Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

46ಕ್ಕೆ ಕಾಲಿರಿಸಿದ ವಿವಿಎಸ್ ಲಕ್ಷ್ಮಣ್‌ಗೆ ಶುಭಾಶಯಗಳ ಮಹಾಪೂರ

VVS Laxman turns 46, wishes pour in from cricketing fraternity

ನವದೆಹಲಿ: ಭಾರತದ ಮಾಜಿ ಬ್ಯಾಟ್ಸ್‌ಮನ್, ವೆರಿ ವೆರಿ ಸ್ಪೆಷಲ್ ಖ್ಯಾತಿಯ ವಿವಿಎಸ್ ಲಕ್ಷ್ಮಣ್ ನವೆಂಬರ್ 1ಕ್ಕೆ 46ರ ಹರೆಯಕ್ಕೆ ಕಾಲಿರಿಸುತ್ತಿದ್ದಾರೆ. ಅವರಿಗೆ ಕ್ರಿಕೆಟ್ ರಂಗದ ಪ್ರಮುಖರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಕ್ರಿಕೆಟ್ ದಿಗ್ಗಜರೆಲ್ಲ ದಂತಕತೆಗೆ ಶುಭ ಹಾರೈಸಿದ್ದಾರೆ. ಲಕ್ಷ್ಮಣ್ ಸದ್ಯ ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಕ್ಕೆ ಕೋಚ್ ಆಗಿದ್ದಾರೆ.

ಮಾಜಿ ಆಲ್ ರೌಂಡರ್ ಸುರೇಶ್ ರೈನಾ, ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್, ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್ ಸೇರಿದಂತೆ ಅನೇಕರು ಲಕ್ಷ್ಮಣ್ ಗೆ ಶುಭಕೋರಿದ್ದಾರೆ.

ವಿಶೇಷವೆಂದರೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಕೂಡ ವಿವಿಎಸ್ ಲಕ್ಷ್ಮಣ್ ಸಾಧನೆ ಸ್ಮರಿಸಿ ಶುಭಕೋರಿ ಟ್ವೀಟ್ ಮಾಡಿದೆ. '2001ರಲ್ಲಿ ಕೋಲ್ಕತ್ತಾದಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದಿದ್ದರ ಹಿಂದಿದ್ದ ನಾವಿಕ ಈತ. ಆ ಪಂದ್ಯದಲ್ಲಿ ಲಕ್ಷ್ಮಣ್ ವೃತ್ತಿ ಜೀವನದ ಬೆಸ್ಟ್ 281 ರನ್ ಗಳಿಸಿದ್ದರು. ಹುಟ್ಟು ಹಬ್ಬದ ಶುಭಾಶಯಗಳು ಲಕ್ಷ್ಮಣ್' ಎಂದು ಐಸಿಸಿ ಟ್ವೀಟ್‌ನಲ್ಲಿ ಬರೆದುಕೊಂಡಿದೆ.

ಲಕ್ಷ್ಮಣ್ 134 ಟೆಸ್ಟ್ ಪಂದ್ಯಗಳಲ್ಲಿ 45.5ರ ಸರಾಸರಿಯಲ್ಲಿ 8781 ರನ್, 86 ಏಕದಿನ ಪಂದ್ಯಗಳಲ್ಲಿ 2338 ರನ್, 20 ಐಪಿಎಲ್ ಪಂದ್ಯಗಳಲ್ಲಿ 282 ರನ್ ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ 281 ಅತ್ಯಧಿಕ ರನ್ ಬಾರಿಸಿರುವ ಲಕ್ಷ್ಮಣ್, 56 ಅರ್ಧ ಶತಕ, 17 ಶತಕ ಮತ್ತು 2 ದ್ವಿಶತಕಗಳನ್ನು ಬಾರಿಸಿದ್ದಾರೆ.

Story first published: Sunday, November 1, 2020, 14:35 [IST]
Other articles published on Nov 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+