Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟ್ರಾಫಿಕ್ ದಂಡ ಕಟ್ಟಿದ ಬಳಿಕ ವಿರಾಟ್ ಕೊಹ್ಲಿ ಪರಿಸ್ಥಿತಿ ನೋಡಿ!

ನವದೆಹಲಿ, ಸೆಪ್ಟೆಂಬರ್ 6: ಮೈದಾನದಲ್ಲಿನ ತಮ್ಮ ದಾಖಲೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮೈದಾನದಾಚೆಗೂ ಸದ್ದುಮಾಡುತ್ತಿರುತ್ತಾರೆ. ಅದ್ಭುತ ಕ್ರಿಕೆಟಿಗನಾಗಿ ಮೆಚ್ಚುಗೆ ಗಳಿಸಿದರೂ, ಕೊಹ್ಲಿ ನಡವಳಿಕೆಯನ್ನು ಟೀಕಿಸುವವರಿದ್ದಾರೆ. ಜತೆಗೆ ಮಾನವೀಯ ನಡೆಗಳ ಮೂಲಕ ಪ್ರಶಂಸೆಗೂ ಪಾತ್ರರಾಗುತ್ತಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೊಹ್ಲಿ ಬಳಗ ಸರಣಿಗಳನ್ನು ವೈಟ್ ವಾಶ್ ಮಾಡಿಕೊಳ್ಳುವ ಮೂಲಕ ಯಶಸ್ವಿ ಸಾಧನೆ ಮಾಡಿದೆ. ಅದರ ಬಳಿಕ ಕೊಹ್ಲಿ ಮತ್ತೆ ಜಾಲತಾಣಗಳಲ್ಲಿ ಸುದ್ದಿಯಲ್ಲಿದ್ದಾರೆ. ಅದು ಅರೆಬೆತ್ತಲೆ ಪೋಸ್ ನೀಡುವ ಮೂಲಕ.

ವಿರಾಟ್ ಕೊಹ್ಲಿ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಅರೆಬೆತ್ತಲೆ ಚಿತ್ರವೊಂದನ್ನು ಹಾಕಿಕೊಂಡಿದ್ದಾರೆ. ಅದು ಫೋಟೊಶೂಟ್ ಒಂದರ ಚಿತ್ರದಂತೆ ಕಾಣಿಸುತ್ತದೆ. ಕೇವಲ ಚಡ್ಡಿಯಲ್ಲಿ ಮಂದ ಬೆಳಕಿನಲ್ಲಿ ಕುಳಿತಿರುವ ಕೊಹ್ಲಿ ದೇಹದ ಒಂದು ಭಾಗದ ಮೇಲೆ ಬೆಳಕು ಬೀಳುವಂತೆ ಫೋಟೊ ತೆಗೆಯಲಾಗಿದೆ.

ಈ ಫೋಟೊ ಅಂತರ್ಜಾಲದಲ್ಲಿ ಧೂಳೆಬ್ಬಿಸಿದೆ. ಕೊಹ್ಲಿಯ ಫೋಟೊವನ್ನು ನೋಡಿ ಫಿದಾ ಆಗಿರುವ ಕಾರಣಕ್ಕೆ ಅಲ್ಲ, ಅದರ ಕುರಿತು ಸೃಷ್ಟಿಯಾಗುತ್ತಿರುವ ಟ್ರೋಲ್ ಮತ್ತು ಮೀಮ್‌ಗಳಿಗಾಗಿ. ನೆಟ್ಟಿಗರು ಈ ಟ್ವೀಟ್‌ಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ನಮ್ಮೊಳಗೆ ನೋಡಿಕೊಳ್ಳುವುದು...

ನಮ್ಮೊಳಗೆ ನೋಡಿಕೊಳ್ಳುವುದು...

'ನಾವು ನಮ್ಮೊಳಗೆ ಹೆಚ್ಚು ನೋಡಿಕೊಂಡಷ್ಟೂ ನಾವು ಯಾವುದಕ್ಕೂ ಹೊರಗೆ ನೋಡುವ ಅಗತ್ಯವಿಲ್ಲ' ಎಂದು ವಿರಾಟ್ ಕೊಹ್ಲಿ ತಮ್ಮ ಅರೆಬೆತ್ತಲೆ ಚಿತ್ರದೊಂದಿಗೆ ಶೀರ್ಷಿಕೆಯನ್ನು ಹಂಚಿಕೊಂಡಿದ್ದಾರೆ.

ಎಷ್ಟು ದಂಡ ಪಾವತಿಸಿರಬಹುದು?

ಎಷ್ಟು ದಂಡ ಪಾವತಿಸಿರಬಹುದು?

ಇದು ವಿರಾಟ್ ಕೊಹ್ಲಿ ಅವರು ಟ್ರಾಫಿಕ್ ಪೊಲೀಸರಿಗೆ ದಂಡ ಪಾವತಿ ಮಾಡಿದ ಬಳಿಕದ ಪರಿಸ್ಥಿತಿ ಎಂದು ತಮಾಷೆ ಮಾಡಲಾಗಿದೆ. 'ಈ ಚಿತ್ರ ನೋಡಿದ ಬಳಿಕ ಕೊಹ್ಲಿ ಎಷ್ಟು ಮೊತ್ತದ ಟ್ರಾಫಿಕ್ ದಂಡ ಪಾವತಿಸಿರಬಹುದು ಎಂದು ಯಾರು ಯಾರು ಲೆಕ್ಕಹಾಕುತ್ತಿದ್ದೀರಿ?' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 'ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟಿಗ ಟ್ರಾಫಿಕ್ ಚಲನ್ ಪಾವತಿಸಿದ ಬಳಿಕ' ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ.

ವಿರಾಟ್ ಕೊಹ್ಲಿ ಜೊತೆ ಅನಗತ್ಯ ದಾಖಲೆ ಪಟ್ಟಿ ಸೇರಿದ ಡೇವಿಡ್ ವಾರ್ನರ್

ದಂಡ ಕೊಟ್ಟ ಬಳಿಕ ನಮ್ಮ ಸ್ಥಿತಿ ಇದು

ದಂಡ ಕೊಟ್ಟ ಬಳಿಕ ನಮ್ಮ ಸ್ಥಿತಿ ಇದು

'ಇದು ಫೋಟೋ ಶೂಟ್ ಅಲ್ಲ, ಕೊಹ್ಲಿ ಚಲನ್ ಪಾವತಿಸಿದ್ದಾರಷ್ಟೇ' ಎಂದು ಒಬ್ಬರು ಟ್ರೋಲ್ ಮಾಡಿದ್ದಾರೆ. 'ಮದ್ಯಪಾನ ಮಾಡಿ ವಾಹನ ಓಡಿಸಿದ್ದಕ್ಕೆ ಟ್ರಾಫಿಕ್ ಪೊಲೀಸರು ನಮಗೆ ದಂಡ ವಿಧಿಸಿದ ಬಳಿಕ ನಮ್ಮ ಸ್ಥಿತಿ ಇದು' ಎಂದು ಮತ್ತೊಂದು ಟ್ವೀಟ್ ನಗೆಯುಕ್ಕಿಸುತ್ತದೆ.

ಪ್ಯಾಂಟ್ ಶರ್ಟ್ ಎಲ್ಲಿ?

ಪ್ಯಾಂಟ್ ಶರ್ಟ್ ಎಲ್ಲಿ?

ಈ ಚಿತ್ರ ನೋಡಿದ ಬಳಿಕ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, 'ನಿನ್ನ ಪ್ಯಾಂಟ್ ಮತ್ತು ಶರ್ಟ್ ಎಲ್ಲಿ?' ಎಂದು ಕೇಳುವಂತಹ ಮೀಮ್ ಹರಿದಾಡುತ್ತಿದೆ.

ಅರುಂಧತಿ ಸಿನಿಮಾ ಮಾಡಿದ್ದೆವು

ಅರುಂಧತಿ ಸಿನಿಮಾ ಮಾಡಿದ್ದೆವು

'ಇದನ್ನು ನಾವು ಬಹಳ ವರ್ಷಗಳ ಹಿಂದೆಯೇ ಅರುಂಧತಿ ಚಿತ್ರದಲ್ಲಿ ಮಾಡಿದ್ದೆವು' ಎಂದು ತೆಲುಗಿನ ಅರುಂಧತಿ ಸಿನಿಮಾದ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.

ಆಟೋಗ್ರಾಫ್ ಕೊಡುವ ಬದಲು ತಾನೇ ಪಡೆದುಕೊಂಡ ವಿರಾಟ್ ಕೊಹ್ಲಿ!

ಪಿಕೆ ಸೀಕ್ವೆಲ್ ಶೂಟಿಂಗ್ !

ಪಿಕೆ ಸೀಕ್ವೆಲ್ ಶೂಟಿಂಗ್ !

ಕೊಹ್ಲಿ ಈಗ ಅಮೀರ್ ಖಾನ್ ನಟಿಸಿದ್ದ 'ಪಿಕೆ' ಚಿತ್ರದ ಸೀಕ್ವೆಲ್ 'ಪಿಕೆ-2'ದ ಶೂಟಿಂಗ್ ಮಾಡುತ್ತಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ. ಇನ್ನು ಕೆಲವರು ನೀವು ಪ್ಯೂಮಾ ಕಂಪೆನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಮುಗಿದುಹೋಯಿತೇ? ಎಂದು ಕೀಟಲೆ ಮಾಡಿದ್ದಾರೆ.

Story first published: Friday, September 6, 2019, 11:40 [IST]
Other articles published on Sep 6, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+