ವಿರಾಟ್ ಕೊಹ್ಲಿ ಮತ್ತೆ RCB ಕ್ಯಾಪ್ಟನ್ ಆಗೋ ಚಾನ್ಸ್ ಇಲ್ಲ: ಡೇನಿಯಲ್ ವೆಟ್ಟೋರಿ

ಐಪಿಎಲ್ 2022ರ ವೇಳಾಪಟ್ಟಿ ಪ್ರಕಟವಾದ್ರೂ ಸಹ ಇನ್ನೂ ಆರ್‌ಸಿಬಿ ಕ್ಯಾಪ್ಟನ್ ಯಾರು ಎಂದು ಫ್ರಾಂಚೈಸಿ ಘೋಷಿಸಿಲ್ಲ. ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಆಟಗಾರರ ಹೆಸರುಗಳು ಸದ್ಯ ಕೇಳಿಬರುತ್ತಿದೆ.
ಹೀಗಿದ್ರೂ ಸಹ ಆರ್‌ಸಿಬಿ ಅಭಿಮಾನಿಗಳು ವಿರಾಟ್ ಕೊಹ್ಲಿ ಮತ್ತೆ ನಾಯಕತ್ವ ವಹಿಸಿಕೊಳ್ಳಲು ಬಯಸಿದ್ದಾರೆ. ಆದ್ರೆ ಆರ್‌ಸಿಬಿ ಮಾಜಿ ನಾಯಕ ಮತ್ತು ನ್ಯೂಜಿಲೆಂಡ್ ಲೆಜೆಂಡ್ ಡೇನಿಯಲ್ ವೆಟ್ಟೋರಿ ನಾಯಕತ್ವದ ರೇಸ್ ಕುರಿತು ಕೆಲವು ಆಸಕ್ತಿದಾಯಕ ಕಾಮೆಂಟ್‌ಗಳನ್ನ ಮಾಡಿದ್ದಾರೆ.

ಕೊಹ್ಲಿ ಮತ್ತೆ ಕ್ಯಾಪ್ಟನ್ ಆಗಲ್ಲ!
ವಿರಾಟ್ ಕೊಹ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗುವ ಅವಕಾಶವಿಲ್ಲ ಎಂದು ನ್ಯೂಜಿಲೆಂಡ್‌ನ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಹೇಳಿದ್ದಾರೆ. ಕೊಹ್ಲಿ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೆ ನಾಯಕನಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ವಿರಾಟ್ ಕೊಹ್ಲಿಯ ಉತ್ತರಾಧಿಕಾರಿಗಳಾಗಿ ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡುಪ್ಲೆಸಿಸ್ ಮತ್ತು ದಿನೇಶ್ ಕಾರ್ತಿಕ್ ಹೆಸರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾನೇಜ್‌ಮೆಂಟ್ ಪರಿಗಣಿಸುತ್ತಿದೆ ಎಂದು ವೆಟ್ಟೋರಿ ಹೇಳಿದರು.

ಮ್ಯಾಕ್ಸ್‌ವೆಲ್ ನಾಯಕನಾಗಬಹುದು!
ಆಸ್ಟ್ರೇಲಿಯಾದ ಆಲ್‌ರೌಂಡರ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ನಾಯಕರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ವೆಟ್ಟೋರಿ ಹೇಳಿದರು. ಐಪಿಎಲ್ 2022 ರ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಂಡರೆ ಆರ್‌ಸಿಬಿ ಖಂಡಿತವಾಗಿಯೂ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಫಾಫ್ ಡುಪ್ಲೆಕ್ಸ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುತ್ತದೆ ಎಂದು ಮ್ಯಾಕ್ಸ್‌ವೆಲ್ ಭವಿಷ್ಯ ನುಡಿದಿದ್ದಾರೆ. ಡೇನಿಯಲ್ ವೆಟ್ಟೋರಿ ಈ ಹಿಂದೆ ವಿರಾಟ್ ಕೊಹ್ಲಿಗಿಂತ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದರು.
ಶೇನ್ ವಾರ್ನ್‌ಗಿಂತ, ಮುತ್ತಯ್ಯ ಮುರಳೀಧರನ್ ಗ್ರೇಟ್ ಎಂದ ಸುನಿಲ್ ಗವಾಸ್ಕರ್

2016ರಲ್ಲಿ ಕೊಹ್ಲಿ ತಂಡ ರನ್ನರ್ ಅಪ್ ಆಗಿತ್ತು
2016ರ ಐಪಿಎಲ್ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಶಸ್ವಿಯಾಯಿತು. ಆದರೆ ದುರದೃಷ್ಟವಶಾತ್ ಟ್ರೋಫಿ ಗೆಲ್ಲಲು ವಿಫಲವಾಯಿತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2016 ರಲ್ಲಿ ಫೈನಲ್ ತಲುಪಿದ್ದರೂ ಸಹ ಫೈನಲ್‌ನಲ್ಲಿ ರನ್ನರ್‌ಗೆ ತೃಪ್ತಿಪಡಬೇಕಾಯಿತು.
2016ರಲ್ಲಿ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಗೆದ್ದಿದಲ್ಲದೆ ಭಾರೀ ರನ್ ಸಹ ಗಳಿಸಿದ್ರು. 4 ಶತಕ ದಾಖಲಿಸಿದ ವಿರಾಟ್ 973 ರನ್ ಗಳಿಸಿದರು.
ಪಂಜಾಬ್ ಕಿಂಗ್ಸ್ ತಂಡ ಸಂಪೂರ್ಣ ವೇಳಾಪಟ್ಟಿ, ಸಮಯ ಹಾಗೂ ತಾಣ

ಮಾರ್ಚ್ 26ರಿಂದ ಐಪಿಎಲ್ ಟೂರ್ನಿ ನಡೆಯಲಿದೆ
ಈ ಸೀಸನ್ ಐಪಿಎಲ್ ಇದೇ ತಿಂಗಳ 26ರಿಂದ ಆರಂಭವಾಗಲಿದೆ. ಬಿಸಿಸಿಐ ಈಗಾಗಲೇ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೇ 29 ರಂದು ಅಂತಿಮ ಪಂದ್ಯದೊಂದಿಗೆ ಪಂದ್ಯಾವಳಿಯು ಮುಕ್ತಾಯಗೊಳ್ಳುತ್ತದೆ. ಇಡೀ ಟೂರ್ನಿಯಲ್ಲಿ 74 ಪಂದ್ಯಗಳಲ್ಲಿ 10 ತಂಡಗಳು ಸ್ಪರ್ಧಿಸುತ್ತಿವೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಆರ್‌ಸಿಬಿ ಸ್ಕ್ವಾಡ್ 2022
ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡುಪ್ಲೆಸಿಸ್, ಹರ್ಷಲ್ ಪಟೇಲ್ , ವನಿಂದು ಹಸರಂಗ , ದಿನೇಶ್ ಕಾರ್ತಿಕ್ , ಜೋಶ್ ಹೇಜಲ್‌ವುಡ್ , ಶಹಬಾಜ್ ಅಹ್ಮದ್ , ಅನುಜ್ ರಾವತ್ , ಆಕಾಶ್ ದೀಪ್ ಸಿಂಗ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್ , ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆಂಡಾರ್ಫ್ , ಸುಯಶ್ ಪ್ರಭುದೇಸಾಯಿ , ಚಾಮಾ ಮಿಲಿಂದ್ , ಅನೀಶ್ವರ್ ಗೌತಮ್ , ಕರಣ್ ಶರ್ಮಾ , ಲುವ್ನಿತ್ ಸಿಸೋಡಿಯಾ , ಸಿದ್ಧಾರ್ಥ್ ಕೌಲ್ , ಡೇವಿಡ್ ವಿಲ್ಲೆ , ಮೊಹಮ್ಮದ್ ಸಿರಾಜ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications