''ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಕೊಹ್ಲಿ ಭಾಗವಹಿಸೋದಿಲ್ವಾ?": ಇಂದು ವಿರಾಟ್ ಸುದ್ದಿಗೋಷ್ಠಿ

ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸಕ್ಕೂ ಮುನ್ನ ಇಂದು ಟೀಮ್ ಇಂಡಿಯಾ ಪರ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ಕೋಚ್ ರಾಹುಲ್ ದ್ರಾವಿಡ್ ಕೂಡ ಭಾಗಿಯಾಗಲಿದ್ದಾರೆ.
ವಿರಾಟ್ ಕೊಹ್ಲಿ ಏಕದಿನ ಸರಣಿಯಲ್ಲಿ ಭಾಗಿ ಆಗುತ್ತಾರೋ ಅಥವಾ ಇಲ್ಲವೋ, ರೋಹಿತ್ ನಡುವೆ ಯಾವುದೇ ಸಮಸ್ಯೆಯಿಲ್ಲವೇ ಎಂಬ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆಗೆ ಖುದ್ದು ವಿರಾಟ್ ಉತ್ತರ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ವಿರಾಟ್ ಕೊಹ್ಲಿ ಮುಂಬರುವ ದಕ್ಷಿಣ ಸರಣಿಯಲ್ಲಿ ಭಾಗಿಯಾಗುತ್ತಿಲ್ಲ, ಟೆಸ್ಟ್ ಸರಣಿ ಮುಗಿಸಿ ಕುಟುಂಬದೊಂದಿಗೆ ರಜಾ ದಿನಗಳನ್ನು ಕಳೆಯಲಿದ್ದಾರೆ ಎಂಬ ಸುದ್ದಿಗಳು ಹೊರಬಿದ್ದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ವಿವಾದದ ಕಿಡಿ ಭುಗಿಲೆದ್ದಿತು. ಕ್ರಿಕೆಟ್ ಅಭಿಮಾನಿಗಳು, ಕ್ರಿಕೆಟ್ ಪಂಡಿತರು, ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದ ಆಚೆ ಹೋಗುವ ಕುರಿತು ಸಾಕಷ್ಟು ಪ್ರಶ್ನೆಗಳನ್ನೇ ಸೃಷ್ಟಿಸಿದರು.

ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ!
ಡಿಸೆಂಬರ್ 26ರಿಂದ ಪ್ರಾರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಹಿನ್ನಲೆಯಲ್ಲಿ ಭಾರತವು ಇದೇ ತಿಂಗಳು ಡಿ. 16ರಂದೇ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿತ್ತು. ಆದ್ರೆ ರೋಹಿತ್ ಶರ್ಮಾ ಅಭ್ಯಾಸದ ವೇಳೆ ಗಾಯಗೊಂಡಿದ್ದು, ಇಡೀ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ.
ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕನಾಗಿರುವ ರೋಹಿತ್ ಶರ್ಮಾ ಅಲಭ್ಯತೆಯಿಂದಾಗಿ ಅವರ ಜಾಗದಲ್ಲಿ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಎ ತಂಡವನ್ನು ಮುನ್ನಡೆಸಿದ್ದ ಪ್ರಿಯಾಂಕ್ ಪಾಂಚಾಲ್ ಅವರು ಸ್ಥಾನ ಪಡೆದಿದ್ದಾರೆ. ಆದ್ರೆ ಉಪನಾಯಕ ಯಾರು ಎಂಬ ಬಗ್ಗೆ ತಕ್ಷಣವೇ ನಿರ್ಧಾರವಾಗಿಲ್ಲ. ಇದ್ರ ಜೊತೆಗೆ ರೋಹಿತ್ ಶರ್ಮಾ ನಂತರದ ಏಕದಿನ ಸರಣಿಯಲ್ಲೂ ಭಾಗಿಯಾಗ್ತಾರ ಅಥವಾ ಇಲ್ಲವೇ ಎಂಬ ಯಾವುದೇ ಸ್ಪಷ್ಟತೆ ಇಲ್ಲ.

ನಾಯಕತ್ವ ಬದಲಾದಾಗಿನಿಂದ ವಿವಾದ ಕಿಡಿ ಹೊತ್ತಿದೆ
ಭಾರತೀಯ ಕ್ರಿಕೆಟ್‌ನಲ್ಲಿ ODI ನಾಯಕತ್ವ ಬದಲಾದ ನಂತರ, ಕೊಹ್ಲಿ ಮತ್ತು ರೋಹಿತ್ ಇಬ್ಬರೂ ವಿವಾದದ ಕಿಡಿ ಹೊತ್ತಿಸಿದ್ದಾರೆ. ಬಿಸಿಸಿಐ ತಂದಿರುವ ನಾಯಕತ್ವದಲ್ಲಿ ನಾಟಕೀಯ ಬದಲಾವಣೆಯು ಭಾರತೀಯ ಕ್ರಿಕೆಟ್‌ನಲ್ಲಿನ ಪ್ರಸ್ತುತ ಸ್ಥಿತಿಯನ್ನು ಸ್ವಲ್ಪ ಸಂಕೀರ್ಣಗೊಳಿಸಿದೆ. ಮಂಗಳವಾರ, ಹಲವಾರು ವರದಿಗಳು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಳ್ಳಲು ಕೊಹ್ಲಿ ಬಯಸಿದ್ದರು ಎಂದು ಸೂಚಿಸಿವೆ. ಬಿಸಿಸಿಐ ಖಜಾಂಜಿ ಅರುಣ್ ಧುಮಾಲ್ ಕೂಡ ಇದನ್ನ ಖಚಿತ ಪಡಿಸಿದ್ದಾರೆ.
ಆಶಸ್ ಟೆಸ್ಟ್: ಎರಡನೇ ಪಂದ್ಯದಲ್ಲಿ ವಿಶೇಷ ಮೈಲಿಗಲ್ಲಿನ ಮೇಲೆ ಕಣ್ಣಿಟ್ಟ ಮೂವರು ಆಸಿಸ್ ಆಟಗಾರರು

ವಿರಾಟ್ ಕೊಹ್ಲಿ - ರೋಹಿತ್ ನಡುವೆ ವೈಮನಸ್ಸು ಶುರುವಾಗಿದ್ಯಾ?
ಕ್ರಿಕೆಟ್ ಪಂಡಿತರ ಲೆಕ್ಕಾಚಾರದ ಪ್ರಕಾರ, ಟೀಂ ಇಂಡಿಯಾ ಲಿಮಿಟೆಡ್ ಓವರ್‌ನ ಹೊಸ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ವೈಮನಸ್ಸು ಶುರುವಾದಂತಿದ್ದು, ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ಮೊದಲಿನಂತಿಲ್ಲ ಎನ್ನಲಾಗಿದೆ. ರೋಹಿತ್ ಶರ್ಮಾರನ್ನ ಹೊಸ ಏಕದಿನ ಕ್ರಿಕೆಟ್ ಫಾರ್ಮೆಟ್ ನಾಯಕನಾಗಿ ಬಿಸಿಸಿಐ ಘೋಷಿಸಿದ ಬಳಿಕ ಇವರಿಬ್ಬರ ನಡುವಿನ ಸಂಬಂಧ ಮತ್ತಷ್ಟು ಹಳಸಿರಬಹುದು ಎಂದು ಅಂದಾಜಿಸಲಾಗಿದೆ.
ಈಗಾಗಲೇ ರೋಹಿತ್ ಶರ್ಮಾ ಗಾಯಗೊಂಡಿರುವುದು, ಟೆಸ್ಟ್ ಸರಣಿಯಷ್ಟೇ ಅಲ್ಲದೆ ಏಕದಿನ ಸರಣಿ ವೇಳೆಗೆ ಚೇತರಿಸಿಕೊಳ್ಳುತ್ತಾರ ಎಂಬ ಯಾವುದೇ ಸುಳಿವು ಇಲ್ಲ. ಹೀಗಾಗಿ ಕೊಹ್ಲಿಯೇನಾದ್ರೂ ಏಕದಿನ ಸರಣಿಯಿಂದ ಹೊರಗುಳಿದಿದ್ದೇ ಆದಲ್ಲಿ ಭಾರತ ತಂಡವನ್ನ ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಳ್ಳಲಿದೆ.

ಕೊಹ್ಲಿ ಸ್ವತಃ ಸುದ್ದಿಗೋಷ್ಠಿ ನಡೆಸಿದ್ದಾರೆ
ಕೊಹ್ಲಿ ಸ್ವತಃ ಬುಧವಾರ ಮಧ್ಯಾಹ್ನ 1:00 ಗಂಟೆಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂಬುದು ಸದ್ಯಕ್ಕೆ ಟೀಂ ಇಂಡಿಯಾ ಅಭಿಮಾನಿಗಳಿಗೆ ಸಮಾಧಾನಕರ ಸಂಗತಿಯಾಗಿದೆ. ಭಾರತ ತಂಡವು ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳುವ ಮೊದಲು ಬಿಸಿಸಿಐ ಸಾಂಪ್ರದಾಯಿಕ ಪತ್ರಿಕಾಗೋಷ್ಠಿಯನ್ನು ನಿಗದಿಪಡಿಸಿದೆ. ನಾಯಕ ಸ್ವತಃ ಮಾಧ್ಯಮಗಳೊಂದಿಗೆ ಮಾತನಾಡಲಿದ್ದಾರೆ, ಅಲ್ಲಿ ಏಕದಿನ ಕ್ರಿಕೆಟ್ ಕುರಿತಾಗಿಯೂ, ಭಾಗವಹಿಸುವ ಕುರಿತಾಗಿ ಪ್ರಶ್ನೆಗಳನ್ನು ಸಹ ಕೇಳಲಾಗುವುದು. ಜೊತೆಗೆ ಏಕದಿನ ನಾಯಕತ್ವವನ್ನ ರೋಹಿತ್‌ಗೆ ಹಸ್ತಾಂತರಿಸುವ ಮಂಡಳಿಯ ನಿರ್ಧಾರವನ್ನು ತಿಳಿಸಲಾಗುವುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications