ವಿರಾಟ್ ಕೊಹ್ಲಿ 100 ಅಲ್ಲ, 110 ಶತಕ ಸಿಡಿಸುತ್ತಾರೆ: ಶೋಯೆಬ್ ಅಖ್ತರ್

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸುವ ಮೂಲಕ ಟೆಸ್ಟ್ ಮಾದರಿಯಲ್ಲಿಯೂ ಫಾರ್ಮ್‌ಗೆ ಮರಳಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 75ನೇ ಶತಕ ಸಿಡಿಸಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ 100 ಶತಕಗಳ ಸಾಧ್ಯತೆ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ಈ ವಿಚಾರವಾಗಿ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಶತಕಗಳ ಶತಕದ ವಿಶ್ವ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ನೂರು ಶತಕ ಮಾತ್ರವಲ್ಲ, ಒಟ್ಟಾರೆಯಾಗಿ ಅವರು ನೂರ ಹತ್ತು ಶತಕ ಸಿಡಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

110 ಶತಕ ಸಿಡಿಸಲಿದ್ದಾರೆ ಕೊಹ್ಲಿ
"ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ್ದಾರೆ. ಹಾಗಾಗಿ ಈಗ ಯಾವುದೂ ಹೊಸತು ಎನಿಸುವುದಿಲ್ಲ. ನಾಯಕತ್ವದ ಹಿರೆ ಕೂಡ ಈಗ ಅವರ ಮೇಲಿಲ್ಲ. ಮಾಬನಸಿಕವಾಗಿ ಈಗ ಅವರು ನಿರಾಳವಾಗಿದ್ದಾರೆ. ಈಗ ಅವರು ಸಾಕಷ್ಟು ಏಕಾಗ್ರತೆಯಿಂದ ಆಡಬಹುದು. ವಿರಾಟ್ ಕೊಹ್ಲಿಯ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದ್ದು ಅವರು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ 100 ಶತಕಗಳ ದಾಖಲೆಯನ್ನು ಮುರಿಯಲಿದ್ದು 110 ಶತಕವನ್ನು ಸಿಡಿಸಲಿದ್ದಾರೆ" ಎಂದಿದ್ದಾರೆ ಶೋಯೆಬ್ ಅಖ್ತರ್.

ವೈಟ್‌ಬಾಲ್ ಬಳಿಕ ಟೆಸ್ಟ್‌ನಲ್ಲೂ ಫಾರ್ಮ್‌ಗೆ ಮರಳಿದ ಕೊಹ್ಲಿ
ವಿರಾಟ್ ಕೊಹ್ಲಿ ವೈಟ್‌ಬಾಲ್ ಮಾದರಿಯಲ್ಲಿ ಕಳೆದ ವರ್ಷ ಫಾರ್ಮ್ ಕಂಡುಕೊಂಡಿದ್ದರು ಕೂಡ ಟೆಸ್ಟ್ ಮಾದರಿಯಲ್ಲಿ ರನ್ ಬರ ಮುಂದುವರಿಸಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಸಿಡಿಸಿದ್ದಾರೆ. ಈ ಮೂಲಕ 2019ರ ನವೆಂಬರ್ ಬಳಿಕ ಟೆಸ್ಟ್ ಮಾದರಿಯಲ್ಲಿ ಮೊದಲ ಶತಕವನ್ನು ಸಿಡಿಸಿದಂತಾಗಿದೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಆಡುತ್ತಿರುವ ಅಖ್ತರ್
ಇನ್ನು ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಪ್ರಸ್ತುತ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಭಾಗಿಯಾಗಿದ್ದಾರೆ. ಏಷ್ಯಾ ಲಯನ್ಸ್ ತಂಡದ ಪರವಾಗಿ ಶೋಯೆಬ್ ಅಖ್ತರ್ ಕಣಕ್ಕಿಳಿಯುತ್ತಿದ್ದು ನಿವೃತ್ತಿಯ ಬಳಿಕವೂ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದಾರೆ. ಕತಾರ್‌ನ ದೋಹಾದಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಆಯೋಜನೆಯಾಗುತ್ತಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತವಾಗಿರುವ ದಿಗ್ಗಜ ಆಟಗಾರರು ಈ ಟೂರ್ನಿಯಲ್ಲಿ ಭಾಗಿಯಾಗಿದ್ದಾರೆ.

ಮೂರು ತಂಡಗಳ ಸೆಣೆಸಾಟ
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮೂರು ತಂಡಗಳು ಸೆಣೆಸಾಡುತ್ತಿದ್ದು ವಿಶ್ವ ಕ್ರಿಕೆಟ್‌ನಿಂದ ನಿವೃತ್ತರಾದ ಸ್ಟಾರ್ ಕ್ರಿಕೆಟಿಗರರು ಈ ಟೂರ್ನಿಯ ಮೂಲಕಕ ಮತ್ತೊಮ್ಮೆ ಕಣಕ್ಕಿಳಿಯುತ್ತಿದ್ದಾರೆ. ಇಂಡಿಯಾ ಮಹಾರಾಜಾಸ್ ತಂಡದಲ್ಲಿ ಭಾರತದ ಮಾಜಿ ಆಟಗಾರರು ಕಣಕ್ಕಿಳಿಯುತ್ತಿದ್ದು ಏಷ್ಯಾ ಲಯನ್ಸ್ ತಂಡದಲ್ಲಿ ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾದ ಮಾಜಿ ಆಟಗಾರರು ಕಣಕ್ಕಿಳಿಯುತ್ತಿದ್ದಾರೆ. ವರ್ಲ್ಡ್ ಜೈಂಟ್ಸ್ ಈ ಟೂರ್ನಿಯಲ್ಲಿ ಭಾಗಿಯಾಗಿರುವ ಮತ್ತೊಂದು ತಂಡವಾಗಿದ್ದು ಇತರ ರಾಷ್ಟ್ರಗಳ ದಿಗ್ಗಜರು ಭಾಗಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications