ವಾಷಿಂಗ್ಟನ್ ಸುಂದರ್‌ಗೆ ಕೊರೊನಾ ಪಾಸಿಟಿವ್: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಡೌಟ್

ಟೀಂ ಇಂಡಿಯಾ ಎಡಗೈ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಕೋವಿಡ್-19 ಪಾಸಿಟಿವ್ ಆಗಿದ್ದು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಿಸಿದೆ.
ಜನವರಿ 19 ರಿಂದ ಪ್ರಾರಂಭಗೊಳ್ಳಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 22 ವರ್ಷದ ಸ್ಪಿನ್ನರ್ ಇತರೆ ಆಟಗಾರರೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವುದು ಅನುಮಾನ ಮೂಡಿಸಿದೆ.
ಈಗಾಗಲೇ ಏಕದಿನ ಸರಣಿಯಲ್ಲಿ ಸ್ಥಾನ ಪಡೆದಿರುವ ಇತರೆ ಆಟಗಾರರೊಂದಿಗೆ ಸುಂದರ್ ಮುಂಬೈನಲ್ಲಿ ಬಯೋ ಬಬಲ್‌ನಲ್ಲಿದ್ದರು. ಬುಧವಾರ ಬೆಳಿಗ್ಗೆ ಸುಂದರ್ ಉಳಿದ ಆಟಗಾರರೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿತ್ತು. ಆದ್ರೀಗ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವುದು ಅವರಿಗೆ ಸಾಕಷ್ಟು ನಿರಾಸೆಯನ್ನುಂಟುಮಾಡಿದೆ.

10 ತಿಂಗಳಿನಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗಿರುವ ಸುಂದರ್
ಸುಂದರ್ ಸುಮಾರು 10 ತಿಂಗಳಿನಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ. ಅವರು ಕೊನೆಯದಾಗಿ ಮಾರ್ಚ್ 2021 ರಲ್ಲಿ ಭಾರತಕ್ಕಾಗಿ ಆಡಿದ್ದರು. ಗಾಯಗಳ ಕಾರಣ ತಂಡದಿಂದ ಹೊರಬಿದ್ದ ಬಳಿಕ ಇತ್ತೀಚೆಗೆ ಚೇತರಿಸಿಕೊಂಡರು ಮತ್ತು ವಿಜಯ್ ಹಜಾರೆ ಟ್ರೋಫಿಗಾಗಿ ತಮಿಳುನಾಡು ತಂಡದ ಭಾಗವಾಗಿದ್ದರು. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪರಿಣಾಮ ಇವರನ್ನ ಏಕದಿನ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದ್ರೀಗ ಕೋವಿಡ್ ಸೋಂಕಿನಿಂದಾಗಿ ಅವರ ಅಂತರಾಷ್ಟ್ರೀಯ ರಿಟರ್ನ್ ಅನ್ನು ಮುಂದೂಡಿದೆ.
Ind vs SA: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ, ಕೊಹ್ಲಿ, ಉಮೇಶ್ ಯಾದವ್ ಕಂಬ್ಯಾಕ್ LIVE SCORE

ವಾಷಿಂಗ್ಟನ್ ಬದಲಿ ಆಯ್ಕೆ ಯಾರು?
ಬಿಸಿಸಿಐ ವಾಷಿಂಗ್ಟನ್ ಸುಂದರ್ ಬದಲಿಯನ್ನು ಹೆಸರಿಸುತ್ತದೆಯೇ ಎಂಬ ಬಗ್ಗೆ ತಕ್ಷಣದ ಮಾಹಿತಿಯಿಲ್ಲ. ಆದರೆ 22 ವರ್ಷದ ಆಲ್‌ರೌಂಡರ್ ಪಾಸಿಟಿವ್ ಆಗಿದ್ದಾರೆ ಮತ್ತು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸುವುದಿಲ್ಲ ಎಂದು ಮಂಗಳವಾರ (ಜನವರಿ 11) ಕ್ರಿಕ್‌ಬಜ್‌ಗೆ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
"ಅವರು ಕೆಲವು ದಿನಗಳ ಹಿಂದೆ ಪಾಸಿಟಿವ್ ಪರೀಕ್ಷೆ ನಡೆಸಿದರು ಮತ್ತು ಅವರು ತಂಡದೊಂದಿಗೆ ಪ್ರಯಾಣಿಸುವುದಿಲ್ಲ ಎಂದು ನಿರ್ಧರಿಸಲಾಗಿದೆ." ಎಂದು ಮೂಲಗಳು ತಿಳಿಸಿವೆ.
"ನಾನು ಭಿನ್ನವಾಗಿ ಮುನ್ನಡೆಸುತ್ತಿದ್ದೆ": ಕೆಎಲ್ ರಾಹುಲ್ ನಾಯಕತ್ವದ ಬಗ್ಗೆ ತುಟಿ ಬಿಚ್ಚಿದ ವಿರಾಟ್ ಕೊಹ್ಲಿ

ಈಗಾಗಲೇ ತಂಡದಲ್ಲಿ ಇಬ್ಬರು ಸ್ಪಿನ್ನರ್‌ಗಳಿದ್ದಾರೆ!
ದಕ್ಷಿಣ ಆಫ್ರಿಕಾ ವಿರುದ್ಧ ಆಯ್ಕೆಗೊಂಡಿರುವ ಟೀಂ ಇಂಡಿಯಾ ಏಕದಿನ ತಂಡದಲ್ಲಿ ಈಗಾಗಲೇ ಇಬ್ಬರು ಸ್ಪಿನ್ನರ್‌ಗಳಿದ್ದಾರೆ. ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಮುನ್ನಡೆಯಲಿರುವ ಭಾರತ ತಂಡದಲ್ಲಿ ಆರ್. ಅಶ್ವಿನ್ ಮತ್ತು ಯುಜವೇಂದ್ರ ಚಹಾಲ್ ಸ್ಥಾನ ಪಡೆದಿದ್ದಾರೆ. ಹೀಗಾಗಿ ಸುಂದರ್ ಬದಲು ಮತ್ತೊಬ್ಬ ಆಟಗಾರನ ಆಯ್ಕೆ ಮಾಡುವುದು ಕೊಂಚ ಅನುಮಾನ ಮೂಡಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಏಕದಿನ ತಂಡ:
ಕೆ.ಎಲ್ ರಾಹುಲ್ (ಸಿ), ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶನ್ ಕಿಶನ್ (ವಿಕೆಟ್ ಕೀಪರ್), ಯುಜವೇಂದ್ರ ಚಾಹಲ್, ಆರ್. ಅಶ್ವಿನ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ (ಉಪನಾಯಕ) , ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್

ಏಕದಿನ ಸರಣಿ ವೇಳಾಪಟ್ಟಿ
ಭಾರತವು ಮೂರು ಏಕದಿನ ಪಂದ್ಯಗಳನ್ನು ಸಹ ಆಡುತ್ತದೆ. ಆದರೆ ಬಿಸಿಸಿಐ ಮೊದಲೇ ಘೋಷಿಸಿದಂತೆ ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು ಮತ್ತೆ ನಿಗದಿಪಡಿಸಲಾಗುತ್ತದೆ.
ಮೊದಲ ಏಕದಿನ: ಜನವರಿ 19 , ಪಾರ್ಕ್, ಪಾರ್ಲ್, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್ ಟೌನ್, ಸಮಯ - 2.00 PM
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications