿನಗಳಲ್ಲಿ ಹೀಗೆ ಆಡಿದ್ದಲ್ಲಿ, ಖಂಡಿತವಾಗಿಯೂ ತಂಡದಿಂದ ಹೊರಬೀಳುತ್ತಾರೆ ಎಂದು ಎಚ್ಚರಿಸಿದ್ದಾರೆ.
ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕನೇರಿಯಾ '' "ದೊಡ್ಡ ಆಟಗಾರರು ಇಲ್ಲದಿದ್ದರೂ, ಮೊದಲ ಪಂದ್ಯದಲ್ಲಿ ತಂಡವು ಇನ್ನೂ ಪ್ರದರ್ಶನ ನೀಡಿತು ಮತ್ತು ಯುವ ಆಟಗಾರರು ತಮ್ಮ ಕೆಲಸವನ್ನು ಮಾಡಿದರು. ಪ್ರಮುಖ ಆಟಗಾರನು ಇದೀಗ ತಂಡಕ್ಕೆ ಹೊರೆಯಾಗಿ ಬದಲಾಗುತ್ತಿದ್ದಾನೆ ಎಂಬುದನ್ನು ಅರಿತುಕೊಳ್ಳಬೇಕು. ಸದ್ಯ ವಿರಾಟ್ ಕೊಹ್ಲಿ ಆ ಹೊರೆಯಾಗಿದ್ದಾರೆ. ಆದ್ದರಿಂದ, ಅವರು ತಮ್ಮ ಸ್ಥಾನವನ್ನು ತ್ಯಜಿಸಬೇಕು ಅಥವಾ ಟಿ20 ವಿಶ್ವಕಪ್‌ಗೆ ಮೊದಲು ಫಾರ್ಮ್‌ಗೆ ಮರಳಬೇಕು'' ಎಂದು ಡ್ಯಾನಿಶ್ ಕನೇರಿಯಾ ಅಭಿಪ್ರಾಯ ಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications