Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡಕ್ಕೆ ಈ ಸೌಲಭ್ಯವಿಲ್ಲ!

ವಿಶ್ವಕಪ್ ನಲ್ಲಿ ಸೌಲಭ್ಯ ವಂಚಿತವಾದ ಪಾಕ್ ತಂಡ..! | Oneindia Kannada
WC: Wives, families of Pak players not to travel with team

ಲಾಹೋರ್‌, ಮೇ 24: ವಿಶ್ವಕಪ್‌ ಟೂರ್ನಿ ವೇಳೆ ಆಟಗಾರರ ಗಮನ ಬೇರೆಡೆಗೆ ತಿರುಗದಂತೆ ತಡೆಯುವ ದೃಷ್ಟಿಕೋನದಿಂದ ಪತ್ನಿ ಹಾಗೂ ಕುಟುಂಬ ಸದಸ್ಯರು ವಿಶ್ವಕಪ್‌ ಟೂರ್ನಿ ವೇಳೆ ಆಟಗಾರರಿಗೆ ಜೊತೆಯಾಗದಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ನಿಷೇಧ ಹೇರಿದೆ.

ಮೇ 30ರಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ 12ನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ 12ನೇ ಆವೃತ್ತಿ ಆರಂಭವಾಗಲಿದೆ. ಪಾಕಿಸ್ತಾನ ತಂಡ ಇತ್ತೀಚೆಗಷ್ಟೇ ಇಂಗ್ಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಸತತ ಸೋಲುಂಡು ನಿರಾಸೆ ಅನುಭವಿಸಿತ್ತು. ಇದರ ಬೆನ್ನಲ್ಲೇ ವಿಶ್ವಕಪ್‌ನಲ್ಲಿ ಆಟಗಾರರು ತಮ್ಮ ಪತ್ನಿ ಹಾಗೂ ಕುಟುಂಬದವರನ್ನು ಕರೆದೊಯ್ಯಬಾರದು ಎಂದು ಪಿಸಿಬಿ ಕಟ್ಟುನಿಟ್ಟಾಗಿ ಆದೇಶಿಸಿದೆ.

ಇನ್ನು ಪಿಸಿಬಿ ತಂಡದ ನೂತನ ನಿಯಮಗಳ ಪ್ರಕಾರ ಆಟಗಾರರ ಕುಟುಂಬ ಸದಸ್ಯರು ವಿಶ್ವಕಪ್‌ಗೆ ಪ್ರಯಾಣ ಬೆಳೆಸಲು ಮುಂದಾದರೆ ಅದರ ಎಲ್ಲಾ ಖರ್ಚುವೆಚ್ಚಗಳನ್ನು ಅವರೇ ನೋಡಿಕೊಳ್ಳಬೇಕು ಎಂದಿದೆ. ಇದು ಎಲ್ಲಾ ಆಟಗಾರರಿಗೂ ಅನ್ವಯಿಸಿಲದೆ. ಆದರೆ, ಹ್ಯಾರಿಸ್‌ ಸೊಹೇಲ್‌ ಅವರಿಗೆ ಮಾತ್ರ ಖಾಸಗಿ ರಕ್ಷಕರನ್ನು ಹೊಂದಲು ಅವಕಾಶ ನೀಡಲಾಗಿದೆ.

ಮೌಂಟ್‌ ಎವರೆಸ್ಟ್‌ ತುದಿಯಲ್ಲೂ ಟ್ರಾಫಿಕ್‌ ಜಾಮ್‌! ಇಬ್ಬರು ಭಾರತೀಯರ ಸಾವು

ಇದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್‌ ತಂಡದ ಆಟಗಾರರ ಕುಟುಂಬ ಸದಸ್ಯರಿಗೆ ಹಾಗೂ ಪತ್ನಿಯರಿಗೆ ಆಟಗಾರರು ತಂಗುವ ಹೋಟೆಲ್‌ಗಳಲ್ಲಿಯೇ ಉಳಿದುಕೊಲ್ಳುವ ವ್ಯವಸ್ಥೆ ಮಾಡಲು ಅನಮತಿ ನೀಡಲಾಗಿತ್ತು. ಇದೀಗ ನೂತನ ನಿಯಮವನ್ನು ತಂಡದ ಮ್ಯಾನೇಜರ್‌ ಆಟಗಾರರಿಗೆ ತಿಳಿಸಿದ್ದಾರೆ. ಇದರೊಂದಿಗೆ ಪಾಕಿಸ್ತಾನ ತಂಡಕ್ಕೆ ಈ ಮೊದಲು ಇದ್ದ ಸೌಲಭ್ಯ ಇದೀಗ ಕಳೆದುಕೊಂಡಂತಾಗಿದೆ.

ಪಾಕ್‌ ತಂಡ ಮೇ 31ರಂದು 2 ಬಾರಿಯ ಚಾಂಪಿಯನ್ಸ್‌ ವೆಸ್ಟ್‌ ಇಂಡೀಸ್‌ ವಿರುದ್ಧ ತನ್ನ ವಿಶ್ವಕಪ್‌ ಅಭಿಯಾನವನ್ನು ನಾಟಿಂಗ್‌ಹ್ಯಾಮ್‌ನಲ್ಲಿ ಆರಂಭಿಸಲಿದೆ.

Story first published: Friday, May 24, 2019, 19:27 [IST]
Other articles published on May 24, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+