For Quick Alerts
ALLOW NOTIFICATIONS  
For Daily Alerts
 

ಪಾಕ್‌ ಸೆಮಿಫೈನಲ್‌ ತಲುಪಲು ಭಾರತದ ನೆರವು ಬೇಡಿದ ಶೊಯೇಬ್‌ ಅಖ್ತರ್‌!

ICC World Cup 2019 : ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಸಹಾಯ ಕೇಳಿದ ಪಾಕಿಸ್ತಾನ..! | IND vs PAK
WC 2019: India, you have to help us qualify for semis, says Shoaib Akhtar

ಲಂಡನ್‌, ಜೂನ್‌ 27: ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ ತಂಡದ ಸೋಲು ಮತ್ತು ನ್ಯೂಜಿಲೆಂಡ್‌ ವಿರುದ್ಧ ಪಾಕಿಸ್ತಾನ ತಂಡಕ್ಕೆ ಸಿಕ್ಕ ಗೆಲುವಿನಿಂದಾಗಿ ಪ್ರಸಕ್ತ ವಿಶ್ವಕಪ್‌ ಟೂರ್ನಿಯು ರೋಚಕ ತಿರುವು ಪಡೆದುಕೊಂಡಿದ್ದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಅದರಲ್ಲೂ ಪಾಕಿಸ್ತಾನ ತಂಡಕ್ಕೆ ಅಂತಿಮ ನಾಲ್ಕರ ಘಟ್ಟಕ್ಕೆ ಕಾಲಿಡುವ ಉತ್ತಮ ಅವಕಾಶ ಲಭ್ಯವಾಗಿದೆ. ಮುಂದಿನ 2 ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಮೊದಲಿಗೆ ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಜಯ ದಾಖಲಿಸಬೇಕಿದೆ. ಇದೇ ವೇಳೆ ಮತ್ತೊಂದು ಪಂದ್ಯದ ಫಲಿತಾಂಶದ ಆಧಾರದ ಮೇರೆಗೆ ಪಾಕ್‌ ಭವಿಷ್ಯ ನಿರ್ಧಾರವಾಗಲಿದೆ.

ಹೀಗಿರುವಾಗ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌, ಪಾಕ್‌ ತಂಡಕ್ಕೆ ಸೆಮಿಫೈನಲ್‌ ಹಂತಕ್ಕೇರಲು ಟೀಮ್‌ ಇಂಡಿಯಾ ನೆರವಾಗಬೇಕೆಂದು ತಮ್ಮ ಯೂ-ಟ್ಯೂಬ್‌ ಚಾನಲ್‌ ಮೂಲಕ ಅಂಗಲಾಚಿದ್ದಾರೆ. ಏಕೆಂದರೆ, ಇದೇ ಭಾನುವಾರ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್‌ ನಡುವಣ ಪಂದ್ಯದಲ್ಲಿ ಭಾರತಕ್ಕೆ ಜಯ ಪ್ರಾಪ್ತಿಯಾದಲ್ಲಿ ಪಾಕ್‌ ತಂಡದ ಹಾದಿ ಸುಗಮವಾಗಲಿದೆ.

"ಇದೀಗ ಭಾರತವೇ ಪಾಕಿಸ್ತಾನ ತಂಡಕ್ಕೆ ನೆರವಾಗಬೇಕು! ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದರೆ, ಇಂಗ್ಲೆಂಡ್‌ ಪ್ರಶಸ್ತಿ ರೇಸ್‌ನಿಂದ ಹೊರಬೀಳಲಿದೆ. ಪಾಕಿಸ್ತಾನ ತಂಡ 11 ಅಂಕಗಳೊಂದಿಗೆ ಸೆಮಿಫೈನಲ್‌ ತಲುಪುವ ಅವಕಾಶ ಹೊಂದಲಿದೆ,'' ಎಂದು ಶೊಯೇಬ್‌ ವಿಶ್ಲೇಷಿಸಿದ್ದಾರೆ.

"ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಅತ್ಯುತ್ತಮವಾಗಿ ಪುಟಿದೆದ್ದಿದೆ. ಆದರೀಗ ಭಾರತ ಎಚ್ಚೆತ್ತುಕೊಳ್ಳಬೇಕು. ಭಾರತವೇ ನಮಗೆ ನೆರವಾಗಬೇಕು. ಇಂಗ್ಲೆಂಡ್‌ ವಿರುದ್ಧ ಜಯ ದಾಖಲಿಸಿ. ನಾವು ನಮ್ಮ ಪಾಲಿನ ಉಳಿದೆರಡು ಪಂದ್ಯಗಳನ್ನು ಗೆಲ್ಲುತ್ತೇವೆ. ಈ ಮೂಲಕ ಸೆಮಿಫೈನಲ್‌ನಲ್ಲಿ ನಾವು ಮುಖಾಮುಖಿಯಾಗಿ ನಿಮ್ಮೆದುರು ಜಯ ದಾಖಲಿಸಬಹುದು," ಎಂದು ಸವಾಲು ಹಾಕಿದ್ದಾರೆ.

ಒಂದು ವೇಳೆ ಇಂಗ್ಲೆಂಡ್‌ ತಂಡ ಭಾರತ ವಿರುದ್ಧ ಜಯ ದಾಖಲಿಸಿ ತನ್ನ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತರೂ ಸ್ಪರ್ಧೆಯಿಂದ ಹೊರಬೀಳಲಿದೆ.

Story first published: Thursday, June 27, 2019, 18:59 [IST]
Other articles published on Jun 27, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+