ಎಡಗೈ ದಾಂಡಿಗರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಮೊದಲಿಗ
ಬೆಂಗಳೂರು, ಫೆ. 24 : ವೆಸ್ಟ್ ಇಂಡೀಸ್ ಆರಂಭಿಕ ದಾಂಡಿಗ ಕ್ರಿಸ್ ಗೇಲ್ ಏಕದಿನ ಪಂದ್ಯದಲ್ಲಿ ದ್ವಿಶತಕ ಸಾಧನೆ ಮಾಡಿದ ಮೊದಲ ಎಡಗೈ ಬ್ಯಾಟ್ಸಮನ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಇಲ್ಲಿಯವರೆಗೆ ಭಾರತೀಯರ ಹೆಸರಿನಲ್ಲಿದ್ದ ದಾಖಲೆಗಳ ಪಟ್ಟಿಗೆ 35 ವರ್ಷದ ಆಟಗಾರ ಸೇರ್ಪಡೆಯಾಗಿದ್ದಾರೆ. ಎಡಗೈ ಬ್ಯಾಟ್ಸಮನ್ ಸಯೀದ್ ಅನ್ವರ ಭಾರತದ ವಿರುದ್ಧ ಗಳಿಸಿದ್ದ 194 ರನ್ ಇಲ್ಲಿಯವರೆಗಿನ ಸರ್ವಾಧಿಕ ಮೊತ್ತವಾಗಿತ್ತು.[ಗೇಲ್ ಧೂಳಿಪಟ ಮಾಡಿದ ವಿಶ್ವ ದಾಖಲೆಗಳ ಪಟ್ಟಿ]

ಎಡಗೈ ಬ್ಯಾಟ್ಸಮನ್ ಒಬ್ಬ ಏಕದಿನ ಪಂದ್ಯದಲ್ಲಿ ಗಳಿಸಿದ ಸರ್ವಾಧಿಕ ರನ್ ಪಟ್ಟಿ ಇಲ್ಲಿದೆ.
* ಕ್ರಿಸ್ ಗೇಲ್(ವೆಸ್ಟ್ ಇಂಡೀಸ್) 147 ಬಾಲ್ ಗೆ 215 ರನ್, ಜಿಂಬಾಬ್ವೆ ವಿರುದ್ಧ, ಕ್ಯಾನ್ ಬೇರಾ, 2015
* ಸಯೀದ್ ಅನ್ವರ್(ಪಾಕಿಸ್ತಾನ), 146 ಬಾಲ್ ಗೆ 197 ರನ್, ಭಾರತದ ವಿರುದ್ಧ, ಚನ್ನೈ, 1997
* ಸನತ್ ಜಯಸೂರ್ಯ(ಶ್ರೀಲಂಕಾ), 161 ಬಾಲ್ ಗೆ 189, ಭಾರತದ ವಿರುದ್ಧ, ಶಾರ್ಜಾ, 2000
* ಗ್ಯಾರಿ ಕ್ರಿಸ್ಟನ್(ದಕ್ಷಿಣ ಆಫ್ರಿಕಾ), 159 ಚೆಂಡುಗಳಲ್ಲಿ 188 ನಾಟ್ ಔಟ್, ಯುಎಇ ವಿರುದ್ಧ, ರಾವಲ್ಪಿಂಡಿ, 1996
* ಸೌರವ್ ಗಂಗೂಲಿ(ಭಾರತ), 158 ಬಾಲ್ ಗೆ 183, ಶ್ರೀಲಂಕಾ ವಿರುದ್ಧ, ಟಂಟನ್, 1999
* ಮ್ಯಾಥ್ಯೂ ಹೇಡನ್, 166 ಬಾಲ್ ಗೆ 181 ನಾಟ್ ಔಟ್, ನ್ಯೂಜಿಲೆಂಡ್ ವಿರುದ್ಧ, ಹ್ಯಾಮಿಲ್ಟನ್, 2007
* ಉಪುಲ್ ತರಂಗಾ(ಶ್ರೀಲಂಕಾ), 159 ಬಾಲ್ ಗೆ 174 ನಾಟ್ ಔಟ್, ಭಾರತದ ವಿರುದ್ಧ, ಕಿಂಗ್ ಸ್ಟನ್, 2013
* ಆಡಂ ಗಿಲ್ ಕ್ರಿಸ್ಟ್(ಆಸ್ಟ್ರೇಲಿಯಾ), 123 ಬಾಲ್ ಗೆ 172, ಜಿಂಬಾಬ್ವೆ ವಿರುದ್ಧ, ಹೋಬಾರ್ಟ್, 2004
* ಬ್ರಿಯಾನ್ ಲಾರಾ(ವೆಸ್ಟ್ ಇಂಡೀಸ್), 129 ಚೆಂಡಿಗೆ 169, ಶ್ರೀಲಂಕಾ ವಿರುದ್ಧ, ಶಾರ್ಜಾ, 1995
* ಕುಮಾರ್ ಸಂಗಕ್ಕಾರ(ಶ್ರೀಲಂಕಾ), 137 ಬಾಲ್ ಗೆ 169 , ದಕ್ಷಿಣ ಆಫ್ರಿಕಾ ವಿರುದ್ಧ, ಕೊಲಂಬೊ, 2013(ಒನ್ ಇಂಡಿಯಾ ನ್ಯೂಸ್)
Story first published: Wednesday, January 3, 2018, 10:02 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications