Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎರಡನೇ ಪಂದ್ಯಕ್ಕೆ ಆ ಮ್ಯಾಚ್ ವಿನ್ನರ್‌ಗೆ ಅವಕಾಶ ನೀಡಿ ಎಂದ ವಾಸಿಂ ಜಾಫರ್

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಮತ್ತೊಂದು ಪಂದ್ಯದಲ್ಲಿ ಟೀಮ್ ಇಂಡಿಯಾ ಮುಖಾಉಖಿಯಾಗಲು ಸಜ್ಜಾಗಿದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸರಣಿಯನ್ನು ಸಮಬಲಗೊಳಸಿಲು ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಆಡಿದ ಬಳಗದೊಂದಿಗೆ ಕಣಕಕ್ಇಳಿಯಲಿದೆಯಾ ಅಥವಾ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲಿದೆಯಾ ಎಂಬುದು ಕುತೂಹಲ ಮೂಡಿಸಿದೆ.

ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಯುವ ಆಟಗಾರ ಯಸಸ್ವಿ ಜೈಸ್ವಾಲ್‌ಗೆ ಟೀಮ್ ಇಂಡಿಯಾದ ಟಿ20 ತಂಡದಲ್ಲಿ ಅವಕಾಶ ನೀಡಿ ಎಂದು ಒತ್ತಾಯಿಸಿದ್ದಾರೆ. ಮೊದಲ ಪಂದ್ಯದಲ್ಲಿ ಬೆಂಚ್ ಕಾದಿದ್ದ ಜಯಸ್ವಾಲ್‌ಗೆ ಎರಡನೆ ಪಂದ್ಯದಲ್ಲಿ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Wasim Jaffer said Yashasvi Jaiswal should play in 2nd t20I in the place of Ishan Kishan

ಅಂದಹಾಗೆ ವಾಸಿಂ ಜಾಫರ್ ಎರಡೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಬದಲಿಗೆ ತಂಡದಲ್ಲಿ ಯಶಸ್ವಿ ಜೈಸ್ವಾಲ್‌ಗೆ ಅವಕಾಶ ನಿಡಬೇಕು ಎಂದು ಒತ್ತಾಯಸಿದರು. ಏಕದಿನ ಸರಣಿಯಲ್ಲಿ ಇಶಾನ್ ಕಿಶನ್ ಅದ್ಭುತ ಪ್ರದರ್ಶನ ನೀಡಿದ್ದರು ಕೂಡ ಟಿ20 ಮಾದರಿಯಲ್ಲಿ ಅವರ ಪ್ರದರ್ಶನ ಗಮನಾರ್ಹವಾಗಿಲ್ಲ ಎಂಬುದನ್ನು ಜಾಫರ್ ಬೊಟ್ಟು ಮಾಡಿದ್ದು ಆ ಸ್ಥಾನದಲ್ಲಿ ಜೈಸ್ವಾಲ್‌ಗೆ ಅವಕಾಶ ನಿಡಬೇಕು ಎಂದು ಒತ್ತಾಯಿಸಿದ್ದಾರೆ.

"ಯಶಸ್ವಿ ಜೈಸ್ವಾಲ್ ಆಡುವುದನ್ನು ನೋಡಲು ನಾನು ಬಯಸುತ್ತೇನೆ. ಆತ ಆರಂಣಿಕನಾಗಿ ಆಡಬೇಕು. ಇಶಾನ್ ಕಿಶನ್ ಸ್ಥಾನದಲ್ಲಿ ಜೈಸ್ವಾಲ್ ಆಡುವುದನ್ನು ನೊಡಲು ನಾನು ಬಯಸುತ್ತೇನೆ. ಇಶಾನ್ ಕಿಶನ್ ಅವರ ಅಂತಾರಾಷ್ಟ್ರೀಯ ಟಿ20 ಪಂದ್ಯದ ಪ್ರದರ್ಶನ ನನಗೆ ಕಳವಳ ಮೂಡಿಸಿದೆ. ಕಳೆದ 15 ಇನ್ನಿಂಗ್ಸ್‌ಗಳಲ್ಲಿ ಆತ 40 ರನ್‌ಗಳನ್ನು ಕೂಡ ಗಳಿಸಿಲ್ಲ. ಆತನ ಸ್ಟ್ರೈಕ್‌ರೇಟ್ ಕುಡ ಬಹಳ ಕಡಿಮೆಯಿದೆ. ಅದುವೇ ನನ್ನ ಕಳವಳಕ್ಕೆ ಕಾರಣ. ಆದರೆ ಆತ ಏಕದಿನ ಮಾದರಿಯಲ್ಲಿ ಅತ್ಯುತ್ತಮ ಲಯದಲ್ಲಿದ್ದರು. ಆದರೆ ಇದು ವಿಭಿನ್ನವಾದ ಮಾದರಿಯಾಗಿದೆ. ಅಲ್ಲದೆ ಐಪಿಎಲ್‌ನಲ್ಲಿಯೂ ಬಹಳ ಸಾಧಾರಣವಾದ ಸೀಸನ್ ಹೊಂದಿದ್ದರು" ಎಂದು ವಾಸಿಂ ಜಾಫರ್ ಹೇಳಿಕೆ ನೀಡಿದ್ದಾರೆ.

ಇತ್ತ ಯಶಸ್ವಿ ಜೈಸ್ವಾಲ್ ಇತ್ತೀಚಿನ ದಿನಗಳಲ್ಲಿ ಆಡಿದ ಎಲ್ಲಾ ಮಾದರಿಯಲ್ಲಿಯೂ ಅದ್ಭುತ ಪ್ರದರ್ಶನ ನಿಡುತ್ತಾ ಗಮನಸೆಲೆಯುತ್ತಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಜೈಸ್ವಾಲ್ 14 ಪಂದ್ಯಗಳಲ್ಲಿ 625 ರನ್‌ಗಳನ್ನು ಬಾರಿಸಿದ್ದಾರೆ. 48.08 ಅವರ ಸರಾಸರಿಯಾಗಿದ್ದರೆ 163.61ರಷ್ಟು ಅದ್ಭುತವಾದ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವುದು ಗಮನಾರ್ಹ ಅಂಶ. ಈ ಆವೃತ್ತಿಯಲ್ಲಿ ಅವರು ಐದು ಅರ್ಧ ಶತಕ ಹಾಗೂ ಒಂದು ಶತಕ ಕೂಡ ಸಿಡಿಸಿದ್ದರು. ಕೆಕೆಆರ್ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಕೇವಲ 13 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧ ಶತಕ ಸಿಡಿಸಿದ ಆಗಟಾಋ ಎಂಬ ದಾಖಲೆ ಕೂಡ ಬರೆದಿದ್ದರು.

ಐಪಿಎಲ್‌ನಲ್ಲಿ ಮಾತ್ರವದಲ್ಲದೆ ದೇಶೀಯ ಕ್ರಿಕೆಟ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡಿರುವ ಕಾರಣದಿಂದಾಗಿ ಭಾರತ ಟೆಸ್ಟ್ ತಂಡದಲ್ಲಿ ಜೈಸ್ವಾಲ್ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ವೆಸ್ಟ್ ಇಂಡಿಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಿದ್ದ ಜೈಸ್ವಾಲ್ ಅಮೋಘ ಆಟ ಪ್ರದರ್ಶಿಸಿದ್ದರು. ಚೊಚ್ಚಲ ಇನ್ನಿಂಗ್ಸ್‌ನಲ್ಲಿಯೇ ಬೃಹತ್ ಶತಕ ಸಿಡಿಸಿದ ಜೈಸ್ವಾಲ್ ಕಣಕ್ಕಿಳಿದ ಮೂರು ಇನ್ನಿಂಗ್ಸ್‌ಗಳಲ್ಲಿ 171, 57 ಹಾಗೂ 38 ರನ್‌ಗಳನ್ನು ಗಳಿಸಿದ್ದರು.

Story first published: Sunday, August 6, 2023, 13:29 [IST]
Other articles published on Aug 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+