ಬೇರೆ ತಂಡವಾಗಿದ್ರೆ, ನನ್ನನ್ನು ತಂಡದಿಂದ ಕೈ ಬಿಡುತ್ತಿದ್ರು, ಕೊಹ್ಲಿ ನಂಬಿಕೆ ಇಟ್ಟು ರೀಟೈನ್ ಮಾಡಿದ್ರು: ಮೊಹಮ್ಮದ್ ಸಿರಾಜ್

ಭಾರತದ ಪೇಸರ್ ಮೊಹಮ್ಮದ್ ಸಿರಾಜ್ 2018ರ ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಎದುರಿಸದ ಸವಾಲುಗಳ ಕುರಿತು ಮೆಲುಕು ಹಾಕಿದ್ದಾರೆ. ಬೇರೆ ಯಾವುದೇ ತಂಡವಾಗಿದ್ರೂ ನನ್ನ ಪ್ರದರ್ಶನ ನೋಡಿ ತಂಡದಿಂದ ಕೈ ಬಿಡುತ್ತಿದ್ರು, ಆದ್ರೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ನನ್ನ ಮೇಲೆ ನಂಬಿಕೆಯಿಟ್ಟು, ಕಂಬ್ಯಾಕ್ ಮಾಡಲು ನೆರವಾದ್ರು ಎಂದಿದ್ದಾರೆ.
2019ರ ಐಪಿಎಲ್ ಸೀಸನ್‌ನಲ್ಲಿ ಸಿರಾಜ್ 11 ಪಂದ್ಯಗಳನ್ನಾಡಿದ್ದು ಕೆಲವು ವಿಕೆಟ್‌ಗಳನ್ನ ಕಬಳಿಸಿದ್ರು. ಇವರ ಎಕಾನಮಿ 8.95ರಷ್ಟಿತ್ತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಹೈದ್ರಾಬಾದ್ ಮೂಲದ ಪೇಸರ್ ನಾಲ್ಕು ಓವರ್‌ಗಳಲ್ಲಿ ಯಾವುದೇ ವಿಕೆಟ್ ಪಡೆಯದೇ 48 ರನ್ ನೀಡಿದ್ದರು. ಈ ಇನ್ನಿಂಗ್ಸ್ ಬಳಿಕ ಸಿರಾಜ್ ಭಾರೀ ಟೀಕೆಗೆ ಒಳಗಾಗಿದ್ರು.

ಧೋನಿ ಹೊಡೆತಕ್ಕೆ ನಡುಗಿದ್ದ ಸಿರಾಜ್
ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್, ಧೋನಿ ಹೊಡೆತಕ್ಕೆ ಬೆಚ್ಚಿ ಬಿದ್ದಿದ್ರಂತೆ. ಆರ್‌ಸಿಬಿ ನೀಡಿದ್ದ 205ರನ್‌ಗಳ ಟಾರ್ಗೆಟ್ ಬೆನ್ನತ್ತಿದ್ದ ಸಿಎಸ್‌ಕೆ ಪರ ಧೋನಿ ಅಬ್ಬರದ ಬ್ಯಾಟಿಂಗ್ ನಡೆಸಿದ ತಂಡವನ್ನ ಗೆಲುವಿನ ದಡ ತಲುಪಿಸಿದ್ರು. ಅದ್ರಲ್ಲೂ ಓವರ್‌ವೊಂದ್ರಲ್ಲಿ 14ರನ್‌ಗಳು ಸಿಎಸ್‌ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

2020ರಲ್ಲಿ ಉತ್ತಮ ಕಂಬ್ಯಾಕ್ ಮಾಡಿದ ಪೇಸರ್
2019ರ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡದಿದ್ರೂ ಆರ್‌ಸಿಬಿ ಸಿರಾಜ್‌ನನ್ನ ಉಳಿಸಿಕೊಂಡಿತು. ಐಪಿಎಲ್ 2020ರ ಸೀಸನ್‌ನಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ ಎಂ. ಸಿರಾಜ್ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗೆ 2 ಮೇಡನ್ ಸೇರಿದಂತೆ ಎಂಟು ರನ್ ನೀಡಿ 3 ವಿಕೆಟ್ ಕಬಳಿಸಿದ್ರು. ಕಳೆದ ಎರಡು ಸೀಸನ್‌ಗಳಲ್ಲಿ ಸಿರಾಜ್ 11 ವಿಕೆಟ್ ಪಡೆದಿದ್ದು, ಸ್ಲಾಗ್ ಓವರ್‌ಗಳಲ್ಲಿ ತಂಡಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ.
IPL 2022: ಸೀಸನ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿರುವ ಪ್ಲೇಯರ್ಸ್

ಸಂಪೂರ್ಣ ಕ್ರೆಡಿಟ್ ವಿರಾಟ್ ಕೊಹ್ಲಿಗೆ ನೀಡುತ್ತೇನೆ: ಸಿರಾಜ್
2020ರ ಐಪಿಎಲ್ ಸೀಸನ್‌ನಲ್ಲಿ ನಾನು ಕಂಬ್ಯಾಕ್ ಮಾಡಿದ ಪ್ರದರ್ಶನದ ಸಂಪೂರ್ಣ ಕ್ರೆಡಿಟ್ ಅನ್ನು ವಿರಾಟ್ ಕೊಹ್ಲಿಗೆ ನೀಡುವುದಾಗಿ ವೇಗಿ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ. ಕೊಹ್ಲಿ ತುಂಬಿದ ಆತ್ಮವಿಶ್ವಾ ಸದಿಂದಲೇ ನಾನು ಇಲ್ಲಿಗೆ ಬಂದು ತಲುಪಿದ್ದೇನೆ ಎಂದಿದ್ದಾರೆ.
2022ರ ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿ ಫ್ರಾಂಚೈಸಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಗೆ ಮೊಹಮ್ಮದ್ ಸಿರಾಜ್‌ರನ್ನ ರೀಟೈನ್ ಮಾಡಿಕೊಂಡಿತು.
"2018 ರಲ್ಲಿ ನಾನು ಆರ್‌ಸಿಬಿ ಪರ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದೆನು. ಆದ್ರೆ ಅದೇ ಬೇರೆ ಯಾವುದೇ ಫ್ರಾಂಚೈಸಿ ಆಗಿದ್ದರೆ, ನಾನು ಬಹುಶಃ ಬಿಡುಗಡೆಯಾಗುತ್ತಿದ್ದೆ. ಬೇರೆ ಯಾವುದೇ ತಂಡ ನನ್ನನ್ನು ಕೈಬಿಡುತ್ತಿತ್ತು ಆದರೆ ವಿರಾಟ್ ಬೆಂಬಲ ತೋರಿಸಿ ನನ್ನನ್ನು ಉಳಿಸಿಕೊಂಡರು. ಸಂಪೂರ್ಣ ಕ್ರೆಡಿಟ್ ವಿರಾಟ್ ಭಾಯ್ ಅವರಿಗೆ ಸಲ್ಲುತ್ತದೆ. ನಾನು ಇಂದು ಏನಾಗಿದ್ದರೂ - ನನ್ನ ಬೌಲಿಂಗ್ ಮತ್ತು ಎಲ್ಲದರ ಮೇಲಿನ ಆತ್ಮವಿಶ್ವಾಸ , ವಿರಾಟ್ ಇಲ್ಲದೆ ಅದು ಸಾಧ್ಯವಾಗುತ್ತಿರಲಿಲ್ಲ, "ಎಂದು ಸಿರಾಜ್ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.
ಆರ್‌ಸಿಬಿ 2022ರ ಐಪಿಎಲ್ ಸೀಸನ್ ಅಭಿಯಾನವನ್ನ ಪಂಜಾಬ್ ಕಿಂಗ್ಸ್ ವಿರುದ್ಧ ಪ್ರಾರಂಭಿಸಲಿದ್ದು, ಮಾರ್ಚ್ 27ರಂದು ಡಾ. ಡಿ. ವೈ ಪಾಟೀಲ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications