ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ 2018 ವರ್ಷದ ಕ್ರಿಕೆಟಿಗನಾಗಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ!

Kohli creates history, becomes 1st player to win ICC, Test and ODI cricketer of the year

ನವದೆಹಲಿ, ಜನವರಿ 22: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ವಿಶ್ವವೇ ಮೆಚ್ಚುವ ಸಾಧನೆಗೆ ಕಾರಣರಾಗಿದ್ದಾರೆ. ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ಐಸಿಸಿ 2018 ವರ್ಷದ ಆಟಗಾರ ಪ್ರಶಸ್ತಿ ಕೊಹ್ಲಿಗೆ ಲಭಿಸಿದೆ. ಈ ಅಪರೂಪದ ಸಾಧನೆಯೊಂದಿಗೆ ಕೊಹ್ಲಿ ಇಡೀ ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಹಾರ್ದಿಕ್-ರಾಹುಲ್ ಎಫೆಕ್ಟ್: ವರ್ತನಾ ಸಮಾಲೋಚನೆ ಮೊರೆ ಹೋದ ಬಿಸಿಸಿಐಹಾರ್ದಿಕ್-ರಾಹುಲ್ ಎಫೆಕ್ಟ್: ವರ್ತನಾ ಸಮಾಲೋಚನೆ ಮೊರೆ ಹೋದ ಬಿಸಿಸಿಐ

ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ 2018ರ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಕೊಹ್ಲಿ ಅವರು ಪುರುಷರ ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ಪ್ರಶಸ್ತಿ ಬಾಚಿಕೊಂಡಿದ್ದಾರೆ. 2018ರ ವರ್ಷದಲ್ಲಿ ಕ್ರಿಕೆಟ್‌ನಲ್ಲಿನ ಅದ್ಭುತ ಸಾಧನೆಗಾಗಿ ಕೊಹ್ಲಿಗೆ ಈ ಪ್ರಶಸ್ತಿ ಲಭಿಸಿದೆ.

ಮಾನವೀಯ ಮುಖದಿಂದ ಅಭಿಮಾನಿಗಳ ಮನಗೆದ್ದ ಬಂಗಾಳ ಹುಲಿ ಗಂಗೂಲಿ!ಮಾನವೀಯ ಮುಖದಿಂದ ಅಭಿಮಾನಿಗಳ ಮನಗೆದ್ದ ಬಂಗಾಳ ಹುಲಿ ಗಂಗೂಲಿ!

2018ರಲ್ಲಿ ಕೊಹ್ಲಿ ಅನೇಕ ದಾಖಲೆಗಳಿಗೆ ಗಮನ ಸೆಳೆದಿದ್ದರು. ಐಸಿಸಿ ಟೆಸ್ಟ್ ಮತ್ತು ಏಕದಿನ ರ್ಯಾಂಕಿಂಗ್‌ನಲ್ಲಿ ಕೊಹ್ಲಿ ಅಗ್ರ ಸ್ಥಾನಕ್ಕೆ ಏರಿದ್ದರಲ್ಲದೆ, ನಂ.1 ಸ್ಥಾನದಲ್ಲೇ ಭದ್ರವಾಗಿದ್ದರು ಕೂಡ. ಕೊಹ್ಲಿ ಈಗ ಭಾರತ ಪರ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದಂತಾಗಿದೆ.

ಐಸಿಸಿ ಟೆಸ್ಟ್, ಏಕದಿನ ತಂಡದ ನಾಯಕ

ಐಸಿಸಿ ಟೆಸ್ಟ್, ಏಕದಿನ ತಂಡದ ನಾಯಕ

ಟೆಸ್ಟ್ ಮತ್ತು ಏಕದಿನ ಎರಡೂ ಐಸಿಸಿ ಪ್ರಶಸ್ತಿಯನ್ನು ಒಟ್ಟಿಗೆ ಪಡೆದ ವಿಶ್ವದ ಮೊದಲ ಆಟಗಾರನಾಗಿ ಕೊಹ್ಲಿ ಮಿಂಚಿದ್ದಾರೆ. ಈ ಸಾಧನೆಯೊಂದಿಗೆ ಕೊಹ್ಲಿ ಅವರು ಐಸಿಸಿ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಎಂಬ ಹಿರಿಮೆಯೂ ತನ್ನದಾಗಿಸಿಕೊಂಡಿದ್ದಾರೆ.

ವಿರಾಟ್ ಅದ್ಭುತ ಸಾಧನೆ

ವಿರಾಟ್ ಅದ್ಭುತ ಸಾಧನೆ

13 ಟೆಸ್ಟ್ ಪಂದ್ಯಗಳಲ್ಲಿ 55.08ರ ಸರಾಸರಿಯಂತೆ ಒಟ್ಟು 1,322 ರನ್ ಗಳನ್ನು ಕೊಹ್ಲಿ 2018ರ ವರ್ಷದಲ್ಲಿ ಗಳಿಸಿದ್ದರು. ಇದರಲ್ಲಿ 5 ಶತಕಗಳೂ ಸೇರಿದ್ದವು. ಒಟ್ಟು 14 ಏಕದಿನ ಪಂದ್ಯಗಳಲ್ಲಿ 133.55 ಸರಾಸರಿಯಂತೆ ಕೊಹ್ಲಿ 1202 ರನ್ ಸಾಧನೆ ಹೊಂದಿದ್ದಾರೆ. 10 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕೊಹ್ಲಿ 211 ರನ್ ಬಾರಿಸಿದ್ದಾರೆ.

ಹಿಂದೆಯೂ ಪ್ರಶಸ್ತಿ ಬಾಚಿಕೊಂಡಿದ್ದ ಕೊಹ್ಲಿ

ಹಿಂದೆಯೂ ಪ್ರಶಸ್ತಿ ಬಾಚಿಕೊಂಡಿದ್ದ ಕೊಹ್ಲಿ

ಕಳೆದ ವರ್ಷ ವಿರಾಟ್ ಕೊಹ್ಲಿ ಸರ್ ಗಾರ್ಫೀಲ್ಡ್ ಟ್ರೋಫಿ ಮತ್ತು ಐಸಿಸಿ ವರ್ಷದ ಏಕದಿನ ಕ್ರಿಕೆಟ್ ಆಟಗಾರ ಪ್ರಶಸ್ತಿ ಪಡೆದಿದ್ದರು. 2012ರಲ್ಲೂ ಕ್ಯಾಪ್ಟನ್ ಕೊಹ್ಲಿ ಐಸಿಸಿ ಏಕದಿನ ಪಂದ್ಯದಲ್ಲಿ ವರ್ಷದ ಆಟಗಾರ ಪ್ರಶಸ್ತಿ ಪಡೆದಿದ್ದನ್ನು ಇಲ್ಲಿ ಗಮನಿಸಬಹುದು.

ನನ್ನ ತಂಡವೇ ಅದ್ಭುತವಾಗಿದೆ

ನನ್ನ ತಂಡವೇ ಅದ್ಭುತವಾಗಿದೆ

'ಈ ಅನುಭವ ಅದ್ಭುತವಾಗಿದೆ. ಪ್ರಸಕ್ತ ವರ್ಷದಲ್ಲಿ ಶ್ರಮಿಸಿದ್ದಕ್ಕೆ ಸಿಕ್ಕ ಫಲವಿರು. ಈ ಪ್ರಶಸ್ತಿ ಲಭಿಸಿದ್ದಕ್ಕೆ ನನಗೆ ನಿಜಕ್ಕೂ ಹೆಮ್ಮೆ ಮತ್ತು ಖುಷಿ ಅನ್ನಿಸಿದೆ. ನನ್ನ ತಂಡವೇ ಅದ್ಭುತವಾಗಿದೆ. ಹಾಗಾಗಿ ನಾನೂ ಈ ಸಾಧನೆ ತೋರೋದು ಸಾಧ್ಯವಾಗಿದೆ' ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಕೊಹ್ಲಿ ತಂತಸ ತೋರಿಕೊಂಡರು.

Story first published: Tuesday, January 22, 2019, 15:48 [IST]
Other articles published on Jan 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X