Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ಆರಂಭಿಕ ಜೋಡಿ- ರೋಹಿತ್ -ಶಿಖರ್ ರಿಂದ ಹೊಸ ದಾಖಲೆ

ಲಂಡನ್, ಜೂನ್ 08 : ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಜೋಡಿ ಹೊಸ ದಾಖಲೆ ನಿರ್ಮಿಸಿದೆ.

ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು

ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಅವರು ಸತತವಾಗಿ ಶತಕದ ಜೊತೆಯಾಟ ಸಾಧಿಸಿ ಹೊಸ ಭಾರತೀಯ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಸತತವಾಗಿ ಮೂರು ಬಾರಿ ಶತಕದ ಜೊತೆಯಾಟ ಗಳಿಸಿದ್ದಾರೆ.

ಬಲಗೈ ಬ್ಯಾಟ್ಸ್ ಮನ್ ರೋಹಿತ್ ಶರ್ಮ, ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ 123ರನ್ ಜೊತೆಯಾಟ, ಬರ್ಮಿಂಗ್ ಹ್ಯಾಮ್ ನಲ್ಲಿ ಪಾಕಿಸ್ತಾನ ವಿರುದ್ಧ 136ರನ್ ಹಾಗೂ ಒವಲ್ ನಲ್ಲಿ ಶ್ರೀಲಂಕಾ ವಿರುದ್ಧ ಇಂದು 138ರನ್ ಜೊತೆಯಾಟ ಸಾಧಿಸಿ, ಹೊಸ ದಾಖಲೆ ಬರೆದಿದ್ದಾರೆ. [ಟೀಂ ಇಂಡಿಯಾ ವಿರುದ್ಧ ಗೆಲ್ಲಲು ಶ್ರೀಲಂಕಾಕ್ಕೆ 322ರನ್ ಟಾರ್ಗೆಟ್]

ಸಚಿನ್ ಹಾಗೂ ಗಂಗೂಲಿ ಅಗ್ರಸ್ಥಾನದಲ್ಲಿರುವ ಭಾರತದ ಅತ್ಯಂತ ಯಶಸ್ವಿ ಏಕದಿನ ಆರಂಭಿಕ ಜೋಡಿಗಳ ಪಟ್ಟಿಯಲ್ಲಿ ರೋಹಿತ್ ಹಾಗೂ ಶಿಖರ್ ಧವನ್ ಹೊಸದಾಗಿ ಎಂಟ್ರಿ ಪಡೆದುಕೊಂಡಿದ್ದಾರೆ.

ಭಾರತದ ಯಶಸ್ವಿ ಆರಂಭಿಕ ಜೋಡಿ

ಭಾರತದ ಯಶಸ್ವಿ ಆರಂಭಿಕ ಜೋಡಿ

ಐಸಿಸಿ ಆಯೋಜನೆಯ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ಗಳಲ್ಲಿ ಎರಡು ಬಾರಿ ಶತಕದ ಜೊತೆಯಾಟ ಸಾಧಿಸಿದ್ದು ಇದೇ ಮೊದಲು. ಜತೆಗೆ ಸತತ ಎರಡು ಬಾರಿ ಒಂದೇ ಟೂರ್ನಮೆಂಟ್ ನಲ್ಲಿ 100ರನ್ ಗಡಿ ದಾಟಿದ್ದು ಕೂಡಾ ರೋಹಿತ್ ಹಾಗ್ ಶಿಖರ್ ಅವರ ಸಾಧನೆ.

ರನ್ ಸರಾಸರಿಯಲ್ಲೂ ಮುಂದೆ

ರನ್ ಸರಾಸರಿಯಲ್ಲೂ ಮುಂದೆ

2015ರ ವಿಶ್ವಕಪ್ ನಂತರ (500 ಪ್ಲಸ್ ರನ್ ಗಳಿಸಿದ ಜೋಡಿಯನ್ನು ಮಾತ್ರ ಪರಿಗಣಿಸಿ) ಅತ್ಯಂತ ಯಶಸ್ವಿ ಜೋಡಿ ಎನಿಸಿಕೊಂಡಿರುವ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಅವರು 55.10 ರನ್ ಸರಾಸರಿಯಂತೆ ರನ್ ಗಳಿಸಿದ್ದಾರೆ.

ಧವನ್ ದಾಖಲೆ

ಧವನ್ ದಾಖಲೆ

ಉತ್ತಮ ಲಯದಲ್ಲಿರುವ ಶಿಖರ್ ಧವನ್ ಅವರು ಈ ಪಂದ್ಯದಲ್ಲಿ ತಮ್ಮ ವೃತ್ತಿ ಬದುಕಿನ 19ನೇ ಅರ್ಧಾಶತಕ ಸಿಡಿಸಿದರು. ಇದರ ಜೊತೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಂತ ತ್ವರಿತವಾಗಿ 500ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. 7 ಇನ್ನಿಂಗ್ಸ್ ಗಳಲ್ಲಿ 500ರನ್ ಗಡಿ ದಾಟಿದ್ದಾರೆ.

ಭಾರತ ಹಾಗೂ ಶ್ರೀಲಂಕಾ

ಭಾರತ ಹಾಗೂ ಶ್ರೀಲಂಕಾ

ಭಾರತ ಹಾಗೂ ಶ್ರೀಲಂಕಾ ನಡುವೆ ಇದು 150ನೇ ಏಕದಿನ ಪಂದ್ಯವಾಗಿದ್ದು, ವಿಶ್ವದ ಯಾವುದೇ ತಂಡದ ನಡುವೆ ಇಷ್ಟು ಏಕದಿನ ಪಂದ್ಯಗಳು ನಡೆದಿಲ್ಲ. ಎರಡನೇ ಸ್ಥಾನದಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನವಿದ್ದು, ಉಭಯ ತಂಡಗಳು 147 ಪಂದ್ಯಗಳನ್ನಾಡಿವೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+