ಕೊಹ್ಲಿ-ರೋಹಿತ್ ನಡುವೆ ಏನು ಸಮಸ್ಯೆಯಿಲ್ಲ: ಸ್ಪಷ್ಟಪಡಿಸಿದ ಬಿಸಿಸಿಐ ಅಧಿಕಾರಿಗಳು!

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಇತ್ತೀಚೆಗೆ ಏಕೋ ಎಲ್ಲವೂ ಸರಿಯಿಲ್ಲ ಎಂಬ ವರದಿಗಳು ಹರಿದಾಡಿದ ಬೆನ್ನಲ್ಲೇ ಬಿಸಿಸಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದು ವಿರಾಟ್ ಹಾಗೂ ಕೊಹ್ಲಿ ನಡುವೆ ಅಂತದ್ದೇನು ವೈಮನಸ್ಸು ಇಲ್ಲ ಎಂದಿದ್ದಾರೆ.
ಟೀಂ ಇಂಡಿಯಾದ ಲಿಮಿಟೆಡ್ ಓವರ್ ಕ್ಯಾಪ್ಟನ್ ರೋಹಿತ್ ಶರ್ಮಾ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನವೇ ಗಾಯಾಳುವಾಗಿ ತಂಡದಿಂದ ಹೊರಬಿದ್ದಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇದ್ರ ಜೊತೆಗೆ ವಿರಾಟ್ ಕೊಹ್ಲಿ ಕೂಡ ಏಕದಿನ ಸರಣಿಯಲ್ಲಿ ಆಡುವುದಿಲ್ಲ ಎಂದು ಸುದ್ದಿ ಹರಿದಾಡತೊಡಗಿದೆ.
ಡಿಸೆಂಬರ್ 26ರಿಂದ ಪ್ರಾರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಹಿನ್ನಲೆಯಲ್ಲಿ ಭಾರತವು ಇದೇ ತಿಂಗಳು ಡಿ. 16ರಂದೇ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿತ್ತು. ಆದ್ರೆ ರೋಹಿತ್ ಶರ್ಮಾ ಅಭ್ಯಾಸದ ವೇಳೆ ಗಾಯಗೊಂಡಿದ್ದು, ಇಡೀ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ.
ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕನಾಗಿರುವ ರೋಹಿತ್ ಶರ್ಮಾ ಅಲಭ್ಯತೆಯಿಂದಾಗಿ ಅವರ ಜಾಗದಲ್ಲಿ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಎ ತಂಡವನ್ನು ಮುನ್ನಡೆಸಿದ್ದ ಪ್ರಿಯಾಂಕ್ ಪಾಂಚಾಲ್ ಅವರು ಸ್ಥಾನ ಪಡೆದಿದ್ದಾರೆ.
ಏತನ್ಮಧ್ಯೆ, ವಿರಾಟ್ ಕೊಹ್ಲಿ 11 ಜನವರಿ 2021 ರಂದು ಜನಿಸಿದ ಮಗಳು ವಾಮಿಕಾ ಅವರ ಮೊದಲ ಹುಟ್ಟುಹಬ್ಬವನ್ನು ಆಚರಿಸಲು ಸ್ವಲ್ಪ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ . ಹೀಗಾಗಿ ಅವರು ಟೆಸ್ಟ್ ಸರಣಿಯ ನಂತರ ತಮ್ಮ ಕುಟುಂಬದೊಂದಿಗೆ ರಜಾದಿನವನ್ನು ಕಳೆಯಲು ಯೋಜಿಸುತ್ತಿದ್ದಾರೆ. ಆದ್ದರಿಂದ ಅವರು ಏಕದಿನ ಸರಣಿಗೆ ಲಭ್ಯವಿರುವುದಿಲ್ಲ ಎನ್ನಲಾಗಿದೆ.

ರೋಹಿತ್ - ಕೊಹ್ಲಿ ನಡುವೆ ಬಿರುಕು ಮೂಡಿದ್ಯಾ?
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಕೊಹ್ಲಿ ಹೊರಗುಳಿಯುವ ಬಗ್ಗೆ ವರದಿಗಳು ಹೊರಹೊಮ್ಮಿದ ತಕ್ಷಣ, ರೋಹಿತ್ ಮತ್ತು ಕೊಹ್ಲಿ ನಡುವೆ ಬಿರುಕು ಮೂಡುವ ಸಾಧ್ಯತೆಯನ್ನು ಸೂಚಿಸುವ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಲು ಪ್ರಾರಂಭಿಸಿದವು.
ಕೊಹ್ಲಿಯನ್ನ ನಾಯಕತ್ವದಿಂದ ಕೆಳಗಿಳಿಸಿದ ಪರಿಣಾಮ ವಿರಾಟ್ ಮುನಿಸಿಕೊಂಡು ರೋಹಿತ್ ನಾಯಕತ್ವದ ಟೀಂ ಇಂಡಿಯಾದ ಏಕದಿನ ಸರಣಿಯಿಂದ ಹೊರನಡೆಯುತ್ತಿದ್ದಾರೆಂಬ ಮಾತು ಕೇಳಿಬಂದಿತ್ತು. ಆದ್ರೆ ಈ ಎಲ್ಲಾ ವದಂತಿಗಳಿಗೆ ಬಿಸಿಸಿಐ ಅಧಿಕಾರಿಗಳು ಉತ್ತರ ನೀಡಿದ್ದಾರೆ.

ಕೊಹ್ಲಿ ಕುಟುಂಬದೊಂದಿಗೆ ಕಾಲ ಕಳೆಯಲು ಕೇಳಿದ್ದಾರೆ: ಬಿಸಿಸಿಐ
ಕೊಹ್ಲಿ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತಿದ್ದಾರೆ. ಅದಕ್ಕಾಗಿಯೇ ಅವರು ಏಕದಿನ ಸರಣಿಯನ್ನು ಆಡದಿರಲು ನಿರ್ಧರಿಸಿದ್ದಾರೆ ಮತ್ತು ಕೊಹ್ಲಿ ಹಾಗೂ ರೋಹಿತ್ ನಡುವೆ ಯಾವುದೇ ತಪ್ಪಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕಾರಿಯೊಬ್ಬರು ನ್ಯೂಸ್ 9 ಗೆ ತಿಳಿಸಿದ್ದಾರೆ.
''ವಿರಾಟ್ ಕೊಹ್ಲಿ ಅವರು ಏಕದಿನ ಸರಣಿಗೆ ಲಭ್ಯವಿಲ್ಲ ಎಂದು ನಮಗೆ ತಿಳಿಸಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ಸಾಮಾಜಿಕ ಮಾಧ್ಯಮದ ವದಂತಿಗಳನ್ನು ಹೆಚ್ಚು ಓದಬೇಡಿ, ವಿರಾಟ್ ಮತ್ತು ರೋಹಿತ್ ನಡುವೆ ಅಂತದ್ದೇನೂ ಇಲ್ಲ'' ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿರುವ ವಿರಾಟ್ ಕೊಹ್ಲಿ: ವರದಿ

ಕೊಹ್ಲಿ ಏಕದಿನ ಸರಣಿಯಲ್ಲಿ ಭಾಗವಹಿಸದೇ ಇರುವುದು ಕನ್ಫರ್ಮ್
ಕೊಹ್ಲಿ ಟೆಸ್ಟ್ ಸರಣಿಯನ್ನು ಆಡಲು ಮತ್ತು ನಂತರ ಕುಟುಂಬದೊಂದಿಗೆ ಸಮಯ ಕಳೆಯಲು ODI ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಟೈಮ್ಸ್ ನೌಗೆ ಮೂಲಗಳು ಖಚಿತಪಡಿಸಿವೆ.
"ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಹೊರಗುಳಿಯಲು ನಿರ್ಧರಿಸಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಏಕದಿನ ಸರಣಿಯಲ್ಲಿ ತನ್ನನ್ನು ಸೇರಿಸದಂತೆ ಮನವಿ ಮಾಡಿದ್ದಾರೆ. ಅವರು ಮೊದಲಿನಿಂದಲೂ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯಲ್ಲಿ ಭಾಗವಹಿಸುವ ಕುರಿತು ತಿಳಿಸಿದ್ದರು'' ಎಂದು ಮೂಲಗಳು ತಿಳಿಸಿವೆ.
ಕೊಹ್ಲಿ ಮಾತ್ರವಲ್ಲ ಸಚಿನ್, ದ್ರಾವಿಡ್ ಕೂಡ ಈ ಕೆಟ್ಟ ಸಮಯವನ್ನು ಎದುರಿಸಿದ್ದರು ಎಂದ ಸಂಜಯ್ ಬಂಗರ್

ಡಿಸೆಂಬರ್ 26ಕ್ಕೆ ಮೊದಲ ಟೆಸ್ಟ್ ಪಂದ್ಯ
ಡಿಸೆಂಬರ್ 16ರಂದು ದಕ್ಷಿಣ ಆಫ್ರಿಕಾಗೆ ತೆರಳಲಿರುವ ಟೀಂ ಇಂಡಿಯಾ ಆಟಗಾರರು ಒಟ್ಟು 44 ದಿನಗಳ ಕಾಲ ಬಯೋ ಬಬಲ್‌ನಲ್ಲಿ ಉಳಿಯುತ್ತಾರೆ. ಇದಕ್ಕೂ ಮೊದಲು ಡಿಸೆಂಬರ್ 12 ರಿಂದಲೇ ಎಲ್ಲಾ ಆಟಗಾರರು ಮುಂಬೈನಲ್ಲಿ ನಾಲ್ಕು ದಿನಗಳ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಡಿಸೆಂಬರ್ 26ರಂದು ಸೆಂಚುರಿಯನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.
ಅಂತಿಮ ಟೆಸ್ಟ್ ಜನವರಿ 11 ರಿಂದ ಜನವರಿ 15 ರವರೆಗೆ ನಡೆಯಲಿದ್ದು, ಜನವರಿ 19 ರಿಂದ ಏಕದಿನ ಅಂತಾರಾಷ್ಟ್ರೀಯ ಸರಣಿಗಳು ಪ್ರಾರಂಭವಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications