Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ವಿರಾವೇಶ: ಸಚಿನ್‌, ಸಂಗಕ್ಕಾರ ದಾಖಲೆ ಅಳಿಸಿದ ಚೇಸ್‌ ಮಾಸ್ಟರ್‌

ಕಳೆದ ಎರಡು ಪಂದ್ಯಗಳಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದ ವಿರಾಟ್ ಕೊಹ್ಲಿ, ಸಿಡ್ನಿ ಅಂಗಳದಲ್ಲಿ ತಮ್ಮ ನೈಜ್ಯ ಆಟವನ್ನು ಪ್ರದರ್ಶಿಸಿದರು. ಸಿಡ್ನಿ ಅಂಗಳಕ್ಕೆ ವಿರಾಟ್ ಎಂಟ್ರಿ ನೀಡುತ್ತಿದ್ದಾಗಲೇ ಅಭಿಮಾನಿಗಳು ಅವರಿಗೆ ಅಭಿಮಾನಿಗಳು ಚಪ್ಪಾಳಿ ತಟ್ಟಿ ಪ್ರೋತ್ಸಾಹ ನೀಡಿದರು. ವಿರಾಟ್‌ ಅಂಗಳಕ್ಕೆ ಇಳಿಯುತ್ತಲೇ ಹ್ಯಾಜಲ್‌ವುಡ್‌ ಎಸೆತದಲ್ಲಿ ಸಿಂಗಲ್‌ ರನ್‌ ಪಡೆಯುತ್ತಲೇ ಸಂಭ್ರಮಿಸಿದರು. ಇದೇ ಲಯದಲ್ಲಿ ಬ್ಯಾಟ್ ಮಾಡಿದ ವಿರಾಟ್‌ ಎದುರಾಳಿ ಬೌಲರ್‌ಗಳನ್ನು ಕಾಡಿದರು. ಅಲ್ಲದೆ ಚೇಸಿಂಗ್‌ನಲ್ಲಿ ದಾಖಲೆಯನ್ನು ಬರೆದರು.

ವಿರಾಟ್‌ ಕೊಹ್ಲಿ ಪರ್ತ್‌ ಹಾಗೂ ಆಡಿಲೇಡ್‌ನಲ್ಲಿ ಕಂಡಿದ್ದ ನಿರಾಸೆಯನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದರು. ಈ ಪಂದ್ಯದಲ್ಲಿ ವಿರಟ್ 28ನೇ ಓವರ್‌ನಲ್ಲಿ ತಮ್ಮ ವೃತ್ತಿ ಜೀವನದ 75ನೇ ಅರ್ಧಶತಕ ಬಾರಿಸಿ ಮಿಂಚಿದರು. ಈ ಮೂಲಕ ವಿರಾಟ್‌ ಮತ್ತೊಂದು ದಾಖಲೆಯನ್ನು ಬರೆದರು. ಈ ಮೂಲಕ ತಮ್ಮ ಗುರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸಿ ಹಾಕಿದರು.

Virat Kohli Smashes 75th ODI Fifty Surpasses Sachin Tendulkar s Major Chasing Record

ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸುತ್ತಲೇ ವಿಶ್ವ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ಬರೆದರು. ವಿರಾಟ್‌ ರನ್‌ಗಳನ್ನು ಬೆನ್ನಟ್ಟಿದಾಗ ಅತಿ ಹೆಚ್ಚು 50ಕ್ಕೂ ಹೆಚ್ಚು ರನ್‌ಗಳನ್ನು ಬಾರಿಸಿದ ದಾಖಲೆಯನ್ನು ವಿರಾಟ್‌ ತಮ್ಮದಾಗಿಸಿಕೊಂಡರು. ಈ ಮೂಲಕ ತಮ್ಮ ಗುರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸಿದ ಹಾಕಿದರು.

ಏಕದಿನ ಕ್ರಿಕೆಟ್‌: ಚೇಸಿಂಗ್‌ನಲ್ಲಿ 50ಕ್ಕೂ ಹೆಚ್ಚು ರನ್‌

ವಿರಾಟ್ ಕೊಹ್ಲಿ, ಭಾರತ, 70
ಸಚಿನ್‌ ತೆಂಡೂಲ್ಕರ್‌, ಭಾರತ, 69
ರೋಹಿತ್ ಶರ್ಮಾ, ಭಾರತ, 55,
ಜಾಕ್‌ ಕಾಲಿಸ್‌, ದಕ್ಷಿಣ ಆಫ್ರಿಕಾ, 50
ಕ್ರಿಸ್‌ ಗೇಲ್‌, ವೆಸ್ಟ್‌ ಇಂಡೀಸ್‌, 46

ವಿರಾಟ್‌ ಕೊಹ್ಲಿ ಸಿಡ್ನಿಯಲ್ಲಿ 74 ರನ್ ಬಾರಿಸುತ್ತಿದ್ದಂತೆ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದರು. ಇವರು ಶ್ರೀಲಂಕಾದ ದಿಗ್ಗಜ ಆಟಗಾರ ಕುಮಾರ್ ಸಂಗಕ್ಕಾರ ಅವರ ದಾಖಲೆಯನ್ನು ಅಳಿಸಿ ಹಾಕಿದರು.

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಟಾಪ್‌ 5 ಬ್ಯಾಟರ್ಸ್‌

ಸಚಿನ್‌ ತೆಂಡೂಲ್ಕರ್, ಭಾರತ, 18426
ವಿರಾಟ್‌ ಕೊಹ್ಲಿ, ಭಾರತ, 14255
ಕುಮಾರ್ ಸಂಗಕ್ಕಾರ, ಶ್ರೀಲಂಕಾ, 14234
ರಿಕ್ಕಿ ಪಾಂಟಿಂಗ್, ಆಸ್ಟ್ರೇಲಿಯಾ, 13704
ಸನತ್ ಜಯಸೂರ್ಯ, ಶ್ರೀಲಂಕಾ, 13430

Story first published: Saturday, October 25, 2025, 15:08 [IST]
Other articles published on Oct 25, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+