For Quick Alerts
ALLOW NOTIFICATIONS  
For Daily Alerts
 

'ಬಾಬರ್ ಅಜಂಗಿಂತ ಹೆಚ್ಚು ನಿಮ್ಮನ್ನು ಪ್ರೀತಿಸುತ್ತೇವೆ'; ಕೊಹ್ಲಿಗೆ ಪಾಕ್ ಅಭಿಮಾನಿಗಳ ವಿಶೇಷ ಸಂದೇಶ

We Love you More Than Babar Azam; Pakistan Fans Message To Virat Kohli During England vs Pakistan Match

ಸೋಮವಾರ, ಡಿಸೆಂಬರ್ 12ರಂದು ಮುಲ್ತಾನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು 26 ರನ್‌ಗಳಿಂದ ಗೆದ್ದು ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-0ರಲ್ಲಿ ಮುನ್ನಡೆ ಸಾಧಿಸಿದೆ.

17 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ತಂಡ ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 74 ರನ್‌ಗಳಿಂದ ಗೆದ್ದುಕೊಂಡಿತ್ತು. ಇದೀಗ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು ಇನ್ನೂ ಒಂದು ಬಾಕಿ ಇರುವಂತೆಯೇ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ.

IND vs BAN 1st Test: ಭಾರತದ ಸಂಭಾವ್ಯ ಆಡುವ 11ರ ಬಳಗ; 12 ವರ್ಷಗಳ ನಂತರ ಈ ಬೌಲರ್‌ಗೆ ಸ್ಥಾನ?

ಮುಲ್ತಾನ್‌ನಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಪಾಕಿಸ್ತಾನದ ಇಬ್ಬರು ಅಭಿಮಾನಿಗಳು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶಿಷ್ಟ ಸಂದೇಶ ನೀಡಿದ್ದಾರೆ.

ಹಾಯ್! ಕಿಂಗ್ ಕೊಹ್ಲಿ, ಏಷ್ಯಾ ಕಪ್ ಆಡಲು ಬನ್ನಿ

ಈ ಪಂದ್ಯದ ವೇಳೆ ಅಭಿಮಾನಿಗಳಿಬ್ಬರು ಫಲಕಗಳನ್ನು ಹಿಡಿದು, "ಹಾಯ್! ಕಿಂಗ್ ಕೊಹ್ಲಿ, ಏಷ್ಯಾ ಕಪ್ ಆಡಲು ಬನ್ನಿ. ನಾವು ನಮ್ಮ ನಾಯಕ ಬಾಬರ್‌ ಅಜಂಗಿಂತ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇವೆ," ಎಂಬ ಭಾವನಾತ್ಮಕ ಸಂದೇಶ ಬರೆದು ಪ್ರದರ್ಶಿಸಿದರು.

ಅಕ್ಟೋಬರ್‌ನಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು 2023ರ ಏಷ್ಯಾ ಕಪ್ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ನಡೆಸುವ ಬದಲು ತಟಸ್ಥ ಸ್ಥಳದಲ್ಲಿ ನಡೆಸಬಹುದು ಎಂದು ಸೂಚಿಸಿದ್ದರು. 2023ರ ಏಷ್ಯಾಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಭಾರತದ ನಿಲುವಿನಿಂದ ಪಾಕಿಸ್ತಾನಕ್ಕೆ ದೊಡ್ಡ ನಷ್ಟ ಉಂಟಾಗಲಿದೆ.

ಭಾರತಕ್ಕೆ ಪಾಕಿಸ್ತಾನ ತಂಡದ ಪ್ರವಾಸದ ಮೇಲೆ ಪರಿಣಾಮ

ಭಾರತಕ್ಕೆ ಪಾಕಿಸ್ತಾನ ತಂಡದ ಪ್ರವಾಸದ ಮೇಲೆ ಪರಿಣಾಮ

ಏಷ್ಯಾ ಕಪ್ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ನಡೆಸುವ ಕುರಿತು ಜಯ್ ಶಾ ಹೇಳಿಕೆಯ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರತಿಕ್ರಿಯೆ ನೀಡಿದ್ದು, ಇದು 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ಪಾಕಿಸ್ತಾನ ತಂಡದ ಪ್ರವಾಸದ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದೆ.

"ಜಯ್ ಶಾ ಅವರ ಇಂತಹ ಹೇಳಿಕೆಗಳು ಏಷ್ಯನ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಸಮುದಾಯಗಳನ್ನು ವಿಭಜಿಸುವ ಸಾಮರ್ಥ್ಯವನ್ನು ಹೊಂದಿದೆ. 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಮತ್ತು 2024-2031ರ ಚಕ್ರದಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಟೂರ್ನಿಗಳಿಗೆ ಭಾರತಕ್ಕೆ ಪಾಕಿಸ್ತಾನ ತಂಡ ಪ್ರವಾಸ ಕೈಗೊಳ್ಳದಿರಬಹುದು," ಎಂಬ ಎಚ್ಚರಿಕೆಯನ್ನು ಪಿಸಿಬಿ ನೀಡಿತ್ತು.

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪ್ರತಿಕ್ರಿಯೆ

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪ್ರತಿಕ್ರಿಯೆ

ಪಿಸಿಬಿ ಹೇಳಿಕೆಯ ನಂತರ, ಭಾರತದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪ್ರತಿಕ್ರಿಯಿಸಿದ್ದು, 2023ರ ವಿಶ್ವಕಪ್ ಪಂದ್ಯಾವಳಿಯನ್ನು ಭಾರತವು ಎಲ್ಲಾ ತಂಡಗಳೊಂದಿಗೆ ಆಯೋಜಿಸುತ್ತದೆ ಎಂದು ಹೇಳಿದ್ದರು.

"ಇದು ಬಿಸಿಸಿಐನ ಆಂತರಿಕ ವಿಷಯವಾಗಿದೆ ಮತ್ತು ಅದು ಸಮಸ್ಯೆಯನ್ನು ಬುದ್ಧಿವಂತಿಕೆಯಿಂದ ನಿಭಾಯಿಸಲಿದೆ. ಈ ಮೊದಲು ಅಂತಾರಾಷ್ಟ್ರೀಯ ಪಂದ್ಯಾವಳಿಗಳನ್ನು ಆಯೋಜಿಸುವಾಗ ನಾವು ಯಾವುದೇ ತಪ್ಪು ಮಾಡಿಲ್ಲ. ನಾವು ಈ ಮೊದಲು ವಿಶ್ವಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ, ಎಲ್ಲಾ ತಂಡಗಳು ಸಂತೋಷದಿಂದ ಭಾಗವಹಿಸಿವೆ. ನಾವು ಮುಂದಿನ ವರ್ಷ ಪಂದ್ಯಾವಳಿಯನ್ನು ಆಯೋಜಿಸುತ್ತೇವೆ ಮತ್ತು ಎಲ್ಲಾ ತಂಡಗಳು ಇದರಲ್ಲಿ ಆಡುತ್ತವೆ," ಎಂದು ಅನುರಾಗ್ ಠಾಕೂರ್ ತಿಳಿಸಿದ್ದರು.

ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತ

ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತ

ಇನ್ನು ಈ ಕುರಿತು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮಾತನಾಡಿ, 2023ರ ಏಷ್ಯಾ ಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದು ಬಿಸಿಸಿಐ ನಿರ್ಧರಿಸುವುದಿಲ್ಲ, ನಾವು ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿದ್ದೇವೆ ಎಂದು ಹೇಳಿದರು.

"ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದು ನಮ್ಮ ನಿರ್ಧಾರವಲ್ಲಿ. ನಮ್ಮ ತಂಡ ಎಲ್ಲಿಗೆ ಹೋಗಬೇಕು ಎಂದು ನಾವು ಹೇಳಲಾಗುವುದಿಲ್ಲ. ಭಾರತ ತಂಡ ಬೇರೆ ದೇಶದ ಪ್ರವಾಸ ಮಾಡಬೇಕೆಂದರೆ ಅಥವಾ ಇತರ ದೇಶಗಳ ತಂಡಗಳು ಇಲ್ಲಿಗೆ ಬರಬೇಕಾದರೆ ಕೇಂದ್ರ ಸರ್ಕಾರದಿಂದ ಕ್ಲಿಯರೆನ್ಸ್ ತೆಗೆದುಕೊಳ್ಳಬೇಕು. ಹೀಗಾಗಿ 2023ರ ಏಷ್ಯಾ ಕಪ್‌ಗಾಗಿ ಹೋಗುವ ನಿರ್ಧಾರವನ್ನು ನಾವೇ ತೆಗೆದುಕೊಳ್ಳುವುದಿಲ್ಲ, ನಾವು ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿದ್ದೇವೆ," ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ತಿಳಿಸಿದ್ದಾರೆ.

Story first published: Tuesday, December 13, 2022, 12:14 [IST]
Other articles published on Dec 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+