ಇಂದು ಮುಂಬೈ ಇಂಡಿಯನ್ಸ್ ವಿರುದ್ಧ 'ಹಿರಿಯ ನಾಗರಿಕರ ಕ್ಲಬ್' ಆಡಲಿದೆ: ವೀರೇಂದ್ರ ಸೆಹ್ವಾಗ್ ಟ್ರೋಲ್

ಕ್ರಿಕೆಟ್ ನಿವೃತ್ತಿಯ ಬಳಿಕ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಟ್ವಿಟ್ಟರ್‌ನಲ್ಲಿ ತಮ್ಮದೇ ಶೈಲಿಗಳಲ್ಲಿ ಟೀಕೆ ಅಥವಾ ಹೊಗಳಿಕೆ ಮಾತುಗಳನ್ನಾಡುವ ವೀರೂ ಐಪಿಎಲ್ 13ನೇ ಆವೃತ್ತಿ ಶುರುವಾದ ತಮ್ಮದೇ ಆದ ಹೊಸ ಕಾರ್ಯಕ್ರಮ ನಡೆಸುತ್ತಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ 'ವಿರು ಕಿ ಬೈಥಕ್' ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಐಪಿಎಲ್‌ನಲ್ಲಿ ಆಡುವ ಆಟಗಾರರನ್ನು ತಮ್ಮದೇ ಶೈಲಿಯಲ್ಲಿ ಹೊಗಳುವುದು, ತೆಗಳುವುದು ಇದೆ. ಇದರ ಜೊತೆಗೆ ಆಟಗಾರರಿಗೆ ಅಡ್ಡ ಹೆಸರನ್ನು ಸಹ ಇಟ್ಟಿದ್ದಾರೆ.
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿವೆ. ಈ ಪಂದ್ಯದ ಕುರಿತು ಮಾತನಾಡಿರುವ ವೀರೂ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಯನ್ನು ಟ್ರೋಲ್ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ 'ಹಿರಿಯ ನಾಗರಿಕರ ಕ್ಲಬ್' ಆಡುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ತಾನು ಆಡಿರುವ 10 ರಲ್ಲಿ ಏಳು ಪಂದ್ಯಗಳನ್ನು ಕಳೆದುಕೊಂಡಿರುವುದರಿಂದ ಸಿಎಸ್‌ಕೆ ಪ್ಲೇಆಫ್‌ಗಳ ಸ್ಪರ್ಧೆಯಿಂದ ಹೊರಗುಳಿದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪಂದ್ಯಗಳನ್ನು ಸತತವಾಗಿ ಗೆಲ್ಲುವ ಉದ್ದೇಶವನ್ನು ಅವರ ಆಟಗಾರರು ತೋರಿಸದ ಕಾರಣ, ಅವರು ಆಡಿದ ರೀತಿ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಸಿಎಸ್‌ಕೆ ನಾಯಕ ಎಂ.ಎಸ್. ಧೋನಿ ಈಗಾಗಲೇ ಹಿಂದಿನ ಪಂದ್ಯದ ಸೋಲಿನ ನಂತರ ಇದು ತಮ್ಮ ವರ್ಷವಲ್ಲ ಎಂದು ಒಪ್ಪಿಕೊಂಡರು.
ಶುಕ್ರವಾರ ಮುಂಬೈ ವಿರುದ್ಧದ ಪಂದ್ಯವು ಮೂರು ಬಾರಿಯ ಚಾಂಪಿಯನ್‌ಗಳಿಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಸೃಷ್ಟಿಸಿದ್ದು, ಪ್ಲೇಆಫ್‌ನಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಸ್ವಲ್ಪ ಹೊಂದಲು ಅವರು ತಮ್ಮ ಉಳಿದ ನಾಲ್ಕು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಆದರೆ, ಈ ಸಮಯದಲ್ಲಿ ಇನ್-ಫಾರ್ಮ್ ಮುಂಬೈ ತಂಡವನ್ನು ಸೋಲಿಸುವುದು ಕಠಿಣ ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ಅದೇ ಸಮಯದಲ್ಲಿ, ಅವರು ಮೆನ್ ಇನ್ ಯೆಲ್ಲೊವನ್ನು ಹಿರಿಯ ನಾಗರಿಕರ ಕ್ಲಬ್ ಎಂದು ಟ್ರೋಲ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications