Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಈತನಿಗಾಗಿ ಪ್ರಾಣ ನೀಡಲು ನಾವು ಸಿದ್ಧ' ಎಂದ ಪಾಕಿಸ್ತಾನ ಕ್ರಿಕೆಟಿಗ ಶಾನ್ ಮಸೂದ್

We Are Ready To Give Our Lives For Pakistan Team Captain Babar Azam Says Shan Masood

ನಾಯಕತ್ವ, ಮಾಜಿ ಕ್ರಿಕೆಟಿಗರ ಹೇಳಿಕೆ ಮತ್ತು ಮಂಡಳಿ ವಿಷಯವಾಗಿ ಜಗತ್ತಿನಾದ್ಯಂತ ಆಗಾಗ ಪಾಕಿಸ್ತಾನ ಕ್ರಿಕೆಟ್ ತಂಡವು ಭಾರೀ ಸುದ್ದಿಯಾಗುತ್ತದೆ. ಪ್ರಸ್ತುತ ತಮ್ಮ ತಂಡವನ್ನು ಮಾಜಿ ಆಟಗಾರರೇ ಟೀಕಿಸುವುದು ಹೊಸದೇನೂ ಅಲ್ಲ.

ಇದೀಗ ಭಾರತದಲ್ಲಿ ವರ್ಷಾಂತ್ಯದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಅವರ ನಾಯಕತ್ವದ ಬಗ್ಗೆ ತಮ್ಮದೇ ದೇಶದ ಮಾಜಿ ಆಟಗಾರರಿಂದ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಇದರ ನಡುವೆಯೂ ಬಾಬರ್ ಅಜಂ ಅವರು ತಮ್ಮ ರಾಷ್ಟ್ರೀಯ ತಂಡದ ಸಹ ಆಟಗಾರ ಶಾನ್ ಮಸೂದ್ ಅವರಿಂದ ಬೆಂಬಲ ವ್ಯಕ್ತವಾಗಿದೆ. 33 ವರ್ಷದ ಬಾಬರ್ ಅಜಂ ಅವರನ್ನು ಪಾಕಿಸ್ತಾನ ಕ್ರಿಕೆಟ್‌ನ ಅತ್ಯುತ್ತಮ ನಾಯಕ ಎಂದು ಬಣ್ಣಿಸಿದ್ದಾರೆ ಮತ್ತು ತಂಡವು ಉತ್ತಮ ಪ್ರದರ್ಶನವನ್ನು ನೀಡಲು ಉಳಿದ ಆಟಗಾರರ ಬೆಂಬಲದ ಅಗತ್ಯವಿದೆ ಎಂದು ಶಾನ್ ಮಸೂದ್ ಹೇಳಿದ್ದಾರೆ.

ಗಮನಾರ್ಹ ಅಂಶವೆಂದರೆ, ಏಷ್ಯಾ ಕಪ್ 2022 ಮತ್ತು ಟಿ20 ವಿಶ್ವಕಪ್ 2022ರ ಫೈನಲ್‌ಗಳಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾದ ನಂತರ, ಪಾಕಿಸ್ತಾನ ಕ್ರಿಕೆಟಿಗರಾದ ಕಮ್ರಾನ್ ಅಕ್ಮಲ್, ಶೋಯೆಬ್ ಅಖ್ತರ್ ಮತ್ತು ದಾನಿಶ್ ಕನೇರಿಯಾ ಸೇರಿದಂತೆ ಅನೇಕರು ಬಾಬರ್ ಅಜಂ ಅವರ ನಾಯಕತ್ವವನ್ನು ಟೀಕಿಸಿದ್ದಾರೆ.

We Are Ready To Give Our Lives For Pakistan Team Captain Babar Azam Says Shan Masood

"ಸರ್ಫರಾಜ್ ಅಹ್ಮದ್ ತಂಡದ ನಾಯಕರಾಗಿದ್ದಾಗ ನಾವು ನಮ್ಮ ಪ್ರಾಣವನ್ನು ನೀಡಲು ಸಿದ್ಧರಿದ್ದೆವು ಮತ್ತು ಈಗಲೂ ನಾವು ನಾಯಕ ಬಾಬರ್ ಅಜಂಗಾಗಿ ನಮ್ಮ ಪ್ರಾಣವನ್ನು ನೀಡಲು ಸಿದ್ಧರಿದ್ದೇವೆ. ಬಾಬರ್ ಅಸಾಧಾರಣ ನಾಯಕ ಮತ್ತು ಆತನಿಗೆ ತಂಡದ ಬೆಂಬಲದ ಅಗತ್ಯವಿದೆ. ಒಂದು ತಂಡವಾಗಿ ದೇಶಕ್ಕಾಗಿ ಆಡುವುದು ಮತ್ತು ಅತ್ಯುತ್ತಮ ಪ್ರದರ್ಶನ ನೀಡುವುದು ನಮ್ಮ ಗುರಿಯಾಗಿದೆ," ಎಂದು ಶಾನ್ ಮಸೂದ್ ಅಭಿಪ್ರಾಯಪಟ್ಟಿದ್ದಾರೆ.

"ನಾವು ತಂಡದ ವಿರುದ್ಧದ ಟೀಕೆಗಳ ಕುರಿತ ಸಾಕಷ್ಟು ಸುದ್ದಿಗಳನ್ನು ನೋಡುತ್ತಿರುತ್ತೇವೆ, ಆದರೆ ನಾವು ಗುರಿ ನಮ್ಮ ದೇಶಕ್ಕಾಗಿ ಆಡುವುದರಿಂದ ನಾವು ಟೀಕಾಕಾರರಿಂದ ತೊಂದರೆಗೊಳಗಾಗುವುದಿಲ್ಲ," ಎಂದು ಶಾನ್ ಮಸೂದ್ ತಿಳಿಸಿದರು.

We Are Ready To Give Our Lives For Pakistan Team Captain Babar Azam Says Shan Masood

ಸದ್ಯ, ಬಾಬರ್ ಅಜಂ ಅವರು ವ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಪೇಶಾವರ್ ಝಲ್ಮಿ ತಂಡದ ನಾಯಕರಾಗಿದ್ದಾರೆ. ಕಳೆದ ವಾರ ಬಾಬರ್ ಅಜಂ ತಮ್ಮ ಮೇಲಿನ ಎಲ್ಲಾ ಟೀಕೆಗಳನ್ನು ನಿರಾಕರಿಸಿದರು. "ಎಲ್ಲರೂ ತಮ್ಮ ಪರವಾಗಿ ಇರಬೇಕೆಂದಿಲ್ಲ, ಹೀಗಾಗಿ ಟೀಕೆಗಳು ಸಾಮಾನ್ಯ. ನಾನು ಎಲ್ಲವನ್ನು ಧನಾತ್ಮಕವಾಗಿ ಸ್ವೀಕರಿಸುತ್ತೇನೆ," ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ತಿಳಿಸಿದ್ದರು.

ಶಾಹೀನ್ ಶಾ ಅಫ್ರಿದಿ ಶ್ಲಾಘಿಸಿದ ಶಾನ್ ಮಸೂದ್
ಪಾಕಿಸ್ತಾನ ತಂಡದ ವೇಗಿ ಶಾಹೀನ್ ಶಾ ಅಫ್ರಿದಿಯನ್ನು ರಾಷ್ಟ್ರೀಯ ತಂಡದ ಸಹ ಆಟಗಾರ ಶಾನ್ ಮಸೂದ್ ಶ್ಲಾಘಿಸಿದ್ದು, "ಪಿಎಸ್‌ಎಲ್‌ನಲ್ಲಿ ಶಾಹೀನ್ ಶಾ ಆಫ್ರಿದಿ ಇದುವರೆಗೆ ಏಳು ಪಂದ್ಯಗಳಿಂದ 10 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಶಾಹಿನ್ ಶಾ ಅಫ್ರಿದಿ ವಿರುದ್ಧ ಆಡುವುದು ತುಂಬಾ ಕಷ್ಟ ಮತ್ತು ಅವರು ಪ್ರಸ್ತುತ ವಿಶ್ವದ ನಂಬರ್ 1 ಬೌಲರ್," ಎಂದು ಶಾನ್ ಮಸೂದ್ ಹೇಳಿದ್ದಾರೆ.

Story first published: Monday, March 6, 2023, 15:00 [IST]
Other articles published on Mar 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+