ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನನ್ನು ಯಾವುದೇ ಮಾದರಿಯಿಂದಲೂ ನಾಯಕತ್ವದಿಂದ ಕೆಳಗಿಳಿಸಿದರೆ ಅದು ದೊಡ್ಡ ತಪ್ಪು: ವಾಸಿಂ ಅಕ್ರಮ್

Wasim Akram backs Babar Azam said Removing him from captaincy in any format will be a mistake

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂಗೆ ಬೆಂಬಲ ನೀಡಿರುವ ವಾಸಿಂ ಅಕ್ರಮ್ ಪಿಸಿಬಿ ಬಾಬರ್ ಅಜಂ ಅವರನ್ನು ಯಾವುದೇ ಮಾದರಿಯಿಂದಲೂ ನಾಯಕತ್ವದಿಂದ ಕೆಳಕ್ಕಿಳಿಸಬಾರದು ಎಂದಿದ್ದು ಹಾಗೇನಾದರೂ ಮಾಡಿದರೆ ಅದು ಬಹಳ ದೊಡ್ಡ ತಪ್ಪಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಪಾಕಿಸ್ತಾನ ತಂಡದ ಕೋಚ್ ಹುದ್ದೆಯನ್ನು ತಾನು ಅಲಂಕರಿಸುವುದಿಲ್ಲ ಎಂದು ಬೇರವಾಗಿಯೇ ಹೇಳಿರುವ ವಾಸಿಂ ಅಕ್ರಮ್ ಇದಕ್ಕೆ ಕಾರಣವನ್ನು ಕೂಡ ವಿವರಿಸಿದ್ದಾರೆ. ಪಾಕಿಸ್ತಾನ ತಂಡ ಕೋಚ್ ಹಾಗೂ ನಾಯಕನಾದವರು ಟೀಕೆ, ನಿಂದನೆ, ದ್ವೇಷಕ್ಕೆ ತುತ್ತಾಗುತ್ತಾರೆ. ಈ ಕಾರಣದಿಂದಾಗಿ ಆ ಜವಾಬ್ಧಾರಿ ನಿರ್ವಹಿಸುವುದಿಲ್ಲ ಎಂದಿದ್ದಾರೆ ವಾಸಿಂ ಅಕ್ರಮ್.

ಭಾರತದಲ್ಲಿ ಅಭ್ಯಾಸ ಪಂದ್ಯಗಳ ಅಗತ್ಯವೇ ಇಲ್ಲ: ಸರಣಿಗೂ ಮುನ್ನವೇ ಸ್ಟೀವ್ ಸ್ಮಿತ್ ಕ್ಯಾತೆಭಾರತದಲ್ಲಿ ಅಭ್ಯಾಸ ಪಂದ್ಯಗಳ ಅಗತ್ಯವೇ ಇಲ್ಲ: ಸರಣಿಗೂ ಮುನ್ನವೇ ಸ್ಟೀವ್ ಸ್ಮಿತ್ ಕ್ಯಾತೆ

"ತಂಡ ಉತ್ತಮವಾಗಿ ಆಡದಿದ್ದಾಗ ಟೀಕೆಗಳನ್ನು ಒಪ್ಪಿಕೊಳ್ಳಬಹುದು. ಆದರೆ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ನಾಯಕ ಮತ್ತು ಕೋಚ್‌ಗಳನ್ನು ಟೀಕಿಸುವುದು ಮಾತ್ರವಲ್ಲದೆ ಎಲ್ಲರೂ ನಿಂದಿಸುವ ರೀತಿಯನ್ನು ಸಹಿಸುವುದು ಅಸಾಧ್ಯ" ಎಂದು ವಾಸಿಂ ಅಕ್ರಮ್ ಹೇಳಿಕೆ ನೀಡಿದ್ದಾರೆ.

"ಲೀಗ್ ಕ್ರಿಕೆಟ್ ವಿಭಿನ್ನವಾಗಿದೆ, ಒತ್ತಡ ಮತ್ತು ನಿರೀಕ್ಷೆಯ ಮಟ್ಟಗಳು ವಿಭಿನ್ನವಾಗಿವೆ, ಅದಕ್ಕಾಗಿಯೇ ನಾನು ಪಿಎಸ್‌ಎಲ್‌ನಲ್ಲಿ ಕರಾಚಿ ಕಿಂಗ್ಸ್ ತಂಡದಲ್ಲಿ ತೊಡಗಿಸಿಕೊಂಡಿದ್ದೇನೆ" ಎಂದಿದ್ದಾರೆ ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್. ಮುಂದುವರಿದು ಮಾತನಾಡಿರುವ ಅವರು "ನಾನು ಯಾವಾಗಲೂ ಪಾಕಿಸ್ತಾನ ಕ್ರಿಕೆಟ್‌ಗೆ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ ಆದರೆ ಅಲ್ಲಿ ಯಾರಿಂದಲೂ ಅನಗತ್ಯ ಟೀಕೆ ಮತ್ತು ನಿಂದನೆಗಳನ್ನು ಎದುರಿಸಲು ಸಿದ್ಧನಿಲ್ಲ" ಎಂದಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಬಾಬರ್ ಅಜಂ ಬಗ್ಗೆ ಕೂಡ ಅಕ್ರಂ ಬೆಂಬಲವನ್ನು ಸೂಚಿಸಿ ಮಾತನಾಡಿದ್ದಾರೆ. "ಯಾವುದೇ ಮಾದರಿಯಲ್ಲಾದರೂ ಬಾಬರ್ ಅಜಂ ಅವರನ್ನು ನಾಯಕನ ಸ್ಥಾನದಿಂದ ಬದಲಾಯಿಸಿದರೂ ಅದು ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ. ಆದರೆ ಬೇರೆ ಆಯ್ಕೆ ಯಾವುವು? ಹೀಗಾಗಿ ಬಾಬರ್‌ಗೆ ನಾವು ಸೇರಿದಂತೆ ಮಂಡಳಿ ಕೂಡ ಬೆಂಬಲವನ್ನು ನೀಡಬೇಕು. ಆತನ ವಯಸ್ಸು ಇನ್ನೂ ಚಿಕ್ಕದು. ಆತ ನಾಯಕನಾಗಿ ಉತ್ತಮವಾಗಬಲ್ಲ. ನನ್ನ ಪ್ರಕಾರ ಯಾರೂ ಸಹಜ ನಾಯಕ ಮತ್ತು ನಾಯಕರಾಗಿ ಹುಟ್ಟಿಲ್ಲ. ಇಂಥಾ ವಿಷಯಗಳು ಸಮಯ ಮತ್ತು ಅನುಭವದೊಂದಿಗೆ ಬರುತ್ತವೆ" ಎಂದಿದ್ದಾರೆ ವಾಸಿಂ ಅಕ್ರಂ.

Story first published: Wednesday, February 1, 2023, 20:47 [IST]
Other articles published on Feb 1, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X