
ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ತಮ್ಮ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತ್ಯಮೋಘ ಪ್ರದರ್ಶನ ನೀಡುವ ವಿರಾಟ್ ಬ್ಯಾಟಿಂಗ್ ಇತ್ತೀಚಿನ ದಿನಗಳಲ್ಲಿ ತೀರಾ ಕೆಳಮಟ್ಟಕ್ಕೆ ಕುಸಿತಗೊಂಡಿದೆ.
13 ರನ್‌ಗಳಿಸಿದ್ದ ರೋಹಿತ್ ಶರ್ಮಾ ಅಲ್ಜಾರಿ ಜೋಸೆಫ್‌ಗೆ ವಿಕೆಟ್ ಒಪ್ಪಿಸಿದ ಓವರ್‌ನಲ್ಲೇ ಕ್ರೀಸ್‌ಗಿಳಿದಿದ್ದ ವಿರಾಟ್ ಕೊಹ್ಲಿ ತಾನು ಎದುರಿಸಿದ ಎರಡನೇ ಎಸೆತದಲ್ಲೇ ಡಕೌಟ್ ಆದ್ರು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ವಿರಾಟ್ ಫ್ಲಾಪ್ ಶೋ ಮುಂದುವರಿಯಿತು.
ರೋಹಿತ್ ಶರ್ಮಾ ಫುಲ್ ಟೈಂ ನಾಯಕತ್ವದ ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಏಕದಿನ ಪಂದ್ಯದಲ್ಲಿ ಗಳಿಸಿದ್ದು ಕೇವಲ 8 ರನ್ ರನ್, ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ 18 ರನ್‌ಗೆ ವಿಕೆಟ್ ಒಪ್ಪಿಸಿದ್ರು, ಇದೀಗ ಮೂರನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ವಿರಾಟ್ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
70 ಅಂತರಾಷ್ಟ್ರೀಯ ಶತಕಗಳ ಒಡೆಯ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಶತಕ ಸಿಡಿದು ಎರಡು ವರ್ಷಗಳೇ ಕಳೆದು ಹೋಗಿದೆ. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಎರಡು ಅರ್ಧಶತಕಗಳಿಸಿದ್ದು ಬಿಟ್ಟರೆ ವಿರಾಟ್ ಹರಿಣಗಳ ನಾಡಲ್ಲೂ ವಿಫಲಗೊಂಡ್ರು. ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲೂ ಅವರ ಬ್ಯಾಟಿಂಗ್ ಕುಸಿತಗೊಂಡಿದೆ.
2019ರಲ್ಲಿ ಕೊನೆಯ ಬಾರಿಗೆ ಶತಕ ಸಿಡಿಸಿದ ಕೊಹ್ಲಿ
ಕಳೆದೆರಡು ವರ್ಷಗಳಲ್ಲಿ ಕೊಹ್ಲಿ ರನ್ ಸಂಖ್ಯೆ ಗಣನೀಯವಾಗಿ ಕುಸಿದಿದೆ. ನವೆಂಬರ್ 2019 ರಿಂದ ವಿರಾಟ್ ಒಂದೇ ಒಂದು ಅಂತರರಾಷ್ಟ್ರೀಯ ಶತಕವನ್ನು ಗಳಿಸಿಲ್ಲ. ಬ್ಯಾಟಿಂಗ್ ದಿಗ್ಗಜನ ಬ್ಯಾಟ್‌ನಿಂದ ಶತಕಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಭಾರತೀಯ ಕ್ರಿಕೆಟ್‌ನಲ್ಲಿ ವಿವಾದಗಳು ಕೂಡ ನಡೆಯುತ್ತಿವೆ. ಟಿ20 ವಿಶ್ವಕಪ್ 2021 ರ ನಂತರ ಭಾರತದ ಚುಟುಕು ಫಾರ್ಮೆಟ್ ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಏಕದಿನ ನಾಯಕತ್ವದಿಂದ ವಜಾಗೊಳಿಸಲ್ಪಟ್ಟರು. ನಂತರ ಕೊಹ್ಲಿ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಹೇಳಿಕೆಗಳಿಗೆ ವ್ಯತಿರಿಕ್ತವಾಗಿದೆ.
ಇದೀಗ ರೋಹಿತ್ ನಾಯಕತ್ವದಲ್ಲಿ ಕೊಹ್ಲಿ ಫ್ಲಾಪ್ ಶೋ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವೆಸ್ಟ್ ಇಂಡೀಸ್ ಸರಣಿಯು ಕೊಹ್ಲಿಗೆ ಆಪತ್ತು ಎಂದು ಸಾಬೀತಾಗುತ್ತಿದ್ದಂತೆ, ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿಯನ್ನ ಬೆಂಬಲಿಸಿರುವ ಅನೇಕ ಅಭಿಮಾನಿಗಳು ಆತನಿಗೆ ಮೊದಲು ವಿಶ್ರಾಂತಿ ನೀಡಿ ಎಂದು ಟ್ವಿಟ್ಟರ್‌ನಲ್ಲಿ ಆಗ್ರಹಿಸಿದ್ದಾರೆ.