For Quick Alerts
ALLOW NOTIFICATIONS  
For Daily Alerts
 

ಶೂನ್ಯಕ್ಕೆ ಔಟಾದ್ರೂ ದಾಖಲೆ ಬರೆದ ವಿರಾಟ್: ಇದು ಬೇಕಿತ್ತಾ ಕೊಹ್ಲಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೀರ್ಘ ವಿಶ್ರಾಂತಿ ಬಳಿಕ ಬಂದ ಪ್ರಥಮ ಟೆಸ್ಟ್‌ನಲ್ಲಿ ಶೂನ್ಯಕ್ಕೆ ಔಟಾದ್ರೂ ದಾಖಲೆ ಬರೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಅಜಾಜ್ ಪಟೇಲ್ ದಾಳಿಗೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ರೆ, ವಿರಾಟ್‌ ಕೊಹ್ಲಿ ಶೂನ್ಯದ ಜೊತೆಗೆ ದಾಖಲೆಯನ್ನ ತನ್ನ ಹೆಸರಿನಲ್ಲಿ ಸೇರಿಸಿಕೊಂಡ್ರು.

ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಕಂಟಕಪ್ರಾಯರಾದ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ ಭಾರತದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದರು. ಮೊದಲಿಗೆ 44 ರನ್‌ಗಳಿಸಿದ್ದ ಶುಭ್ಮನ್ ಗಿಲ್ ಸ್ಲಿಪ್‌ನಲ್ಲಿದ್ದ ರಾಸ್‌ಟೇಲರ್‌ಗೆ ವಿಕೆಟ್‌ ಒಪ್ಪಿಸಿದ್ರೆ, ಇದ್ರ ಬೆನ್ನಲ್ಲೇ ಚೇತೇಶ್ವರ ಪೂಜಾರ ಶೂನ್ಯಕ್ಕೆ ಬೌಲ್ಡ್ ಆದ್ರು. ಪೂಜಾರ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್‌ಗೆ ಇಳಿದರು.

ವಾಂಖೆಡೆ ಮೈದಾನದಲ್ಲಿ ಸೊನ್ನೆ ಸುತ್ತಿದ ವಿರಾಟ್

ವಾಂಖೆಡೆ ಮೈದಾನದಲ್ಲಿ ಸೊನ್ನೆ ಸುತ್ತಿದ ವಿರಾಟ್

ದುಬೈನಲ್ಲಿ ನಡೆದ ಕಳೆದ ಟಿ20 ವಿಶ್ವಕಪ್‌ ಬಳಿಕ ಭಾರತದ ಪರ ಮೊದಲ ಬಾರಿಗೆ ಕಣಕ್ಕಿಳಿದ ವಿರಾಟ್‌, ಎದುರಿಸಿದ ಕೇವಲ ನಾಲ್ಕು ಎಸೆತಗಳಲ್ಲಿ ಪೆವಿಲಿಯನ್ ಸೇರಿಕೊಂಡ್ರು. ಅಜಾಜ್ ಪಟೇಲ್ ಎಸೆತದಲ್ಲಿ ಡಿಫೆನ್ಸ್ ಮಾಡಲು ಹೋದ ವಿರಾಟ್‌ ವಿವಾದಾತ್ಮಕ ಔಟ್‌ಗೆ ಪೆವಿಲಿಯನ್ ಸೇರಿಕೊಂಡ್ರು. ಇದರ ಜೊತೆಗೆ ವಿರಾಟ್‌ ಬ್ಯಾಟ್‌ನಿಂದ ಇಂದಾದ್ರೂ ಶತಕ ಸಿಡಿಯಬಹುದೆಂಬ ಅಭಿಮಾನಿಗಳ ನಿರೀಕ್ಷೆಗಳು ಹುಸಿಯಾದವು.

ಶೂನ್ಯಕ್ಕೆ ಔಟಾದ್ರೂ ಕೊಹ್ಲಿ ದಾಖಲೆ!

ವಿರಾಟ್ ಕೊಹ್ಲಿ ಅಜಾಜ್ ಪಟೇಲ್ ಸ್ಪಿನ್‌ ದಾಳಿಯಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರು. ಈ ಮೂಲಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರೂ ಹೊಸ ದಾಖಲೆ ಬರೆದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಸೊನ್ನೆ ಸುತ್ತಿದ ಟೀಂ ಇಂಡಿಯಾ ನಾಯಕ ಎಂಬ ಕೆಟ್ಟ ದಾಖಲೆ ಈತನ ಹೆಗಲಿಗೇರಿದೆ.

ವಿರಾಟ್ ಕೊಹ್ಲಿ ತವರಿನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ. ಭಾರತದಲ್ಲಿ ಇದು ಆರನೇ ಬಾರಿಗೆ ನಾಯಕನಾಗಿ ಕೊಹ್ಲಿ ಖಾತೆ ತೆರೆಯದೆ ಹಿಂದಿರುಗಿದ್ದಾರೆ. ಅವರಿಗಿಂತ ಮೊದಲು, ಈ ದಾಖಲೆ ಎಂಕೆ ಪಟೌಡಿ ಹೆಸರಿನಲ್ಲಿತ್ತು, ಅವರು ತವರಿನಲ್ಲಿ ಐದು ಬಾರಿ ಶೂನ್ಯಕ್ಕೆ ಔಟಾಗಿದ್ದರು.

ಕೊಹ್ಲಿ 6
ಪಟೌಡಿ 5
ಕಪಿಲ್ ದೇವ್, ಎಂ.ಎಸ್ ಧೋನಿ 5

ಒಟ್ಟಾರೆ 10 ಬಾರಿ ನಾಯಕನಾಗಿ ಡಕ್ ಔಟ್‌

ಒಟ್ಟಾರೆ 10 ಬಾರಿ ನಾಯಕನಾಗಿ ಡಕ್ ಔಟ್‌

ವಿರಾಟ್ ಕೊಹ್ಲಿ ಅವರು ಔಟಾದ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ 10 ಡಕ್‌ಗಳನ್ನು ದಾಖಲಿಸಿದ ಮೊದಲ ಭಾರತೀಯ ನಾಯಕರಾದರು. ಇದಲ್ಲದೆ ವಿಶ್ವದಲ್ಲೇ ಶೂನ್ಯಕ್ಕೆ ಔಟಾದ ನಾಯಕರ ಪಟ್ಟಿಯಲ್ಲಿ ಕೊಹ್ಲಿ ಈಗ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಸ್ಟೀಫನ್ ಫ್ಲೆಮಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿಯೊಂದಿಗೆ ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಇದ್ದಾರೆ. ಇವರಿಬ್ಬರ ನಂತರ ಇಂಗ್ಲೆಂಡ್‌ನ ಮೈಕಲ್ ಅಥರ್ಟನ್, ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೋನಿ ಮತ್ತು ಭಾರತದ ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ಮೂವರೂ ನಾಯಕರಾಗಿ ಟೆಸ್ಟ್‌ನಲ್ಲಿ ಎಂಟು ಬಾರಿ ಶೂನ್ಯಕ್ಕೆ ಔಟಾದ ದಾಖಲೆ ಹೊಂದಿದ್ದಾರೆ.

ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್‌: ಥರ್ಡ್‌ ಅಂಪೈರ್ ವಿವಾದಾತ್ಮಕ ತೀರ್ಪಿನ ವಿರುದ್ಧ ಕಿಡಿಕಾರಿದ ನೆಟ್ಟಿಗರು

Virat Kohli ಔಟ್ ಆದ ನಂತರ ನಡೆದುಕೊಂಡ ರೀತಿ | Oneindia Kannada
ವಿವಾದಾತ್ಮಕ ತೀರ್ಪಿಗೆ ಔಟಾದ ವಿರಾಟ್

ವಿವಾದಾತ್ಮಕ ತೀರ್ಪಿಗೆ ಔಟಾದ ವಿರಾಟ್

ಕಿವೀಸ್ ಅಜಾಜ್ ಪಟೇಲ್ ಸ್ಪಿನ್ ದಾಳಿಯಲ್ಲಿ ಕೊಹ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರು. ಆದ್ರೀಗ ವಿರಾಟ್ ವಿಕೆಟ್ ಒಪ್ಪಿಸಿದ್ದು, ವಿವಾದಾತ್ಮಕ ತಿರುವು ಪಡೆದುಕೊಂಡಿತು. ಚೆಂಡು ಮೊದಲು ಬ್ಯಾಟ್‌ಗೆ ತಾಗಿ ನಂತರ ಪ್ಯಾಡ್‌ಗೆ ಬಡಿದಂತಿತ್ತು. ಆದರೆ ಥರ್ಡ್‌ ಅಂಪೈರ್ ಆನ್ ಫೀಲ್ಡ್ ಅಂಪೈರ್ ನಿರ್ಧಾರವನ್ನು ಎತ್ತಿ ಹಿಡಿದರು. ವಿರಾಟ್ ಕೊಹ್ಲಿ ಮತ್ತು ಭಾರತೀಯ ಪಾಳಯವು ರಿವೀವ್ ನೋಡಿದ ನಂತರ ಎಲ್ಲರೂ ಶಾಕ್ ಆದರು.

ಒಂದು ಆ್ಯಂಗಲ್‌ನಿಂದ ಚೆಂಡಿನ ಒಂದು ಬದಿ ಬ್ಯಾಟ್ ಮತ್ತು ಪ್ಯಾಡ್‌ನ ಒಂದು ಬದಿಯೊಂದಿಗೆ ಬಡಿದಂತೆ ತೋರುತ್ತಿತ್ತು. ಆದರೆ ಮೊದಲು ಚೆಂಡು ಯಾವುದಕ್ಕೆ ಬಡಿಯಿತು ಎಂಬುದು ಸ್ಪಷ್ಟವಾಗಿ ತೋರುತ್ತಿರಲಿಲ್ಲ. ಆದಾಗ್ಯೂ, ರಿವ್ಯೂ ನೋಡಿದಾಗ, ಚೆಂಡು ಬ್ಯಾಟ್‌ಗೆ ಬಡಿದು ಪ್ಯಾಡ್‌ನತ್ತ ಹೋಗಿದೆ ಎಂದು ಭಾವಿಸಲಾಯಿತು. ಇದರ ಜೊತೆಗೆ ಮೊದಲು ಬ್ಯಾಟ್‌ಗೆ ತಾಗಿದೆ ಎಂಬುದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ಮೂರನೇ ಅಂಪೈರ್ ಹೇಳಿದರು. ಹೀಗಾಗಿ ತಮ್ಮ ನಿರ್ಧಾರವನ್ನು ಎತ್ತಿಹಿಡಿಯುವಂತೆ ಮೈದಾನದ ಅಂಪೈರ್‌ಗೆ ಕೇಳಿದರು.

Story first published: Friday, December 3, 2021, 20:54 [IST]
Other articles published on Dec 3, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+