2007ರಲ್ಲಿ ನಿವೃತ್ತಿ ಹೊಂದಬೇಕಿದ್ದ ಸಚಿನ್ ಅವರನ್ನು ತಡೆದದ್ದು ಯಾರು ಗೊತ್ತಾ?

ಲಂಡನ್, ಜೂನ್ 03: ಭಾರತ ಕ್ರಿಕೆಟ್‌ನ ದಂತಕತೆ ಮಾಸ್ಟರ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, 2007ರ ವಿಶ್ವಕಪ್ ಟೂರ್ನಿಯಲ್ಲಿನ ಹೀನಾಯ ಪ್ರದರ್ಶನದ ಬಳಿಕ ನಿವೃತ್ತಿ ಹೊಂದುವ ನಿರ್ಧಾರ ಮಾಡಿದ್ದರಂತೆ,. ಇದನ್ನು ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗೆ ಹೇಳಿಕೊಂಡಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು
ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ 2007ರ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದ ಭಾರತ ತಂಡ ಲೀಗ್ ಹಂತದಲ್ಲೇ ಸೋತು ಸ್ಪರ್ಧೆಯಿಂದ ನಿರ್ಗಮಿಸಿತ್ತು. ಅದರಲ್ಲೂ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಎದುರು ಅಚ್ಚರಿಯ ಸೋಲುಂಡು ಮಾಜಿ ಕ್ರಿಕೆಟಿಗರ ಮತ್ತು ಅಭಿಮಾನಿಗಳ ಕೆಂಗಣ್ಣಿಗೆ ಟೀಮ್ ಇಂಡಿಯಾ ಗುರಿಯಾಗಿತ್ತು. ಸಚಿನ್ ತೆಂಡೂಲ್ಕರ್ ಅವರಿಗೂ ಈ ವಿಶ್ವಕಪ್ ಅಷ್ಟು ಸ್ಮರಣೀಯವಾದುದ್ದಲ್ಲ. ಏಕೆಂದರೆ ಆಡಿದ ಮೂರು ಪಂದ್ಯಗಳಿಂದ ಕೇವಲ 64 ರನ್‌ಗಳನ್ನು ಮಾತ್ರವೇ ಗಳಿಸಿದ್ದರು.
ಈ ಸಂದರ್ಭದಲ್ಲಿ ಕ್ರಿಕೆಟ್‌ಗೆ ಗುಡ್‌ಬೈ ಹೇಳಲು ಸಚಿನ್ ನಿರ್ಧಾರ ಮಾಡಿದ್ದರಂತೆ. ಆದರೆ, ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಹಾಗೂ ಎರಡು ಬಾರಿ ವಿಶ್ವಕಪ್ ಗೆದ್ದಿರುವ ನಾಯಕ ವಿವಿಯನ್ ರಿಚರ್ಡ್ಸ್ ಅವರೊಟ್ಟಿಗೆ ಫೋನ್ ಮೂಲಕ 45 ನಿಮಿಷಗಳ ಕಾಲ ನಡೆಸಿದ ಸಂಭಾಷಣೆ ನಂತರ ಸಚಿನ್ ನಿವೃತ್ತಿ ವಿಚಾರದಲ್ಲಿನ ತಮ್ಮ ನಿಲುವು ಬದಲಾಯಿಸಿದ್ದಾಗಿ ಹೇಳಿದ್ದಾರೆ.
ಸಚಿನ್ ಅಂದು ನಿವೃತ್ತಿ ಹೊಂದಿದ್ದರೆ, ವಿಶ್ವಕಪ್ ಗೆಲ್ಲುವ ಅವರ ಕನಸು ಸಾಕಾರವಾಗುತ್ತಿರಲಿಲ್ಲ. 2011ರಲ್ಲಿ ಸಚಿನ್ ತಮ್ಮ ವೃತ್ತಿ ಬದುಕಿನ ಕೊನೆಯ ವಿಶ್ವಕಪ್ ಆಡಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ (482) ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಳ್ಳುವ ಮೂಲಕ ಟ್ರೋಫಿ ಎತ್ತಿ ಹಿಡಿದಿದ್ದರು.
"ಇದೇ ಕೊನೆ ಎಂಬುದರ ಅನುಭವವಾಗಿತ್ತು. ಆ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಹಲವು ನಕಾರಾತ್ಮಕ ಸಂಗತಿಗಳು ನಡೆದಿದ್ದವು. ಹಲವು ಬದಲಾವಣೆಯ ಅಗತ್ಯವಿತ್ತು. ಅಂದು ಅಗತ್ಯದ ಬದಲಾವಣೆಗಳು ಆಗದೇ ಹೋಗಿದ್ದಲ್ಲಿ ಖಂಡಿತಾ ನಿವೃತ್ತಿ ಘೋಷಿಸುತ್ತಿದ್ದೆ. ಶೇ.90 ರಷ್ಟು ನಿವೃತ್ತಿ ಹೊಂದುವ ನಿರ್ಧಾರ ಮಾಡಿದ್ದೆ. ಆಗ ನನ್ನ ಸಹೋದರ 2011ರಲ್ಲಿ ವಿಶ್ವಕಪ್ ಫೈನಲ್ ಪಂದ್ಯವು ಮುಂಬೈನಲ್ಲಿ ನಡೆಯಲಿದೆ. ಅಲ್ಲಿ ಟ್ರೋಫಿ ಎತ್ತಿ ಹಿಡಿಯುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಎಂದು ಹೇಳಿದರು,'' ಎಂದು 46 ವರ್ಷದ ಬ್ಯಾಟಿಂಗ್ ದಂತಕತೆ ತಮ್ಮ ನೆನಪಿನಾಳ ಕೆದಕಿದ್ದಾರೆ.
"ಇದೆಲ್ಲಾ ಆದ ಬಳಿಕ ವಿಶ್ರಾಂತಿಗಾಗಿ ನನ್ನ ಫಾರ್ಮ್‌ಹೌಸ್‌ಗೆ ತೆರಳಿದ್ದಾಗ, ಸರ್ ವಿವಿಯನ್ ರಿಚರ್ಡ್ಸ್ ಅವರ ಕರೆ ಬಂದಿತು. ನಿನಲ್ಲಿ ಇನ್ನೂ ಬಹಳಷ್ಟು ಕ್ರಿಕೆಟ್ ಬಾಕಿ ಇದೆ ಎಂಬುದು ನನಗೆ ತಿಳಿದಿದೆ ಎಂದು ಹೇಳಿದರು. 45 ನಿಮಿಷಗಳ ಕಾಲ ಮಾತನಾಡಿದೆವು. ನನ್ನ ಬ್ಯಾಟಿಂಗ್ ಆರಾದ್ಯದೈವ ಫೋನ್ ಕರೆ ಮೂಲಕ ಸಮಾಧಾನ ಹೇಳುತ್ತಿರುವುದು ಬೆಚ್ಚನೆಯ ಅನುಭವ ನೀಡಿತು. ಅಂದು ನನ್ನಲ್ಲಿ ಹೊಸದೊಂದು ಬದಲಾವಣೆಯಾಗಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡಲಾರಂಭಿಸಿದೆ,'' ಎಂದು ಸಚಿನ್ ವಿವರಿಸಿದ್ದಾರೆ.
ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications