ರನ್ ಮಷಿನ್ ಕೊಹ್ಲಿ 40ನೇ ಒಡಿಐ ಶತಕ, ಇನ್ನಿತರ ದಾಖಲೆಗಳು

ನಾಗ್ಪುರ್, ಮಾರ್ಚ್ 05: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಮತ್ತೊಂದು ಶತಕ ಸಿಡಿಸಿದ್ದಾರೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಬಾರಿಸಿದರು.
ಈ ಶತಕ ಕೊಹ್ಲಿ ಅವರ 40ನೇ ಶತಕವಾಗಿದ್ದು, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 49ರ ದಾಖಲೆ ಶತಕಗಳತ್ತ ಮುನ್ನುಗ್ಗುತ್ತಿದ್ದಾರೆ. ಇದಲ್ಲದೆ ಆಸ್ಟ್ರೇಲಿಯಾ ವಿರುದ್ಧ ಭಾರತದಲ್ಲಿ ಸಚಿನ್ ಗಳಿಸಿದ್ದ 4 ಶತಕಗಳ ದಾಖಲೆಯನ್ನು ಕೊಹ್ಲಿ ಸಮಗೊಳಿಸಿದರು.
ಈ ವರ್ಷದಲ್ಲಿ ಅಡಿಲೇಡ್ ನಲ್ಲಿ 229ರನ್ ಚೇಸ್ ಮಾಡುವಾಗ 104ರನ್ ಗಳಿಸಿದ್ದ ಕೊಹ್ಲಿ ಮತ್ತೊಮ್ಮೆ ಆಸೀಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು. ಇದು ಆಸ್ಟ್ರೇಲಿಯಾ ವಿರುದ್ಧ ಒಟ್ಟಾರೆ, 7ನೇ ಶತಕವಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾದ ವಿರುದ್ಧದ ಪಂದ್ಯಗಳಲ್ಲಿ ಸಚಿನ್ ಅವರು 9 ಶತಕ ಗಳಿಸಿದ್ದಾರೆ.
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ವಿರಾಟ್ಕೊಹ್ಲಿ ಅವರು ನಾಯಕರಾಗಿ ತ್ವರಿತಗತಿಯಲ್ಲಿ 9 ಸಾವಿರ ರನ್ ಪೂರೈಕೆ ಮಾಡಿದ ದಾಖಲೆ ಬರೆದರು. ಕೊಹ್ಲಿ ತಮ್ಮ 159ನೇ ಏಕದಿನ ಇನ್ನಿಂಗ್ಸ್ನಲ್ಲಿ ಈ ದಾಖಲೆ ಸ್ಥಾಪಿಸುವ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ದಾಖಲೆ ಮುರಿದರು.

ನಾಯಕರಾಗಿ ಏಕದಿನದಲ್ಲಿ ಅತಿ ವೇಗದ 9000 ರನ್
ವಿರಾಟ್ ಕೊಹ್ಲಿ: 159 ಇನ್ನಿಂಗ್ಸ್
ರಿಕಿ ಪಾಂಟಿಂಗ್: 203
ಗ್ರೇಮ್ ಸ್ಮಿತ್: 220
ಮಹೇಂದ್ರ ಸಿಂಗ್ ಧೋನಿ: 244
ಅಲನ್ ಬಾರ್ಡರ್: 257
ಸ್ಟೀಫನ್ ಫ್ಲೆಮಿಂಗ್: 272

2018ರಲ್ಲಿ ವಿರಾತ್ ಕೊಹ್ಲಿ ಪರಾಕ್ರಮ
2018ರಲ್ಲಿ ಕೊಹ್ಲಿ 11 ಅಂತಾರಾಷ್ಟ್ರೀಯ ಶತಕಗಳನ್ನು ದಾಖಲಿಸಿದ್ದಾರೆ. 5 ಟೆಸ್ಟ್ ಹಾಗೂ 6 ಏಕದಿನ ಶತಕಗಳು ಸೇರಿವೆ. 2008ರಲ್ಲಿ ಮೊದಲ ಪಂದ್ಯವಾಡಿದ ಕೊಹ್ಲಿ, 2017ರಲ್ಲಿ ಒಡಿಐ ತಂಡದ ನಾಯಕತ್ವ ವಹಿಸಿಕೊಂಡರು. 40 ಶತಕಗಳ ಪೈಕಿ 18 ಶತಕ ನಾಯಕರಾಗಿ ಗಳಿಸಿದ್ದಾರೆ. 24 ಶತಕಗಳು ಚೇಸಿಂಗ್ ವೇಳೆಯಲ್ಲಿ ಗಳಿಸಿದ್ದಾಗಿದೆ.
ತೆಂಡೂಲ್ಕರ್ ದಾಖಲೆ ಮುರಿಯುವತ್ತ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕಣ್ಣು

50 ಫಿಫ್ಟಿ ಗಳಿಕೆ ಸಾಧನೆ
ಶತಕ ಗಳಿಕೆಗೂ ಮುನ್ನ ಕೊಹ್ಲಿ ಅವರು 50ರನ್ ಗಳಿಸಿದ್ದಾಗಲೂ ಹೊಸ ದಾಖಲೆ ಬರೆದಿದ್ದರು. 50ನೇ ಅರ್ಧಶತಕ ಗಳಿಸಿದ 7ನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಎಂಎಸ್ ಧೋನಿ, ಯುವರಾಜ್ ಸಿಂಗ್ ಹಾಗೂ ಮೊಹಮ್ಮದ್ ಅಜರುದ್ದೀನ್ ಈ ಮುಂಚೆ ಈ ಸಾಧನೆ ಮಾಡಿದ್ದಾರೆ.
ಒಡಿಐನಲ್ಲಿ ತ್ವರಿತವಾಗಿ 1000 ಬೌಂಡರಿ ಗಳಿಕೆ
ವಿರಾಟ್ ಕೊಹ್ಲಿ : 224 ಪಂದ್ಯ, 216 ಇನ್ನಿಂಗ್ಸ್
ವೀರೇಂದ್ರ ಸೆಹ್ವಾಗ್: 227 ಪಂದ್ಯ, 221 ಇನ್ನಿಂಗ್ಸ್
ಆಡಂ ಗಿಲ್ ಕ್ರಿಸ್ಟ್ : 243 ಪಂದ್ಯ, 236 ಇನ್ನಿಂಗ್ಸ್
ಕ್ರಿಸ್ ಗೇಲ್ : 248 ಪಂದ್ಯ, 243 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್ 264 ಪಂದ್ಯ, 257 ಇನ್ನಿಂಗ್ಸ್
ಬ್ರಿಯಾನ್ ಲಾರಾ 279 ಪಂದ್ಯ, 270 ಇನ್ನಿಂಗ್ಸ್
ಐಸಿಸಿ 2018 ವರ್ಷದ ಕ್ರಿಕೆಟಿಗನಾಗಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications