ಅಗಾಧವಾಗಿ ಬೆಳೆದಿದೆ ಕುಂಬ್ಳೆ- ಕೊಹ್ಲಿ ನಡುವಿನ ಭಿನ್ನಾಭಿಪ್ರಾಯ
ಮುಂಬೈ, ಜೂನ್ 19: ಭಾರತೀಯ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವಿನ ಕಂದಕ ಮತ್ತಷ್ಟು ಹೆಚ್ಚಾಗಿದ್ದು ಅದನ್ನು ದುರಸ್ತಿಗೊಳಿಸಲಾಗದ ಮಟ್ಟಕ್ಕೆ ತಲುಪಿರುವುದು ಶನಿವಾರ (ಜೂನ್ 17) ಬಹಿರಂಗಗೊಂಡಿದೆ.
ಚಾಂಪಿಯನ್ಸ್ ಟ್ರೋಫಿಯ ಫೈನಲ್ ಭಾನುವಾರ ನಡೆದಿತ್ತು. ಅದಕ್ಕೂ ಮುನ್ನಾದಿನ ಸಂಜೆ, ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ಆಯ್ಕೆಯ ಹೊಣೆ ಹೊತ್ತಿರುವ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ತಂಡ ವಿರಾಟ್ ಕೊಹ್ಲಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಮಾತುಕತೆ ವೇಳೆ, ಕೊಹ್ಲಿ ಹಾಗೂ ಕುಂಬ್ಳೆ ನಡುವಿನ ಭಿನ್ನಾಭಿಪ್ರಾಯಗಳು ದೈತ್ಯ ಸ್ವರೂಪ ತಳೆದಿರುವುದು ಬೆಳಕಿಗೆ ಬಂದಿದೆ. ಇದನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ತಂಡ ಅಭಿಪ್ರಾಯಪಟ್ಟಿದೆ. ಚರ್ಚೆಯ ಪ್ರತಿ ಹಂತದಲ್ಲೂ ಕೊಹ್ಲಿ ಅವರು, ಕುಂಬ್ಳೆಯವರನ್ನು ಕೋಚ್ ಆಗಿ ಮುಂದುವರಿಸಲು ಒಪ್ಪಲೇ ಇಲ್ಲ ಎಂದು ಹೇಳಲಾಗಿದೆ.
ಆದರೂ, ಶೀಘ್ರದಲ್ಲೇ ಕುಂಬ್ಳೆಯವರೊಂದಿಗೆ ಮಾತುಕತೆ ನಡೆಸಲು ಮಾಜಿ ಕ್ರಿಕೆಟಿಗರ ತಂಡ ನಿರ್ಧರಿಸಿದ್ದು, ಕುಂಬ್ಳೆ ಕಡೆಯಿಂದಾದರೂ ಕೊಹ್ಲಿ ಜತೆಗಿನ ಬಾಂಧವ್ಯಕ್ಕೆ ತೇಪೆ ಹಾಕಲು ಪ್ರಯತ್ನಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications