Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತನ್ನ ಫೇವರಿಟ್ ಕ್ರಿಕೆಟಿಗನನ್ನ ಹೆಸರಿಸಿದ ಹಾರ್ದಿಕ್ ಪಾಂಡ್ಯ: ಸಚಿನ್, ಸೆಹ್ವಾಗ್, ದ್ರಾವಿಡ್‌ ಅಲ್ವೇ ಅಲ್ಲ!

Hardik pandya

ಟೀಮ್ ಇಂಡಿಯಾ ಸ್ಟಾರ್ ಆಲ್ ರೌಂಡರ್ ಮತ್ತು ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ 2022 ರ ಋತುವಿನಲ್ಲಿ ಅವರ ಅತ್ಯುತ್ತಮ ನಾಯಕತ್ವಕ್ಕಾಗಿ
ಸಾಕಷ್ಟು ಹೊಗಳಿಕೆಗೆ ಪಾತ್ರರಾದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಜೊತೆಗೆ ನಾಯಕನಾಗಿಯೂ ಯಶಸ್ವಿಯಾದರು.

ವಿಶೇಷ ಅಂದ್ರೆ ಅಲ್ಲಿಯವರೆಗೂ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿ ನಾಯಕನಾಗಿರದ ಪಾಂಡ್ಯ ತನ್ನ ಮೊದಲ ಯತ್ನದಲ್ಲಿಯೇ ಗುಜರಾತ್ ತಂಡವನ್ನು ಚಾಂಪಿಯನ್ ಆಗುವಂತೆ ಮಾಡಿದ್ದು ಆತನ ಹಿರಿಮೆಗೆ ಕಾರಣವಾಗಿದೆ. ಇದರ ಜೊತೆಗೆ ಇತ್ತೀಚೆಗಷ್ಟೇ ತನ್ನ ವೃತ್ತಿ ಜೀವನದ ಯಶಸ್ಸಿಗೆ ಮಹೇಂದ್ರ ಸಿಂಗ್ ಧೋನಿಯೇ ಕಾರಣ ಎಂದು ಹಾರ್ದಿಕ್ ಪಾಂಡ್ಯ ಹೇಳಿರುವುದು ಗೊತ್ತೇ ಇದೆ.

ಧೋನಿ ಇಲ್ಲದಿದ್ರೆ ನಾನು ಇಲ್ಲಿಗೆ ಬರುತ್ತೇಲೆ ಇರಲಿಲ್ಲ ಎಂದಿದ್ದ ಪಾಂಡ್ಯ

ಧೋನಿ ಇಲ್ಲದಿದ್ರೆ ನಾನು ಇಲ್ಲಿಗೆ ಬರುತ್ತೇಲೆ ಇರಲಿಲ್ಲ ಎಂದಿದ್ದ ಪಾಂಡ್ಯ

ವೃತ್ತಿಬದುಕಿನ ಆರಂಭದಲ್ಲಿ ಮಹೇಂದ್ರ ಸಿಂಗ್ ಧೋನಿ ತನಗೆ ನೆರವಾಗದಿದ್ರೆ, ಇಲ್ಲಿಯವರೆಗೆ ನಾನು ಬಂದು ತಲುಪುತ್ತಿರಲಿಲ್ಲ ಎಂದಿರುವ ಪಾಂಡ್ಯ, ಧೋನಿ ನಾಯಕತ್ವದಲ್ಲಿ ಆಡುವ ಅದೃಷ್ಟ ನನ್ನದಾಗಿತ್ತು. ಈ ಹಿನ್ನೆಲೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಸಹಜವಾಗಿ ನನ್ನ ನೆಚ್ಚಿನ ಕ್ರಿಕೆಟಿಗರು ಎಂದು ಅನೇಕ ಬಾರಿ ಕರೆದಿದ್ದಾರೆ. ಆದ್ರೆ ಇದೇ ಮೊದಲ ಬಾರಿಗೆ ಚಿಕ್ಕಂದಿನಿಂದಲೂ ಕ್ರಿಕೆಟ್ ಆಡುತ್ತಾ ಬೆಳೆದಾಗ ಆ ಕ್ರಿಕೆಟಿಗನೊಬ್ಬನ ಬ್ಯಾಟಿಂಗ್ ನೋಡಿ ಅಭಿಮಾನಿಯಾದೆ ಎಂದು ಹೇಳಿದ್ದಾರೆ.

Mithali Raj Retirement : ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್

ಸಚಿನ್, ಸೆಹ್ವಾಗ್, ಧೋನಿ ಅಲ್ಲ!

ಸಚಿನ್, ಸೆಹ್ವಾಗ್, ಧೋನಿ ಅಲ್ಲ!

ಹೆಚ್ಚಿನ ಆಟಗಾರರು ಸಾಮಾನ್ಯವಾಗಿ ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೆಹ್ವಾಗ್, ಸೌರವ್ ಗಂಗೂಲಿ, ಬ್ರಿಯಾನ್ ಲಾರಾ, ಶೇನ್ ವಾರ್ನ್, ಕಾಲಿಸ್ ಮತ್ತು ಸಂಗಕ್ಕಾರ ಅವರಂತಹ ಲೆಜೆಂಡ್‌ಗಳನ್ನ ಹೆಸರಿಸುತ್ತಾರೆ. ಆದರೆ, ಹಾರ್ದಿಕ್ ಪಾಂಡ್ಯ ತಮ್ಮ ನೆಚ್ಚಿನ ಕ್ರಿಕೆಟಿಗ ಭಾರತದ ಮಾಜಿ ಆರಂಭಿಕ ಮತ್ತು ದೇಶೀಯ ಕ್ರಿಕೆಟ್ ದಂತಕಥೆ ವಾಸಿಂ ಜಾಫರ್ ಎಂದು ಹೇಳಿಕೊಂಡಿದ್ದಾರೆ.

ಜಾಫರ್ ನನ್ನ ನೆಚ್ಚಿನ ಕ್ರಿಕೆಟಿಗ

ಜಾಫರ್ ನನ್ನ ನೆಚ್ಚಿನ ಕ್ರಿಕೆಟಿಗ

''ನನಗೆ ಜಾಕ್ವೆಸ್ ಕಾಲಿಸ್, ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ತುಂಬಾ ಇಷ್ಟ. ವಾಸ್ತವವಾಗಿ ನನ್ನ ನೆಚ್ಚಿನ ಕ್ರಿಕೆಟಿಗ ವಾಸಿಂ ಜಾಫರ್. ಅವರು ಬ್ಯಾಟಿಂಗ್ ಮಾಡುವುದನ್ನು ನೋಡುವುದು ನನಗೆ ತುಂಬಾ ಇಷ್ಟ. ಹೇಗೋ ವಾಸಿಂ ಜಾಫರ್ ಬ್ಯಾಟಿಂಗ್ ನಕಲು ಮಾಡಿದೆ. ಆದರೆ ನಾನು ಅವನ ಮಟ್ಟಿಗೆ ಬೆಳೆಯಲಾಗಲಿಲ್ಲ'' ಎಂದು ನಗುತ್ತಾ ಮಾತನಾಡಿದ್ದಾರೆ.

''ನಾನು ಕೃನಾಲ್ ಪಾಂಡ್ಯ ಕ್ರಿಕೆಟ್, ಜೀವನದ ಬಗ್ಗೆಯೂ ಹೆಚ್ಚು ಮಾತನಾಡುತ್ತೇನೆ. ನಾವಿಬ್ಬರೂ ಆರು ವರ್ಷಗಳ ಹಿಂದೆಯೇ ಟೀಂ ಇಂಡಿಯಾ ಪರ ಆಡಲು ಯೋಜಿಸಿದ್ದೆವು. ಕೃನಾಲ್, ನಾನು ಸಂಪೂರ್ಣವಾಗಿ ವಿಭಿನ್ನ ಕ್ರಿಕೆಟಿಗ. ನಮ್ಮ ನಡುವೆ ಯಾವತ್ತೂ ಸ್ಪರ್ಧೆ ಇಲ್ಲ. ಏಕೆಂದರೆ ನಮ್ಮ ಪಾತ್ರಗಳು ವಿಭಿನ್ನವಾಗಿವೆ, "ಎಂದು ಹಾರ್ದಿಕ್ ಹೇಳಿದರು.

ನಾವು ವಿಶ್ವ ಶ್ರೇಷ್ಟ ಟಾಪ್ 3 ಬ್ಯಾಟರ್‌ ಅನ್ನು ಹೊಂದಿದ್ದೇವೆ: ರಾಹುಲ್ ದ್ರಾವಿಡ್

ಅಪ್ಪನ ಹೆಸರೇ ಮಗನಿಗೆ ಕಂಟಕ | *Cricket | *Arjun Tendulkar | Oneindia Kannada
ವಾಸಿಂ ಜಾಫರ್ ರೆಕಾರ್ಡ್

ವಾಸಿಂ ಜಾಫರ್ ರೆಕಾರ್ಡ್

ವಾಸಿಂ ಜಾಫರ್ 2000-2008ರ ನಡುವೆ ಟೀಂ ಇಂಡಿಯಾ ಪರ 31 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 1944 ರನ್ ಗಳಿಸಿದ್ದಾರೆ. ಆ ಸಂದರ್ಭದಲ್ಲಿ ಭಾರತ ತಂಡದಲ್ಲಿ ಸಚಿನ್, ಸೆಹ್ವಾಗ್, ಲಕ್ಷ್ಮಣ್, ದ್ರಾವಿಡ್, ಗಂಗೂಲಿ ಅವರಂತಹ ದಿಗ್ಗಜರು ಇರುವುದರಿಂದ ಜಾಫರ್‌ಗೆ ರಾಷ್ಟ್ರೀಯ ತಂಡದಲ್ಲಿ ಹೆಚ್ಚು ಅವಕಾಶ ಸಿಗಲಿಲ್ಲ. ಆದರೆ, ಜಾಫರ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರು.

ಅವರು 31 ಟೆಸ್ಟ್‌ಗಳಲ್ಲಿ 11 ಅರ್ಧ ಶತಕ ಮತ್ತು ಐದು ಶತಕಗಳನ್ನು ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 212 ಆಗಿತ್ತು. ಜಾಫರ್ ರಾಷ್ಟ್ರೀಯ ತಂಡದಲ್ಲಿ ಹೆಚ್ಚು ಹೆಸರುವಾಸಿಯಾಗದಿದ್ದರೂ, ಅವರು ದೇಶೀಐ ಕ್ರಿಕೆಟ್‌ನಲ್ಲಿ ಟನ್‌ಗಳಷ್ಟು ರನ್ ಗಳಿಸಿದರು. ಅವರು 260 ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಟ್ಟು 19,410 ರನ್ ಗಳಿಸಿದ್ದಾರೆ. ಇದರಲ್ಲಿ 57 ಶತಕಗಳು ಮತ್ತು 91 ಅರ್ಧ ಶತಕಗಳು ಸೇರಿವೆ. ಅವರು ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

Story first published: Wednesday, June 8, 2022, 17:56 [IST]
Other articles published on Jun 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+