Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಿಂಗ್ ಕೊಹ್ಲಿಯ 34ನೇ ಬರ್ತ್‌ಡೇ: ವಿಭಿನ್ನ ಫೋಟೋಗಳನ್ನ ಪೋಸ್ಟ್ ಮಾಡಿದ ಅನುಷ್ಕಾ ಶರ್ಮಾ

Virat kohli

ಟೀಂ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿಶ್ವದೆಲ್ಲೆಡೆ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಕಿಂಗ್ ಕೊಹ್ಲಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

ಮಾಡ್ರನ್ ಡೇ ಕ್ರಿಕೆಟ್‌ನ ಗ್ರೇಟೆಸ್ಟ್‌ ಬ್ಯಾಟರ್‌ ಆಗಿರುವ ವಿರಾಟ್‌ ಕೊಹ್ಲಿ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದು, ಮಿಲಿಯನ್‌ಗಟ್ಟಲೇ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಆತನ ಕ್ರಿಕೆಟ್‌ ಮೇಲಿನ ಪ್ರೀತಿ, ಪರಿಶ್ರಮ, ಫಿಟ್ನೆಸ್‌ ಹಾಗೂ ಕ್ರಿಕೆಟ್ ಮೈದಾನದ ಅಗ್ರೆಷನ್ ಯುವ ಜನತೆಗೆ ಮಾದರಿಯಾಗಿ ಪರಿಣಮಿಸಿದೆ.

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್‌ ವಿಚಾರದಲ್ಲಿ ತನ್ನದೇ ಆದ ಗುಣಮಟ್ಟವನ್ನು ಸೃಷ್ಟಿಸಿದ್ದಾನೆ. ಟೀಂ ಇಂಡಿಯಾ ಕ್ರಿಕೆಟ್‌ನಲ್ಲಿ ಫಿಟ್ನೆಸ್ ಆಯಾಮವನ್ನೇ ಬದಲಿಸಿರುವ ವಿರಾಟ್‌ ಕಳೆದೆರಡು ವರ್ಷಗಳಲ್ಲಿ ಬ್ಯಾಟಿಂಗ್‌ನಲ್ಲಿ ಮಂಕಾಗಿದ್ದರು. ಆದ್ರೆ ಒಮ್ಮೆ ವಿರಾಟ್ ಫಾರ್ಮ್‌ಗೆ ಮರಳಿದ ಬಳಿಕ ಹಿಂದಿರುಗಿ ನೋಡಲೇ ಇಲ್ಲ.

ಕೊಹ್ಲಿ ಬರ್ತ್‌ಡೇಗೆ ಅನುಷ್ಕಾ ಸ್ಪೆಷಲ್ ಪೋಸ್ಟ್‌

ಕೊಹ್ಲಿ ಬರ್ತ್‌ಡೇ ದಿನದಂದು ಆತನ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮಾಷೆಯ ಪೋಸ್ಟ್‌ನೊಂದಿಗೆ ಕೊಹ್ಲಿಗೆ ಶುಭ ಹಾರೈಸಿದ್ದಾರೆ. ಅನುಷ್ಕಾ ಶರ್ಮಾ ಪೋಸ್ಟ್‌ನಲ್ಲಿ ವಿರಾಟ್‌ ಕೊಹ್ಲಿ ವಿಭಿನ್ನ ಫೇಸ್ ಎಕ್ಸ್‌ಪ್ರೆಷನ್ ಹೊಂದಿರುವ ಫೋಟೋಗಳನ್ನ ಕಾಣಬಹುದು. ಈ ಫೋಟೋಗಳಿಗೆ ಅನುಷ್ಕಾ 'ಬೆಸ್ಟ್ ಆ್ಯಂಗಲ್' ಎಂದು ಶೀರ್ಷಿಕೆ ನೀಡಿದ್ದಾರೆ.

ಫೋಟೋಗಳನ್ನ ಶೇರ್ ಮಾಡಿರುವುದರ ಜೊತೆಗೆ ಅನುಷ್ಕಾ '' ಇಂದು ನಿನ್ನ ಬರ್ತ್‌ಡೇ ಮೈ ಲವ್‌, ಹೀಗಾಗಿ ನಿಸ್ಸಂಶಯವಾಗಿ, ನಾನು ಈ ಪೋಸ್ಟ್‌ನಲ್ಲಿ ನಿಮ್ಮ ಅತ್ಯುನ್ನತ ಆ್ಯಂಗಲ್‌ಗಳನ್ನ ಹೊಂದಿರುವ ಫೋಟೋಗಳನ್ನು ಆಯ್ಕೆ ಮಾಡಿದ್ದೇನೆ. ಪ್ರತಿ ರೂಪ ಮತ್ತು ರೀತಿಯಲ್ಲಿ ನಿನ್ನನ್ನು ಪ್ರೀತಿಸುತ್ತೇನೆ'' ಎಂದು ಅನುಷ್ಕಾ ಶರ್ಮಾ ಪೋಸ್ಟ್‌ ಮಾಡಿದ್ದಾರೆ.

ವಿರಾಟ್ ಕೊಹ್ಲಿಗೆ ಒಂದು ದಿನ ಮೊದಲೇ ಶುಭ ಕೋರಿದ ಮ್ಯಾಕ್ಸ್‌ವೆಲ್

ವಿರಾಟ್ ಕೊಹ್ಲಿಗೆ ಒಂದು ದಿನ ಮೊದಲೇ ಶುಭ ಕೋರಿದ ಮ್ಯಾಕ್ಸ್‌ವೆಲ್

ವಿರಾಟ್ ಕೊಹ್ಲಿ ಗೆ ಒಂದು ದಿನ ಮುನ್ನವೇ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ವಿರಾಟ್ ಕೊಹ್ಲಿಗೆ ಶುಭಹಾರೈಸಿದ್ದಾರೆ. ಅಡಿಲೇಡ್ ಓವಲ್‌ನಲ್ಲಿ ಶುಕ್ರವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 4 ರನ್‌ಗಳ ಅಂತರದಿಂದ ರೋಚಕವಾಗಿ ಗೆಲುವು ಸಾಧಿಸಿದ ಬಳಿಕ ಆಸಿಸ್ ಆಲ್‌ರೌಂಡರ್, ಟೀಮ್ ಇಂಡಿಯಾ ಮಾಜಿ ನಾಯಕನಿಗೆ ಶುಭಹಾರೈಸಿದ್ದಾರೆ.

ಟಿವಿಯಲ್ಲಿ ನೇರಪ್ರಸಾರದ ವೇಳೆಯಲ್ಲಿ ಮಾತನಾಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ''ಯೆಸ್, ನಾಳೆ, ನನ್ನ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿಗೆ ಬರ್ತ್‌ಡೇ ಶುಭಾಶಯ ತಿಳಿಸಬೇಕಿದೆ. ನೀವು ಒಳ್ಳೆಯ ದಿನವನ್ನು ಕಳೆಯುತ್ತೀರಾ ಎಂದು ನಂಬಿದ್ದೇನೆ. ನಾನು ನಿನಗೆ ಸಂದೇಶವನ್ನು ಹೇಗಿದ್ದರೂ ಕಳುಹಿಸುತ್ತೇನೆ. ಎಂಜಾಯ್ ಮೇಟ್'' ಎಂದು ಮ್ಯಾಕ್ಸ್‌ವೆಲ್ ಶುಭ ಕೋರಿದ್ದಾರೆ.

ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಸಂಭ್ರಮ ಆಚರಿಸಿ, ಶುಭಾಶಯ ತಿಳಿಸಿದ ಟೀಂ ಇಂಡಿಯಾ ಆಟಗಾರರು

ಕೊಹ್ಲಿಗೆ ಶುಭಾಶಯ ತಿಳಿಸಿದ ಪಾಕ್ ಕ್ರಿಕೆಟಿಗ

ಕೊಹ್ಲಿಗೆ ಶುಭಾಶಯ ತಿಳಿಸಿದ ಪಾಕ್ ಕ್ರಿಕೆಟಿಗ

ಅನುಷ್ಕಾ ಶರ್ಮಾ, ಗ್ಲೆನ್ ಮ್ಯಾಕ್ಸ್‌ವೆಲ್ ಅಷ್ಟೇ ಅಲ್ಲದೆ ಶಿಖರ್ ಧವನ್, ಸುರೇಶ್‌ ರೈನಾ ಸೇರಿದಂತೆ ಅನೇಕ ತಾರೆಯರು ಶುಭ ಹಾರೈಸಿದ್ದಾರೆ. ಮ್ಯಾಕ್ಸಿ ರೀತಿಯಲ್ಲಿ ಪಾಕಿಸ್ತಾನ ವೇಗದ ಬೌಲರ್ ಶಹನಾವಾಜ್ ದಹಾನಿ ಕೂಡ ಒಂದು ದಿನ ಮೊಲದೇ ವಿರಾಟ್ ಕೊಹ್ಲಿಗೆ ಶುಭ ಕೋರಿದ್ದಾರೆ.

'' 5ನೇ ನವೆಂಬರ್‌ಗಾಗಿ ಕಾಯಲು ಕಾತುರನಾಗಿದ್ದು, ಕ್ರಿಕೆಟ್‌ ಅನ್ನು ಅತಿ ಸುಂದರವಾಗಿಸಿದ ಕಲಾಕಾರನಿಗೆ ಹುಟ್ಟು ಹಬ್ಬದ ಶುಭಾಶಯಗಳುimkohli ದಿ #GOAT. ನಿಮ್ಮ ಹುಟ್ಟುಹಬ್ಬವನ್ನು ಎಂಜಾಯ್ ಮಾಡು ಸಹೋದರ ಮತ್ತು ವಿಶ್ವಕ್ಕೆ ಮನರಂಜನೆ ನೀಡುವುದನ್ನು ಮುಂದುವರಿಸು'' ಎಂದು ದಹಾನಿ ತನ್ನ ಅಧಿಕೃತ ಟ್ಟಿಟ್ಟರ್ ಅಕೌಂಟ್‌ನಲ್ಲಿ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ತಂಡವು ಭಾನುವಾರ ಮೆಲ್ಬರ್ನ್‌ನಲ್ಲಿ ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದ್ದು, ಸೆಮಿಫೈನಲ್‌ ಖಚಿತಪಡಿಸಲು ಭಾರತವು ಈ ಪಂದ್ಯವನ್ನು ಗೆಲ್ಲಲೇಬೇಕೆಂದು ಪಣತೊಟ್ಟಿದೆ.

Story first published: Saturday, November 5, 2022, 13:55 [IST]
Other articles published on Nov 5, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+