
ಆಟಗಾರರ ಹೆಸರನ್ನು ಬಹಿರಂಗಪಡಿಸಲಿ ಎಂದ ಗವಾಸ್ಕರ್
ಇಂಡಿಯಾ ಟುಡೇ ಜೊತೆಗೆ ಮಾತನಾಡಿರುವ ಸುನಿಲ್ ಗವಾಸ್ಕರ್, ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ಯಾವ ರೀತಿಯಲ್ಲಿದೆ ಎಂದು ತಿಳಿಯುವುದು ಕಷ್ಟಸಾಧ್ಯ. ಆದ್ರೆ ವಿರಾಟ್ ಕೊಹ್ಲಿ ಸ್ವತಃ ನಾಯಕತ್ವ ಬಿಟ್ಟು ಕೊಟ್ಟ ಬಳಿಕ ನಿರ್ದಿಷ್ಟ ಯಾವ ಆಟಗಾರರು ಸಂಪರ್ಕಿಸಿಲ್ಲ ಎಂಬುದನ್ನ ಬಹಿರಂಗಪಡಿಸಲಿ. ಏಕೆಂದರೆ ಆತನಿಗೆ ನಂತರದಲ್ಲಿ ಶುಭಾಶಯ ಕೋರಿದ ಆಟಗಾರರಿಗೆ ಯಾವುದೇ ಗೊಂದಲವಿಲ್ಲದಿದ್ರೆ ಉತ್ತಮ ಎಂದು ಗವಾಸ್ಕರ್ ಹೇಳಿದ್ದಾರೆ.
''ಡ್ರೆಸ್ಸಿಂಗ್ ರೂಂನ ಒಳಗಿನ ಪರಿಸ್ಥಿತಿ ನನಗೆ ತಿಳಿದಿಲ್ಲ. ಆಟಗಾರರ ನಡುವಿನ ಸಂಬಂಧವೂ ಯಾವ ರೀತಿಯಲ್ಲಿದೆ ಎಂಬುದು ತಿಳಿದಿಲ್ಲ. ನನ್ನ ಪ್ರಕಾರ ಆತ(ಕೊಹ್ಲಿ) ಒಬ್ಬ ವ್ಯಕ್ತಿಯ ಹೆಸರನ್ನ ಮಾತ್ರ ಉಲ್ಲೇಖಿಸಿ ತನ್ನೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಿದ ಬಳಿಕ, ಸಂಪರ್ಕವಿಲ್ಲದ ಆಟಗಾರರು ಯಾರು ಎಂಬುದನ್ನ ಹೆಸರಿಸುವುದು ಉತ್ತಮ. ಏಕೆಂದರೆ ಆಗ ಎಲ್ಲರೂ ತನ್ನೊಂದಿಗೆ ಸಂಪರ್ಕಕ್ಕೆ ಬಂದಿಲ್ಲ ಎಂದು ಭಾವಿಸುವುದಕ್ಕಿಂತ ಸಂಬಂಧಪಟ್ಟವರಿಗೆ ಸ್ವಲ್ಪ ನ್ಯಾಯಯುತವಾಗಿರುತ್ತಿತ್ತು, "ಎಂದು ಗವಾಸ್ಕರ್ ಹೇಳಿದರು.
ದೇಶೀಯ ಕ್ರಿಕೆಟ್‌ಗೂ ವಿದಾಯ ಹೇಳಲಿದ್ದಾರೆ ಭಾರತದ ಸ್ಟಾರ್ ಕ್ರಿಕೆಟಿಗ!: ವಿದೇಶಿ ಲೀಗ್ ಜೊತೆ ಒಪ್ಪಂದ?

ಡ್ರೆಸ್ಸಿಂಗ್ ರೂಂ ವಾತಾವರಣದ ಕುರಿತ ಪ್ರಶ್ನೆಗೆ ಗವಾಸ್ಕರ್ ಉತ್ತರ
"ಇಲ್ಲ, ನಾನು ಹೇಳಲಾರೆ, ಅದು ಅವನ ಮನಸ್ಥಿತಿ, ನಾನು ಮನಶಾಸ್ತ್ರಜ್ಞನಲ್ಲ (ಕೊಹ್ಲಿಗೆ ಇನ್ನೂ ನಾಯಕತ್ವದ ಆಲೋಚನೆಗಳಿವೆಯೇ?). ಪ್ರಸ್ತುತ ನಾಯಕತ್ವದ ಬಗ್ಗೆ ಬರುತ್ತಿರುವ ಕಾಮೆಂಟ್‌ಗಳನ್ನು ಕೇಳಿದಾಗ ನನಗೆ ಅನಿಸಿದ್ದನ್ನು ಹೇಳುತ್ತಿದ್ದೇನೆ. ಐಪಿಎಲ್ ಸುದ್ದಿಗೋಷ್ಟಿಯ ಅವಧಿಯಲ್ಲಿ ಕಾಮೆಂಟೇಟರ್‌ಗಳು , ಆಟಗಾರನು ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಕೋಚ್ ಮತ್ತು ಪ್ರಸ್ತುತ ತಂಡದ ನಾಯಕನ ಬಗ್ಗೆ ಕೇಳುವ ಪ್ರಶ್ನೆಗಳಲ್ಲಿ ಒಂದಾಗಿದೆ'' ಎಂದಿದ್ದಾರೆ.
ನನ್ನ ನಂಬರ್ ಹಲವರ ಬಳಿ ಇದೆ, ಆದರೆ ನಾಯಕತ್ವ ಬಿಟ್ಟಾಗ ಮೆಸೇಜ್ ಮಾಡಿದ್ದು ಆತ ಮಾತ್ರ ಎಂದ ಕೊಹ್ಲಿ!

ಟೆಸ್ಟ್ ನಾಯಕತ್ವದ ರಾಜೀನಾಮೆ ಕುರಿತು ವಿರಾಟ್ ಕೊಹ್ಲಿ ಹೇಳಿದ್ದೇನು?
ಸುದ್ದಿಗೋಷ್ಟಿಯಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ಬಿಟ್ಟಾಗ ತನಗೆ ಮೆಸೇಜ್ ಮಾಡಿ ವಿಚಾರಿಸಿದ್ದು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಮಾತ್ರ ಎಂಬುದನ್ನು ತಿಳಿಸಿದ್ದರು. ತನ್ನ ನಂಬರ್ ಅನೇಕರ ಬಳಿ ಇದ್ದರೂ ಸಹ ಧೋನಿ ಹೊರತುಪಡಿಸಿ ಉಳಿದ ಯಾರೂ ಸಹ ಮೆಸೇಜ್ ಮಾಡಲಿಲ್ಲ ಎಂದು ಕೊಹ್ಲಿ ಬಿಚ್ಚಿಟ್ಟಿದ್ದಾರೆ. ಇದೇ ವೇಳೆಯಲ್ಲಿ ತನಗೆ ಮಹೇಂದ್ರ ಸಿಂಗ್ ಧೋನಿ ಮೇಲೆ ಇರುವ ನಿಜವಾದ ಗೌರವ ಹಾಗೂ ಅವರ ಜೊತೆ ಇರುವ ಸಂಬಂಧ ಎಂತಹದ್ದು ಎಂಬುದರ ಬಗ್ಗೆ ಕೊಹ್ಲಿ ಮಾತನಾಡಿದ್ದರು.
ವಿರಾಟ್ ಕೊಹ್ಲಿಯ ಈ ಹೇಳಿಕೆ ಬಳಿಕ ಅನೇಕ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದ್ದು, ವಿರಾಟ್ ಜೊತೆಗೆ ಟೀಂ ಇಂಡಿಯಾ ಆಟಗಾರರ ಸಂಬಂಧ ಉತ್ತಮವಾಗಿಲ್ಲವೇ? ಎಂಬ ಪ್ರಶ್ನೆಗಳನ್ನ ಹುಟ್ಟುಹಾಕಿದೆ.


Click it and Unblock the Notifications
